
ಮುಂಗಾರು ಮಳೆಯಲ್ಲಿ ನೆಂದ ಹಾಗೆ ಇನ್ನು ಕಡಲ ಸೌಂದರ್ಯ ತೋರಿಸ್ತಾರಾ ಭಟ್ರು?
18 ವರ್ಷಗಳ ಹಿಂದೆ ಮುಂಗಾರು ಮಳೆ ಅನ್ನೋ ಇಂಡಸ್ಟ್ರಿ ಹಿಟ್ ಕೊಟ್ಟಿದ್ದ ಯೋಗರಾಜ್ ಭಟ್ ಅಂಡ್ ಈ. ಕೃಷ್ಣಪ್ಪ ಜೋಡಿ ಮತ್ತೊಮ್ಮೆ ಒಂದಾಗಿದೆ. ಈಗಾಗ್ಲೇ ಶೇ.90ರಷ್ಟು ಚಿತ್ರೀಕರಣ ಮುಗಿಸಿರೋ ಈ ಟೀಮ್, ಟೈಟಲ್ನ ರಿವೀಲ್ ಮಾಡೋ ಮೂಲಕ ಪ್ರಚಾರ ಆರಂಭಿಸಿದೆ...
18 ವರ್ಷಗಳ ಹಿಂದೆ ಮುಂಗಾರು ಮಳೆ ಅನ್ನೋ ಇಂಡಸ್ಟ್ರಿ ಹಿಟ್ ಕೊಟ್ಟಿದ್ದ ಯೋಗರಾಜ್ ಭಟ್ ಅಂಡ್ ಈ. ಕೃಷ್ಣಪ್ಪ ಜೋಡಿ ಮತ್ತೊಮ್ಮೆ ಒಂದಾಗಿದೆ. ಈ.ಕೆ ಎಂಟರ್ಟೈನ್ಮೆಂಟ್ ಸಂಸ್ಥೆ ಜೊತೆ ಕೈ ಜೋಡಿಸಿರೋ ಭಟ್ರು 'ಮನದ ಕಡಲು' ಅನ್ನೋ ಹೊಸ ಸಿನಿಮಾ ರೆಡಿಮಾಡಿದ್ದಾರೆ. ಸುಮುಖ್ ಅನ್ನೋ ನವಪ್ರತಿಭೆ ಈ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಚಿತನಾಗ್ತಾ ಇದ್ದಾನೆ.
Add Asianetnews Kannada as a Preferred Source

ರಶಿಕಾ ಶೆಟ್ಟಿ ಮತ್ತು ಅಂಜಲಿ ಅನೀಶ್ ನಾಯಕಿಯರಾಗಿ ಕಾಣಿಸಿಕೊಂಡಿದ್ದು, ರಂಗಾಯಣ ರಘು-ದತ್ತಣ್ಣ ಮುಖ್ಯ ಪಾತ್ರಗಳಲ್ಲಿದ್ದಾರೆ. ಈಗಾಗ್ಲೇ ಶೇ.90ರಷ್ಟು ಚಿತ್ರೀಕರಣ ಮುಗಿಸಿರೋ ಈ ಟೀಮ್, ಮನದ ಕಡಲು ಅನ್ನೋ ಟೈಟಲ್ನ ರಿವೀಲ್ ಮಾಡೋ ಮೂಲಕ ಪ್ರಚಾರ ಆರಂಭಿಸಿದೆ. ಇಲ್ಲಿದೆ ನೋಡಿ ಡೀಟೇಲ್ಸ್..
