
ಸೂತ್ರಧಾರ ಇಲ್ಲದ ಸ್ಯಾಂಡಲ್ವುಡ್ಗೆ ಹೊಸ ಸೂತ್ರಧಾರ: ಟೈಟಲ್ ಸಾಂಗ್ ರಿಲೀಸ್
ಸ್ಯಾಂಡಲ್ವುಡ್ಗೆ ಸೂತ್ರಧಾರ ಇಲ್ಲ. ಆದ್ರೆ ಈಗ ಸ್ಯಾಂಡಲ್ವುಡ್ನಲ್ಲಿ ಒಬ್ಬ ಹೊಸ ಸೂತ್ರಧಾರ ಹುಟ್ಟಿಕೊಂಡಿದ್ದಾನೆ. ಆ ಸೂತ್ರಧಾರ ಬೇರಾರು ಅಲ್ಲ ರಾಪ್ ಸ್ಟಾರ್ ಚಂದನ್ ಶೆಟ್ಟಿ. ಈ ಸೂತ್ರಧಾರನನ್ನ ಹುಟ್ಟುಹಾಕಿದ್ದು, ನಿರ್ಮಾಪಕ ನವರಸನ್.. ಈಗ ಈ ಸೂತ್ರಧಾರನ ಹೊಸ ಹಾಡು ಬಂದಿದೆ.
ಸ್ಯಾಂಡಲ್ವುಡ್ಗೆ ಸೂತ್ರಧಾರ ಇಲ್ಲ. ಆದ್ರೆ ಈಗ ಸ್ಯಾಂಡಲ್ವುಡ್ನಲ್ಲಿ ಒಬ್ಬ ಹೊಸ ಸೂತ್ರಧಾರ ಹುಟ್ಟಿಕೊಂಡಿದ್ದಾನೆ. ಆ ಸೂತ್ರಧಾರ ಬೇರಾರು ಅಲ್ಲ ರಾಪ್ ಸ್ಟಾರ್ ಚಂದನ್ ಶೆಟ್ಟಿ. ಈ ಸೂತ್ರಧಾರನನ್ನ ಹುಟ್ಟುಹಾಕಿದ್ದು, ನಿರ್ಮಾಪಕ ನವರಸನ್.. ಈಗ ಈ ಸೂತ್ರಧಾರನ ಹೊಸ ಹಾಡು ಬಂದಿದೆ. ಅದನ್ನೊನ್ನೆ ನೋಡಿ ಬರೋಣ ಬನ್ನಿ. ಚಂದನ್ ಶೆಟ್ಟಿ.. ಸ್ಯಾಂಡಲ್ವುಡ್ನ ರಾಪ್ ಸ್ಟಾರ್.. ಆದ್ರೆ ಈಗ ಸ್ಯಾಂಡಲ್ವುಡ್ನ ಸೂತ್ರಧಾರ. ಯಾಕಂದ್ರೆ ಚಂದನ್ ಶೆಟ್ಟಿ ಶೂತ್ರಧಾರ ಸಿನಿಮಾ ಮೂಲಕ ಹೀರೋ ಆಗಿ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಇದೀಗ ಸೂತ್ರಧಾರನ ಟೈಟಲ್ ಸಾಂಗ್ ರಿಲೀಸ್ ಆಗಿದೆ.
ಸೂತ್ರಧಾರ ಸಿನಿಮಾವನ್ನ ನಿರ್ಮಾಪಕ ಹಾಗೂ ನಿರ್ದೇಶಕರಾಗಿಯೂ ಜನಪ್ರಿಯರಾಗಿರುವ ನವರಸನ್ ನಿರ್ಮಾಣ ಮಾಡಿದ್ದಾರೆ. ಬೆಂಗಳೂರಿನ ಮಾಲ್ ಒಂದರಲ್ಲಿ ಕಾರ್ಯಕ್ರಮ ಮಾಡಿ ಸೂತ್ರಧಾರನ ಟೈಟಲ್ ಸಾಂಗ್ ರಿಲೀಸ್ ಮಾಡಿದ್ದಾರೆ. ವಿಜಯ್ ಈಶ್ವರ್ ಬರೆದಿರುವ "ಸೂತ್ರಧಾರಿ" ಶೀರ್ಷಿಕೆ ಗೀತೆಯನ್ನು ನಾಯಕ ಚಂದನ್ ಶೆಟ್ಟಿಯೇ ಹಾಡಿದ್ದು, ಸಂಗೀತ ನೀಡಿದ್ದಾರೆ. ಸೂತ್ರಧಾರಿ ಸಿನಿಮಾದಲ್ಲಿ ನಟ ಚಂದನ್ ಶೆಟ್ಟಿ ಇನ್ವೆಸ್ಟಿಗೇಷನ್ ಪೊಲೀಸ್ ಆಫೀಸರ್ ರೋಲ್ ಮಾಡಿದ್ದಾರೆ. ಅಪೂರ್ವ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಸಂಜನಾ ಆನಂದ್ ಸ್ಪೆಷಲ್ ಹಾಡೊಂದರಲ್ಲಿ ನಟಿಸಿದ್ದಾರೆ. ಸೂತ್ರಧಾರಿಗೆ ನಿರ್ದೇಶಕ ಕಿರಣ್ ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ.