ನನ್ನ ಸಿನಿಮಾಗಳು ಅಂದ್ರೆ ಮೊದ್ಲು ನಾಯಕಿಯರೇ ಸಿಕ್ತಿರಲಿಲ್ಲ, 'ಅವತಾರ ಪುರುಷ' ಟ್ರೇಲರ್‌ನಲ್ಲಿ ಶರಣ್

ಶರಣ್ ಕನ್ನಡ ಸಿನಿ ರಸಿಕರಿಗೆ ಮನರಂಜನೆಯ ಹೊಳೆ ಹರಿಸೋ ಕಾಮಿಡಿ ಅಧ್ಯಕ್ಷ. ಹಾಸ್ಯ ಪ್ರಧಾನ ಕ್ಯಾರೆಕ್ಟರ್ ಮೂಲಕ ಬೆಳ್ಳಿತೆರೆಯಲ್ಲಿ ವಿಜೃಂಭಿಸುತ್ತಿರೋ ಶರಣ್ ಇಂದು ಬಾಕ್ಸಾಫೀಸ್ನಲ್ಲಿ ಹತ್ತಾರು ಕೋಟಿ ಕಲೆಕ್ಷನ್ ಮಾಡೋ ಸ್ಟಾರ್ ಹೀರೋ ಆಗಿದ್ದಾರೆ.

Share this Video
  • FB
  • Linkdin
  • Whatsapp

ಶರಣ್ ಕನ್ನಡ ಸಿನಿ ರಸಿಕರಿಗೆ ಮನರಂಜನೆಯ ಹೊಳೆ ಹರಿಸೋ ಕಾಮಿಡಿ ಅಧ್ಯಕ್ಷ. ಹಾಸ್ಯ ಪ್ರಧಾನ ಕ್ಯಾರೆಕ್ಟರ್ ಮೂಲಕ ಬೆಳ್ಳಿತೆರೆಯಲ್ಲಿ ವಿಜೃಂಭಿಸುತ್ತಿರೋ ಶರಣ್ ಇಂದು ಬಾಕ್ಸಾಫೀಸ್ನಲ್ಲಿ ಹತ್ತಾರು ಕೋಟಿ ಕಲೆಕ್ಷನ್ ಮಾಡೋ ಸ್ಟಾರ್ ಹೀರೋ ಆಗಿದ್ದಾರೆ.

ತನ್ನ 32 ವರ್ಷದ ಸಿನಿ ಕರಿಯರ್ನಲ್ಲಿ ನಾನಾವತಾರ ಎತ್ತಿ, ಸಿನಿ ಪ್ರೇಕ್ಷಕರ ಹಾರ್ಟ್ಗೆ ಅಟ್ಯಾಕ್ ಮಾಡಿರೋ ಶರಣ್, ಈಗ ಅವತಾರ ಪುರುಷನಾಗಿ ನಿಮ್ಗೆಲ್ಲಾ ಎಂಟರ್ಟೈನ್ ಮಾಡೋಕೆ ಸಿದ್ಧರಾಗಿದ್ದಾರೆ. ಈ ಅವತಾರ ಪುರುಷನಿಗೆ ಆಂಜನೇಯನ ಪರಮ ಭಕ್ತ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾರ ಬಲ ಸಿಕ್ಕಿದೆ.

ತಮ್ಮದೇ ಸ್ಟೈಲ್‌ನಲ್ಲಿ ಡೈಲಾಗ್ ಹೊಡೆದ ನಟ ಸಾಯಿ ಕುಮಾರ್

ಶರಣ್ರನ್ನ ಇಷ್ಟ ಪಡದೇ ಇರೋದಕ್ಕೆ ಕಾರಣಗಳೇ ಇಲ್ಲ. ನವರಸಗಳಲ್ಲೂ ಒಟ್ಟಿಗೆ ಹಾಕಿ ರುಬ್ಬಿದ್ರೆ ಸಿರೋ ಪದಾರ್ಥವೇ ಶರಣ್. ಹೀಗಾಗಿ ವಿಕ್ಟರಿ ಹೀರೋನ ಸಿನಿಮಾಗಳನ್ನ ಮನೆಮಂದಿಯೆಲ್ಲಾ ನೋಡಿ ಖುಷಿ ಪಡ್ತಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ ಶರಣ್ರ ಅವತಾರ ಪುರುಷ ಟ್ರೈಲರ್ ರಿಲೀಸ್ ಮಾಡಿರೋ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೇಳೋ ಮಾತುಗಳು.. ಶರಣ್ರ ಸಿನಿಮಾ ಬಂದ್ರೆ ನನ್ನ ಪತ್ನಿ ಕಾಲೇಜಿಗೆ ಬಂಕ್ ಹಾಕಿ ನನ್ನನ್ನ ವಿಕ್ಟರಿ ಸ್ಟಾರ್ ಶರಣ್ ಹಾಗು ಚುಟು ಚುಟು ಬ್ಯೂಟಿ ಆಶಿಕಾ ರಂಗನಾಥ್ ಕಾಂಬೋ ಅಂದ್ರೆ ಅವ್ರ ಸಿನಿಮಾ ಮೇಲೆ ದೊಡ್ಡ ನಿರೀಕ್ಷೆ ಇರುತ್ತೆ. ಇವ್ರಿಬ್ರ ಮಧ್ಯೆ ಕೆಮಿಸ್ಟ್ರಿ ಸಖತ್ ಆಗೆ ವರ್ಕೌಟ್ ಆಗುತ್ತೆ. ಈಗ ಅವತಾರ ಪುರುಷನಲ್ಲೂ ಆಶಿಕಾ ಶರಣ್ ಜೋಡಿ ಕಮಾಲ್ ಮಾಡಲಿದೆ ಅನ್ನೋದು ಟ್ರೈಲರ್ನಲ್ಲೇ ಪ್ರ್ಯೂ ಆಗಿದೆ. 

ಅವತಾರ ಸಿನಿಮಾ ಬಗ್ಗೆ ಮಾತು ಶುರು ಮಾಡಿದ ಶರಣ್ ತಾವು ನಾಯಕನಾಗಿ ನಟಿಸೋ ಸಿನಿಮಾದಲ್ಲಿ ಹೀರೋಯಿನ್ಗಳ ವಿಷಯದ ಬಗ್ಗೆ ಒಂದು ಗುಟ್ಟನ್ನ ಬಿಟ್ಟುಕೊಟ್ಟಿದ್ದಾರೆ. ಮೊದ ಮೊದಲು ಶರಣ್ ಸಿನಿಮಾ ಅಂದ್ರೆ ನಾಯಕಿಯರೇ ಸಿಕ್ತಿರಲಿಲ್ಲ. ಬಾಂಬೆ ಹೀರೋಯಿನ್ಗಳು ಕೂಡ ನನ್ನ ಸಿನಿಮಾಗಳನ್ನ ರಿಜೆಕ್ಟ್ ಮಾಡ್ತಿಡ್ರು ಅಂತ ಶರಣ್ ಹೇಳಿದ್ದಾರೆ. ಅಷ್ಟೆ ಅಲ್ಲ ಧ್ರುವನ ಬಗ್ಗೆ ಮಾತನಾಡಿರೋ ಶರಣ್ ಆಕ್ಷನ್ ಪ್ರಿನ್ಸ್ ಧ್ರುವ ಇದ್ದಲ್ಲಿ ಯಾವಾಗ್ಲು ಪಾಸಿಟಿವಿಟಿ ಇರುತ್ತೆ ಅಂದ್ರು. 

Related Video