
ಹಿರಿಯ ಕಲಾವಿದನ ಮನೆ ಕಟ್ಟಲು ಸಹಾಯ ಹಸ್ತ ಚಾಚಿದ ಪುನೀತ್
ತೆರೆ ಮೇಲೆ ಸ್ಟಾರ್ ಆಗಿ ಮಿಂಚುವ ನಟರು, ನೈಜ ಜೀವನದಲ್ಲಿಯೂ ವಿಧ ವಿಧವಾಗಿ ಅಗತ್ಯ ಇರೋರಿಗೆ ಸಹಾಯ ಮಾಡುತ್ತಾರೆ. ಇದೀಗ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ತಮ್ಮ ಯುವರತ್ನ ಸಹನಟ ಹಿರಿಯ ಕಲಾವಿದ ಎಂ.ಕೆ.ಮಠ ಅವರಿಗೆ ಮನೆ ಕಟ್ಟಲು ಆರ್ಥಿಕ ಸಹಕಾರ ನೀಡುವ ಭರವಸೆ ನೀಡಿದ್ದಾರೆ.
ತೆರೆ ಮೇಲೆ ಸ್ಟಾರ್ ಆಗಿ ಮಿಂಚುವ ನಟರು, ನಿಜ ಜೀವನದಲ್ಲಿಯೂ ಅಗತ್ಯ ಇರೋರಿಗೆ ಹಲವು ರೀತಿಯಲ್ಲಿ ಸಹಾಯ ಮಾಡುತ್ತಾರೆ. ಇದೀಗ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ತಮ್ಮ ಯುವರತ್ನ ಸಹನಟ ಹಿರಿಯ ಕಲಾವಿದ ಎಂ.ಕೆ.ಮಠ ಅವರಿಗೆ ಮನೆ ಕಟ್ಟಲು ಆರ್ಥಿಕ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಆ ಮೂಲಕ ಅರ್ಧಕ್ಕೇ ನಿಂತ ಮನೆಯನ್ನು ಪೂರ್ತಿ ಮಾಡಲು ನೆರವಾಗುತ್ತಿದ್ದಾರೆ. ರಿಯಲ್ ಲೈಫಲ್ಲಿ ನೈಜ ಹೀರೋ ಆಗೋದು ಅಪ್ಪು ಅಂತವರಿಗೆ ಮಾತ್ರ ಸಾಧ್ಯ ಅಲ್ಲವೇ?
ಸಿನಿಮಾ ಹಂಗಾಮ ವೀಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ