Sandalwood: ಮತ ಚಲಾಯಿಸಿದ ಸ್ಯಾಂಡಲ್‌ವುಡ್ ಸೆಲೆಬ್ರೆಟೀಸ್: ಸದಾಶಿವನಗರದಲ್ಲಿ ಡಾ.ರಾಜ್ ಫ್ಯಾಮಿಲಿಯಿಂದ ಮತದಾನ

ಬೆಳ್ಳಂ ಬೆಳಗ್ಗೆ ಮತಗಟ್ಟೆಯಲ್ಲಿ ಚಂದನವನದ ತಾರೆಯರು 
ಪುಟ್ಟೇನಹಳ್ಳಿಯಲ್ಲಿ ಮತ ಚಲಾಯಿಸಿದ ಕಿಚ್ಚ ಸುದೀಪ್ 
ಅರಸೀಕೆರೆ ಕಾಳೇನಹಳ್ಳಿಯಲ್ಲಿ ವೋಟ್ ಮಾಡಿದ ಡಾಲಿ
ಮತ ಚಲಾಯಿಸಿದ ಸುಧಾರಾಣಿ , ನಟಿ ರಚಿತಾ ರಾಮ್

Share this Video
  • FB
  • Linkdin
  • Whatsapp

ಬೆಳ್ಳಂಬೆಳಗ್ಗೆ ಚಂದನವನದ ತಾರೆಯರು(Sandalwood) ಮತಗಟ್ಟೆಗೆ ತೆರಳಿ ಮತಚಲಾಯಿಸಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Sudeep) ಅವರು ಪುಟ್ಟೇನಹಳ್ಳಿಯ ಆಕ್ಸ್ಫರ್ಡ್ ಇಂಗ್ಲೀಷ್ ಶಾಲೆಯಲ್ಲಿ ಮತದಾನ ಮಾಡಿದರು. ನಟ ವೋಟ್ ಮಾಡಿದ ಗುರುತನ್ನು ತೋರಿಸಿದರು. ಡಾಲಿ ಧನಂಜಯ್ ತಮ್ಮೂರು ಅರಸೀಕೆರೆ ತಾಲೂಕು ಕಾಳೇನಹಳ್ಳಿಯಲ್ಲಿ ಕುಟುಂಬ ಸಮೇತ ತೆರಳಿ ವೋಟ್(Voting) ಮಾಡಿದ್ದಾರೆ. ನಟಿ ರಚಿತಾ ರಾಮ್ , ಸುಧಾರಾಣಿ ತಮ್ಮ ಮತಚಲಾಯಿಸಿದರು. ಎಂದಿನಂತೆ ಕ್ರೇಜಿಸ್ಟಾರ್ ರವಿಚಂದ್ರನ್(Ravichandran) ಬೆಳಗಿನ ಜಾವ ರಾಜಾಜಿನಗರದಲ್ಲಿ ತಮ್ಮ ಮತಚಲಾಯಿಸಿ ಎಲ್ಲರೂ ವೋಟ್ ಮಾಡಲೇಬೇಕು ಎಂದು ಹೇಳಿದರು. ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ಸಹ ತಂದೆಯ ಜೊತೆಗೆ ಬಂದು ಮತ ಚಲಾಯಿಸಿದರು. ರಿಯಲ್ ಸ್ಟಾರ್ ಉಪೇಂದ್ರ ,ಗೋಲ್ಡನ್ ಸ್ಟಾರ್ ಗಣೇಶ್, ಪತ್ನಿ ಶಿಲ್ಪಾ ಗಣೇಶ್, ದುನಿಯಾ ವಿಜಯ್, ನಟಿ ಅಮೂಲ್ಯ, ನಟ ಶ್ರೀಮುರಳಿ ಪತ್ನಿ ಸಮೇತರಾಗಿ ಬಂದು ಮತಚಲಾಯಿಸಿದರು.

ಪ್ರತಿ ವರ್ಷದಂತೆ ಈ ವರ್ಷವೂ ರಾಜ್ ಫ್ಯಾಮಿಲಿ ಸದಾಶಿವನಗರದಲ್ಲಿ ಮತ ಚಲಾಯಿಸಿದ್ದಾರೆ. ಅಶ್ವಿನಿ ಪುನೀತ್ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಯುವ ರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್ ಆದಿಯಾಗಿ ಬಂದು ಮತ ಚಲಾಯಿಸಿದು. ಸುಮಲತಾ ಅಂಬರೀಶ್, ನಟ ಧ್ರುವ ಸರ್ಜಾ ,ಪ್ರೇಮ್ , ರಕ್ಷಿತ ಹಾಗೂ ನಟ ಜಗ್ಗೇಶ್ ಅವರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಸಪ್ತಮಿ ಗೌಡ,ಚಂದನ್ ಶೆಟ್ಟಿ , ನಟ ದೊಡ್ಡಣ್ಣ , ನಟ ಸೃಜನ್ ಲೋಕೇಶ್ , ನಟಿ ತಾರಾ ಅನುರಾಧ ,ಉಡುಪಿಯಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ನಟಿ ಸುಧಾರಾಣಿ ,ನಟ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಕುಟುಂಬ ಸಮೇತ ಮತ ಚಲಾಯಿಸಿದರು.

ಇದನ್ನೂ ವೀಕ್ಷಿಸಿ:  Today Horoscope: ಇಂದು ಸಂಕಷ್ಟ ಹರ ಚೌತಿ ಇದ್ದು, ಈ ವ್ರತದಿಂದ ದೊರೆಯುವ ಫಲಗಳೇನು ಗೊತ್ತಾ?

Related Video