KGF Chapter 2 ಟ್ರೇಲರ್ ನೋಡಿ ಸೆನ್ಸಾರ್ ಬೋರ್ಡ್ ಹೇಳಿದ್ದೇನು ಗೊತ್ತಾ?

'ಕೆಜಿಎಫ್ ಚಾಪ್ಟರ್ 2' ಚಿತ್ರದ ಟ್ರೇಲರ್ ಮಾರ್ಚ್ 27ರಂದು ಸಂಜೆ 6.40ಕ್ಕೆ ರಿಲೀಸ್ ಆಗಲಿದೆ. ಇದೀಗ ಕೆಜಿಎಫ್ ಟ್ರೇಲರನ್ನು ಸೆನ್ಸಾರ್ ಮಾಡಲಾಗಿದ್ದು, ಇದನ್ನು ನೋಡಿದ ಸೆನ್ಸಾರ್ ಸದಸ್ಯರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. 

Share this Video
  • FB
  • Linkdin
  • Whatsapp

ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಬಹುನಿರೀಕ್ಷಿತ 'ಕೆಜಿಎಫ್ ಚಾಪ್ಟರ್ 2'(KGF Chapter 2) ಸಿನಿಮಾದ ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. 2018ರ ಡಿಸೆಂಬರ್‌ನಲ್ಲಿ ಪಾರ್ಟ್ 1 ರಿಲೀಸ್ ಆಗಿತ್ತು. ಇದೀಗ ಏಪ್ರಿಲ್ 14ರಂದು ಪಾರ್ಟ್ 2 ರಿಲೀಸ್ ಆಗಲಿದೆ. ಕೆಜಿಎಫ್​ ಇಡೀ ವಿಶ್ವವನ್ನೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ. ಈ ಚಿತ್ರದ ಟ್ರೇಲರ್ ಮಾರ್ಚ್ 27ರಂದು ಸಂಜೆ 6.40ಕ್ಕೆ ರಿಲೀಸ್ ಆಗಲಿದೆ. ಇದೀಗ ಕೆಜಿಎಫ್ ಟ್ರೇಲರನ್ನು ಸೆನ್ಸಾರ್ ಮಾಡಲಾಗಿದ್ದು, ಇದನ್ನು ನೋಡಿದ ಸೆನ್ಸಾರ್ ಸದಸ್ಯರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. 

Yash: 'ಕೆಜಿಎಫ್ 2' ಚಿತ್ರದ ಪ್ಯಾನ್‌ವರ್ಲ್ಡ್ ಪ್ರಚಾರಕ್ಕೆ ಭರ್ಜರಿ ತಯಾರಿ

ಉಮೈರ್ ಸಂಧು ಹೆಸರಿನ ಸಾಗರೋತ್ತರದ ಸೆನ್ಸಾರ್ ಸದಸ್ಯರೊಬ್ಬರು ನಾನು ಈ ಚಿತ್ರದ ಟ್ರೇಲರ್ ವೀಕ್ಷಿಸಿದ್ದೇನೆ. ಈ ಟ್ರೇಲರ್ ಅದ್ಭುತವಾಗಿದೆ. ಗೂಸ್‌ಬಂಪ್ಸ್ ಹಾಗೂ ಮೈಂಡ್ ಬ್ಲೊವಿಂಗ್ ಆಗಿದೆ. ಯಶ್‌ಗೆ ದೊಡ್ಡ ಅಭಿನಂದನೆಗಳು ಎಂದು ಪೋಸ್ಟ್‌ ಮಾಡಿದ್ದಾರೆ. ಇನ್ನು ರವಿ ಬಸ್ರೂರ್ ಸಂಗಿತ ಸಂಯೋಜನೆ 'ಕೆಜಿಎಫ್ 2' ಚಿತ್ರಕ್ಕಿದ್ದು, ಪ್ರಕಾಶ್ ರಾಜ್, ಬಾಲಿವುಡ್ ನಟ ಸಂಜಯ್ ದತ್, ತೆಲುಗು ನಟ ರಾವ್ ರಮೇಶ್, ರವೀನಾ ಟಂಡನ್ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರಕ್ಕಿದೆ. 'ಕೆಜಿಎಫ್ 2'​ ಸಿನಿಮಾ ಏಪ್ರಿಲ್​ 14ಕ್ಕೆ ವಿಶ್ವದಾದ್ಯಾಂತ‌ ಏಕಕಾಲದಲ್ಲಿ ಐದು ಭಾಷೆಗಳಲ್ಲಿ ತೆರೆ ಕಾಣಲಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video