ಥಿಯೇಟರ್ ಅಂಗಳದಲ್ಲಿ ‘ಛೂ ಮಂತರ್’ ಮ್ಯಾಜಿಕ್! ಹಾರರ್ ಥ್ರಿಲ್ಲರ್ ಜೊತೆ ಶರಣ್-ಚಿಕ್ಕಣ್ಣ ಕಾಮಿಡಿ ಕಿಕ್
ಶರಣ್ ಮತ್ತು ಅದಿತಿ ಪ್ರಭುದೇವ ನಟಿಸಿರುವ ಛೂ ಮಂತರ್ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ಮೇಘನಾ ಗಾಂವ್ಕರ್ ಮತ್ತು ಚಿಕ್ಕಣ್ಣ ಕೂಡ ನಟಿಸಿದ್ದು, ಶರಣ್-ಚಿಕ್ಕಣ್ಣ ಕಾಮಿಡಿ ಪ್ರಮುಖ ಆಕರ್ಷಣೆಯಾಗಿದೆ.
ನಟ ಶರಣ್ ಮತ್ತು ಅದಿತಿ ಪ್ರಭುದೇವ ಜೋಡಿಯಾಗಿ ನಟಿಸಿರುವ ಛೂ ಮಂತರ್ ಸಿನಿಮಾ ಯಶಸ್ವಿ ಪ್ರದರ್ಶನ ಪಡೆಯುತ್ತಿದೆ. ಈ ಚಿತ್ರದಲ್ಲಿ ಮೇಘನಾ ಗಾಂವ್ಕರ್ ಮತ್ತು ಚಿಕ್ಕಣ್ಣ ನಟಿಸಿದ್ದಾರೆ. ಬಾಲಿವುಡ್ ಹಾರರ್ ಸಿನಿಮಾ ರೀತಿ ಇರುವ ಈ ಕನ್ನಡ ಸಿನಿಮಾ ಕನ್ನಡಿಗರ ಮನಸ್ಸು ಗೆದ್ದಿದೆ. ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಕಲೆಕ್ಷನ್ ಮಾಡುತ್ತಿರುವ ಈ ಚಿತ್ರಕ್ಕೆ ಕರ್ವ ನವನೀತ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ಬಿಗ್ ಹೈಲೈಟ್ ಶರಣ್ ಮತ್ತು ಚಿಕ್ಕಣ್ಣ ಕಾಮಿಡಿ ಎನ್ನಬಹುದು. ಚಿತ್ರದ ಹಾಡುಗಳು ಈಗಾಗಲೆ ಒಳ್ಳೆ ಪ್ರತಿಕ್ರಿಯೆ ಪಡೆಯುತ್ತಿದೆ. ಹೀಗಾಗಿ ಛೂ ಮಂತರ್ ಮ್ಯಾಜಿಕ್ ನೋಡಿ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.