'ಕಾಲಾಯ ನಮಃ' ಸಿನಿಮಾ ಮೂಲಕ 'ಕೋಮಲ್' ಕಮ್ ಬ್ಯಾಕ್
ಕನ್ನಡದ ಪ್ರತಿಭಾವಂತ ನಟ ಕೋಮಲ್ ಮತ್ತೆ ಸಿನಿಮಾ ರಂಗಕ್ಕೆ ಕಮ್ ಬ್ಯಾಕ್ ಆಗುತ್ತಿದ್ದು, ಅವರ ಹೊಸ ಸಿನಿಮಾ ಸೆಟ್ಟೇರಿದೆ.
ಬೆಳ್ಳಿತೆರೆಯಲ್ಲಿ ನಟ ಕೋಮಲ್ ಕಲರವ ಮತ್ತೆ ಶುರುವಾಗುತ್ತಿದೆ. ಕೋಮಲ್ ಹೀರೋ ಆಗಿ ನಟಿಸಿದ್ದ ಕೊನೆ ಸಿನಿಮಾ ಕೆಂಪೇಗೌಡ. 2019ರಲ್ಲಿ ಕೆಂಪೇಗೌಡನಾಗಿದ್ದ ಕೋಮಲ್ ಆ ನಂತರ ಕಣ್ಮರೆಯಾಗಿದ್ರು. ಕಳೆದ ಆರೇಳು ವರ್ಷಗಳಿಂದ ಕೋಮಲ್ ಯಾವ್ ಸಿನಿಮಾ ಮಾಡಿದ್ರೂ, ಗೆಲುವಿನ ಹಾರ ಬೀಳಲೇ ಇಲ್ಲ. ಇದೀಗ ಮತ್ತೆ ಹೀರೋ ಆಗಿ ಅವರು ನಟಿಸುತ್ತಿದ್ದು, ಸಿನಿಮಾಗೆ 'ಕಾಲಾಯ ನಮಃ' ಎಂದು ಹೆಸರಿಡಲಾಗಿದೆ. ಸಿನಿಮಾಗೆ ಅವರ ಪತ್ನಿ ಅನುಸೂಯಾ ಬಂಡವಾಳ ಹೂಡುತ್ತಿದ್ದು, ಅಷ್ಟೇ ಅಲ್ಲ ಕೋಮಲ್ ಬೇರೆ-ಬೇರೆ ನಿರ್ದೇಶಕರ ಜೊತೆ ಒಟ್ಟು ನಾಲ್ಕು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರಂತೆ.