'ಮ್ಯಾಕ್ಸ್' ಸೂಪರ್​ ಹಿಟ್ ಆಯ್ತು, ಕಿಚ್ಚ ಸುದೀಪ್ ಈಗೇನ್‌ ಮಾಡ್ತಿದಾರೆ?

ಬಾದ್​ ಷಾ ಸುದೀಪ್​​ ಸಿಸಿಎಲ್​​ ಬಳಿಕ ಬಿಲ್ಲ ರಂಗ ಬಾಷಾ ಕಹಳೆ ಊದುತ್ತಿದ್ದಾರೆ. ನಿರ್ದೇಶಕ ಅನೂಪ್​ ಬಂಡಾರಿ ಜೊತೆಗಿನ ಈ ಡ್ರೀಮ್ ಪ್ರಾಜೆಕ್ಟ್​​​​​ನ ಪೊಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಿವೆ. ಬೆಂಗಳೂರಿನಲ್ಲೇ ಸಿನಿಮಾದ ಸೆಟ್​ ವರ್ಕ್​ ನಡೀತಿದೆ...

Share this Video
  • FB
  • Linkdin
  • Whatsapp

2024ರ ಕೊನೆಯಲ್ಲಿ ಬಂದು ಯಾರೂ ನಿರೀಕ್ಷೆ ಮಾಡದ ಹಾಗೆ ಸೂಪರ್ ಡೂಪರ್​ ಹಿಟ್​​​​​ ಕೊಟ್ಟ ಕಿಚ್ಚ ಸುದೀಪ್ (Kichcha Sudeep) ಈಗ ಏನ್ ಮಾಡುತ್ತಿದ್ದಾರೆ.? ಕಿಚ್ಚನ ಮುಂದಿನ ಪ್ಲ್ಯಾನ್ ಏನು..? ಇಡೀ ಸ್ಯಾಂಡಲ್​ವುಡ್​ ಈ ಬಗ್ಗೆ ತಲೆ ಕೆಡಿಸಿಕೊಂಡಿದೆ. ಅದಕ್ಕೆ ಕಾರಣ ಕನ್ನಡದರಲ್ಲಿರೋ ಬೆರಳಿಕೆ ಸ್ಟಾರ್ಸ್​ ಹಾಗು ಅವರಿಗಾಗಿ ನಿರ್ದೇಶನ ಮಾಡಲು ಕಾಯುತ್ತಿರೋ ಡೈರೆಕ್ಟರ್ಸ್​ ಹಾಗು ಪ್ರೊಡ್ಯೂಸರ್ಸ್​.. ಸುದೀಪ್ ಮ್ಯಾಕ್ಸ್​​ ಸೂಪರ್ ಹಿಟ್ ಕೊಟ್ಟಾಗಿದೆ. ಕಿಚ್ಚ ವಾಟ್​ ನೆಕ್ಸ್ಟ್​ ಅಂದವರಿಗೆ ಸುದೀಪ್ ಕಾಣಿಸಿಕೊಂಡಿದ್ದು ಕ್ರಿಕೆಟ್ ಮೈದಾನದಲ್ಲಿ.. 

ಮ್ಯಾಕ್ಸ್​ ಸಿನಿಮಾ ಬಾಕ್ಸಾಫೀಸ್​​ನಲ್ಲಿ 100 ಕೋಟಿ ಕಲೆಕ್ಷನ್ ಸನಿಹದಲ್ಲಿದೆ. ಸುದೀಪ್​ ಬಾಕ್ಸಾಫೀಸ್​​ ಸುಲ್ತಾನ್ ಅನ್ನೋ ಪಟ್ಟಕ್ಕೇರಿದ್ದಾರೆ. ಇದೀಗ ಮ್ಯಾಕ್ಸ್​ ಸಕ್ಸಸ್​ ಖುಷಿಯಲ್ಲಿ ಕಿಚ್ಚ ಬ್ಯಾಟ್ ಹಿಡಿದು ಕ್ರಿಕೆಟ್ ಅಂಗಳಕ್ಕೆ ಬಂದಿದ್ದಾರೆ. ಫೆಬ್ರವರಿ ಕೊನೆ ವಾರದಿಂದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಶುರುವಾಗುತ್ತಿದ್ದು, ಕಿಚ್ಚ ತನ್ನ ತಂಡ ಕಟ್ಟಿಕೊಂಡು ಫುಲ್ ಟೈಮ್ ಕ್ರಿಕೆಟರ್ ಆಗಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ.

ಉಪೇಂದ್ರ ಬಗ್ಗೆ ಕಿಚ್ಚ ಸುದೀಪ್ ಆಡಿರುವ ಈ ಮಾತು ಈಗ ಗಲ್ಲಿಗಲ್ಲಿಯಲ್ಲೂ ಗುಲ್ಲು! 

ಬಾದ್​ ಷಾ ಸುದೀಪ್​​ ಸಿಸಿಎಲ್​​ ಬಳಿಕ ಬಿಲ್ಲ ರಂಗ ಬಾಷಾ ಕಹಳೆ ಊದುತ್ತಿದ್ದಾರೆ. ನಿರ್ದೇಶಕ ಅನೂಪ್​ ಬಂಡಾರಿ ಜೊತೆಗಿನ ಈ ಡ್ರೀಮ್ ಪ್ರಾಜೆಕ್ಟ್​​​​​ನ ಪೊಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಿವೆ. ಬೆಂಗಳೂರಿನಲ್ಲೇ ಸಿನಿಮಾದ ಸೆಟ್​ ವರ್ಕ್​ ನಡೀತಿದೆ. ಫೇಮಸ್ ಆರ್ಟ್​ ಡೈರೆಕ್ಟರ್ ಶಿವಕುಮಾರ್​ ಬಿಲ್ಲ ರಂಗ ಬಾಷನಿಗೆ ಸೆಟ್ ಹಾಕುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ಬಿಲ್ಲ ರಂಗ ಬಾಷಾ ಕನ್ನಡದ ಬಿಗ್ ಬಜೆಟ್ ಸಿನಿಮಾ ಆಗುತ್ತಿದೆ. 

ವಿಕ್ರಾಂತ್​ ರೋಣ ಸಿನಿಮಾದ ಜೋಡಿ ಬಿಲ್ಲ ರಂಗ ಬಾಷಾಕ್ಕೆ ಓಂಕಾರ ಹಾಕಿದೆ. ಈ ಸಿನಿಮಾ ಭವಿಷ್ಯದ ಕಥೆ ಇರಲಿದೆ. 1924ರಿಂದ ಈವರೆಗೆ 100 ವರ್ಷಗಳಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಯಾರೂ ಊಹಿಸದ ತಂತ್ರಜ್ಞಾನಗಳು ಬಂದಿವೆ. ಅದೇ ರೀತಿ ಮುಂದಿನ 100 ವರ್ಷಗಳಲ್ಲಿ ಇನ್ನಷ್ಟು ಬದಲಾವಣೆಗಳು ಆಗಬಹುದು. ಇದೇ ಕಲ್ಪನೆಯಲ್ಲಿ 'ಬಿಲ್ಲ ರಂಗ ಬಾಷಾ' ಸಿನಿಮಾ ಮೂಡಿ ಬರುತ್ತಿದೆ ಅಂತ ಡೈರೈಕ್ಟರ್​ ಅನೂಪ್ ಬಂಡಾರಿ ಹೇಳಿದ್ರು. ಈಗ ಆ ಭವಿಷ್ಯದ ಕಥೆಗೆ ಏಪ್ರಿಲ್​​ನಿಂದ ಶೂಟಿಂಗ್ ಶುರುವಾಗುತ್ತಿದೆ. 

Related Video