Asianet Suvarna News Asianet Suvarna News

ಗುರು ಶಿಷ್ಯರು; ಚಿತ್ರದ ಬಗ್ಗೆ ಶಿಷ್ಯರು ಹೇಳಿದ್ದೇನು ನೋಡಿ

ಗುರು ಶಿಷ್ಯರು ಸಿನಿಮಾ ಸೂಪರ್ ಹಿಟ್ ಆಗಿದೆ. ಇಡೀ ಸಿನಿಮಾತಂಡ ಸಂತಸದ ಅಲೆಯಲ್ಲಿ ತೇಲುತ್ತಿದೆ. ನಟ ಶರಣ್ ಮತ್ತು ನಟಿ ನಿಶ್ವಿಕಾ ನಾಯ್ಡು ಸಿನಿಮಾ ಸಕ್ಸಸ್ ನ ಖುಷಿಯಲ್ಲಿದ್ದಾರೆ.

Oct 4, 2022, 5:13 PM IST

ಗುರು ಶಿಷ್ಯರು ಸಿನಿಮಾ ಸೂಪರ್ ಹಿಟ್ ಆಗಿದೆ. ಇಡೀ ಸಿನಿಮಾತಂಡ ಸಂತಸದ ಅಲೆಯಲ್ಲಿ ತೇಲುತ್ತಿದೆ. ನಟ ಶರಣ್ ಮತ್ತು ನಟಿ ನಿಶ್ವಿಕಾ ನಾಯ್ಡು ಸಿನಿಮಾ ಸಕ್ಸಸ್ ನ ಖುಷಿಯಲ್ಲಿದ್ದಾರೆ. ಜಡೇಶ್ ಸಾರಥ್ಯದಲ್ಲಿ ಬಂದ ಗುರು ಶಿಷ್ಯರು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ಸಕ್ಸಸ್ ಬಗ್ಗೆ ಸಿನಿಮಾತಂಡ ಸುವರ್ಣ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ. ನಟಿ ನಿಶ್ವಿಕಾ ನಾಯ್ಡು ಮಾತನಾಡಿ ಈ ಸಿನಿಮಾಗಾಗಿ ತುಂಬಾ ತಯಾರಿ ಮಾಡಿಕೊಂಡಿದ್ದೆ, ನಿರ್ದೇಶಕ ಜಡೇಶ್ ಒಂದಿಷ್ಟು ತಯಾರಿ ಬಗ್ಗೆ ಹೇಳಿದ್ದರು ಎಂದರು. ಇನ್ನು ನಟ ಶರಣ್ ಕೂಡ ಒಂದಿಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ತೆರೆದಿದ್ದರು. ಸಿನಿಮಾದ ನಿರ್ಮಾಪಕ ನಂದಕಿಶೋರ್ ಕೂಡ ಒಂದಿಷ್ಟು ಮಾಹಿತಿಯನ್ನು ಶೇರ್ ಮಾಡಿದ್ದಾರೆ.