Asianet Suvarna News Asianet Suvarna News

'ಕೆಡಿ' ಚಿತ್ರ ತಂಡದ ಜತೆ ಸಂಜಯ್ ದತ್ ಪಾರ್ಟಿ: ಧ್ರುವ ಸರ್ಜಾ ಗೈರಾಗಿದ್ದು ಯಾಕೆ?

'ಕೆಡಿ' ಸಿನಿಮಾದ ಶೂಟಿಂಗ್'ಗಾಗಿ ಬೆಂಗಳೂರಿಗೆ ಬಂದಿರುವ ಬಾಲಿವುಡ್ ನಟ ಸಂಜಯ್ ದತ್, ಕೆಡಿ ಚಿತ್ರ ತಂಡದ ಜತೆ ಪಾರ್ಟಿ ಮಾಡಿದ್ದಾರೆ. 

ಬಾಲಿವುಡ್ ಬಾಬ ಸಂಜಯ್ ಫ್ರೀ ಇದ್ದಾಗೆಲ್ಲಾ ಪಾರ್ಟಿ ಮೂಡ್'ಗೆ ಜಾರಿ ಬಿಡ್ತಾರೆ. ಇದೀಗ ಬೆಂಗಳೂರಿನಲ್ಲಿ ಕೆಡಿ ಶೂಟಿಂಗ್'ನಲ್ಲಿರೋ ಸಂಜಯ್ ದತ್, ದಿ ಶೋ ಮ್ಯಾನ್ ಪ್ರೇಮ್ ಕುಟುಂಬದ ಜತೆ ಪಾರ್ಟಿ ಮಾಡಿದ್ದಾರೆ. ಈ ಪಾರ್ಟಿಯಲ್ಲಿ ರಕ್ಷಿತ್ ಪ್ರೇಮ್, ಜೋಗಿ ಪ್ರೇಮ್ ಭಾಮೈದ ರಾಣಾ ಇದ್ದಾರೆ. ಆದ್ರೆ ಆಕ್ಷನ್ ಪ್ರಿನ್ಸ್ ಧ್ರುವ ಮಾತ್ರ ಈ ಪಾರ್ಟಿಗೆ ಗೈರಾಗಿದ್ದಾರೆ.  ಇಂತಹ ನೈಟ್ ಲೈಫ್'ನಿಂದ ಧ್ರುವ ಸರ್ಜಾ ಸ್ವಲ್ಪ ದೂರ. ಧ್ರುವ ಅವರದ್ದು ಜಿಮ್, ಅರ್ಕೌಟ್, ಶೂಟಿಂಗ್ ಅಷ್ಟೆ. ಹೀಗಾಗಿ ಕೆಡಿ ಸೆಟ್ಟಿನಲ್ಲಿ ಸಂಜಯ್ ದತ್'ಗೆ ಒಂದು ಸೆಲ್ಯೂಟ್ ಹೊಡೆದು ಬಂದಿದ್ದ ಧ್ರುವ, ಸಂಜು ಬಾಬನ ಪಾರ್ಟಿಗೆ ಗೈರಾಗಿದ್ರಂತೆ.

Video Top Stories