Asianet Suvarna News Asianet Suvarna News

ದುಬೈನ ಅನಿಮಲ್ ಝೂನಲ್ಲಿ ನಟ ದರ್ಶನ್: ಪ್ರಾಣಿಗಳ ಜೊತೆ ಟೈಮ್ ಪಾಸ್!

ನಟ ದರ್ಶನ್ ಕಾಟೇರ ಗೆದ್ದ ಖುಷಿಯಲ್ಲಿದ್ದಾರೆ. ಗಲ್ಫ್ ದೇಶದಲ್ಲೂ ಕಾಟೇರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದ ಸಕ್ಸಸ್ ಸೆಲೆಬ್ರೇಷನ್ಅನ್ನ ನಟ ದರ್ಶನ್ ದುಬೈನಲ್ಲೂ ಆಚರಿಸಿದ್ದಾರೆ. ಸ್ನೇಹಿತರು ಕಾಟೇರ ಟೀಂ ಜತೆ ದುಬೈಗೆ ಹೋಗಿರೋ ನಟ ದರ್ಶನ್ ಟೀಂ ಫೋಟೋ ಶೂಟ್ ದುಬೈನ ಪ್ರಸಿದ್ಧ ತಾಣಗಳಲ್ಲಿ ಫುಲ್ ಮಸ್ತಿ ಮಾಡಿದ್ದಾರೆ.
 

ನಟ ದರ್ಶನ್ ಕಾಟೇರ ಗೆದ್ದ ಖುಷಿಯಲ್ಲಿದ್ದಾರೆ. ಗಲ್ಫ್ ದೇಶದಲ್ಲೂ ಕಾಟೇರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದ ಸಕ್ಸಸ್ ಸೆಲೆಬ್ರೇಷನ್ಅನ್ನ ನಟ ದರ್ಶನ್ ದುಬೈನಲ್ಲೂ ಆಚರಿಸಿದ್ದಾರೆ. ಸ್ನೇಹಿತರು ಕಾಟೇರ ಟೀಂ ಜತೆ ದುಬೈಗೆ ಹೋಗಿರೋ ನಟ ದರ್ಶನ್ ಟೀಂ ಫೋಟೋ ಶೂಟ್ ದುಬೈನ ಪ್ರಸಿದ್ಧ ತಾಣಗಳಲ್ಲಿ ಫುಲ್ ಮಸ್ತಿ ಮಾಡಿದ್ದಾರೆ. ನಟ ದರ್ಶನ್ ಪ್ರಾಣಿ ಪ್ರಿಯಾ. ದುಬೈಗೆ ಹೋಗಿರೋ ದರ್ಶನ್ ಅಲ್ಲೂ ಪ್ರಾಣಿ ಮೇಲಿನ ವ್ಯಾಮೋಹ ಬಿಟ್ಟಿಲ್ಲ. ದುಬೈ ಝೂನಲ್ಲಿ ಪ್ರಾಣಿಗಳ ಜೊತೆ ಟೈಂ ಪಾಸ್ ಮಾಡಿದ್ದಾರೆ. ಗಲ್ಫ್ ದೇಶದಲ್ಲಿರೋ ಹುಲಿಯ ಜೊತೆ ಒಂದಿಷ್ಟು ಸಮಯ ಕಳೆದಿದ್ದಾರೆ. 

ದರ್ಶನ್ ಹುಲಿಯ ಬೆನ್ನು ಸವರಿರೋ ವೀಡಿಯೋ ಈಗ ವೈರಲ್ ಆಗುತ್ತಿದೆ. ಹಾವು ಅಂದ್ರೆ ಎಲ್ಲರಿಗೂ ಭಯ. ಹೆಬ್ಬಾವು ಅಂದ್ರೆ ಅದರ ಹತ್ತಿರಕ್ಕೂ ಯಾರು ಸುಳಿಲ್ಲ. ಆದ್ರೆ ನಟ ದರ್ಶನ್ ಅರಶಿಣ ಬಣ್ಣದ ಸಾಕು ಹೆಬ್ಬಾವನ್ನ ಮೈ ಮೇಲೆ ಬಿಟ್ಟುಕೊಂಡಿದ್ದಾರೆ. ಯಾವ ಭಯವಿಲ್ಲದೇ ಹೆಬ್ಬವನ್ನ ಎತ್ತಿಕೊಂಡು ಕುತ್ತಿಗೆಗೆ ಸುತ್ತಿಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಅಷ್ಟೆ ಅಲ್ಲ ಚಿಂಪಾಂಜಿ ಕೈ ಹಿಡಿದುಕೊಂಡು ಫೋಟೋ ಶೂಟ್ ಮಾಡಿದ್ದಾರೆ. ಈ ವೀಡಿಯೋ ಫೋಟೋಗಳು ಈಗ ದರ್ಶನ್ ಅಭಿಮಾನಿಗಳ ಬಳಗದಲ್ಲಿ ಟ್ರೆಂಡ್ ಆಗ್ತಿದೆ. ಕಾಟೇರ ಸಿನಿಮಾ ಶೋಗೆ ದುಬೈಗೆ ಹಾರಿದ್ದ ನಟ ದರ್ಶನ್ ಈಗ ಪ್ರವಾಸ ಕೈಗೊಂಡಿದ್ದಾರೆ. ಫುಲ್ ರಿಲ್ಯಾಕ್ಸ್ ಆಗ್ತಿರೋ ದರ್ಶನ್ ಸ್ನೇಹಿತರ ಜೊತೆ ಗಲ್ಫ್ ದೇಶಗಳನ್ನ ಸುತ್ತುತ್ತಿದ್ದಾರೆ.