Asianet Suvarna News Asianet Suvarna News

ನಕಲಿ ನಂಬರ್‌ ಪ್ಲೇಟ್‌ ಗೋಲ್ಮಾಲ್: ಟ್ರಾಫಿಕ್‌ ದಂಡ ಪಾವತಿಗೆ ಬಂದವರಿಗೆ ಶಾಕ್

ಟ್ರಾಫಿಕ್‌ ದಂಡ ಪಾವತಿಗೆ ಬಂದವರಿಗೆ 50% ಆಫರ್‌ ನೀಡಲಾಗಿದ್ದು, ದಂಡ ಪಾವತಿ ಕಟ್ಟಲು ಬಂದ ಸವಾರರಿಗೆ ಶಾಕ್‌ ಎದುರಾಗಿದೆ.

ಕರ್ನಾಟಕದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣದ ಬಾಕಿ ದಂಡ ಪಾವತಿಗೆ ರಾಜ್ಯ ಸರ್ಕಾರವು ಶೇಕಡ 50ರಷ್ಟು ವಿನಾಯಿತಿ ಪ್ರಕಟಿಸಿದೆ. ಆದರೆ 50% ಟ್ರಾಫಿಕ್‌ ದಂಡ ಪಾವತಿಗೆ ಬಂದವರಿಗೆ ಶಾಕ್ ಎದುರಾಗಿದ್ದು, ನಕಲಿ ನಂಬರ್‌ ಪ್ಲೇಟ್‌ ಹಾವಳಿಯ ಕರಾಳ ಮುಖ ಬಯಲಾಗಿದೆ. ನಕಲಿ ನಂಬರ್‌ ಪ್ಲೇಟ್‌ ನೋಡಿ ಸವಾರರು ಸುಸ್ತಾಗಿದ್ದು, ನಕಲಿ ರಿಜಿಸ್ಟ್ರೇಷನ್‌ ಬೋರ್ಡ್‌ ಕರಾಮತ್ತು ಕಂಡು ದಂಡ ಪಾವತಿ ಮಾಡಲ್ಲ ಎಂದು ವಾಹನ ಸವಾರರು ಪಟ್ಟು ಹಿಡಿದಿದ್ದಾರೆ. ಫೆಬ್ರವರಿ 11ರಂದು 50% ಆಫರ್‌ನ ಕೊನೆಯ ದಿನಾಂಕವಾಗಿದ್ದು, ನಿಗದಿತ ಅವಧಿ ವಿಸ್ತರಿಸುವಂತೆ ವಾಹನ ಸವಾರರು ಒತ್ತಾಯ ಮಾಡಿದ್ದಾರೆ.