Asianet Suvarna News Asianet Suvarna News

Yash: ಅಪ್ಪ ಸಿನಿಮಾದಲ್ಲಿ ರಾಕಿಂಗ್, ಮಕ್ಕಳು ಮನೆಯಲ್ಲಿ ರಾಕಿಂಗ್!

ರಾಕಿಂಗ್ ಸ್ಟಾರ್ ಯಶ್.. ಇತ್ತೀಚಿನ ದಿನಗಳಲ್ಲಿ ಸಖತ್ ಬ್ಯುಸಿ. ಸಿನಿಮಾ, ಆಡ್ ಶೂಟ್, ಬ್ಯುಸಿನೆಸ್ ಹೀಗೆ ಒಂದಲ್ಲ ಒಂದು ರೀತಿ ಸದಾ ಬ್ಯೂಸಿ ಆಗಿರ್ತಾರೆ. ಆದ್ರೆ ಎಷ್ಟೇ ಕೆಲಸಗಳಿದ್ದರು ಯಶ್ ತನ್ನ ಫ್ಯಾಮಿಲಿ ಜೊತೆ ಸಮಯ ಕಳೆಯೋದಕ್ಕಾಗಿ ಬಿಡುವು ಮಾಡಿಕೊಳ್ತಾರೆ.

May 13, 2022, 3:08 PM IST

ರಾಕಿಂಗ್ ಸ್ಟಾರ್ ಯಶ್ (Yash).. ಇತ್ತೀಚಿನ ದಿನಗಳಲ್ಲಿ ಸಖತ್ ಬ್ಯುಸಿ. ಸಿನಿಮಾ, ಆಡ್ ಶೂಟ್, ಬ್ಯುಸಿನೆಸ್ ಹೀಗೆ ಒಂದಲ್ಲ ಒಂದು ರೀತಿ ಸದಾ ಬ್ಯೂಸಿ ಆಗಿರ್ತಾರೆ. ಆದ್ರೆ ಎಷ್ಟೇ ಕೆಲಸಗಳಿದ್ದರು ಯಶ್ ತನ್ನ ಫ್ಯಾಮಿಲಿ (Family) ಜೊತೆ ಸಮಯ ಕಳೆಯೋದಕ್ಕಾಗಿ ಬಿಡುವು ಮಾಡಿಕೊಳ್ತಾರೆ. ಸಿಕ್ಕ ಸಮಯದಲ್ಲಿ ಮಕ್ಕಳ ಜೊತೆ ಸೇರಿ ಸಖತ್ ಎಂಜಾಯ್ (Enjoy) ಮಾಡ್ತಾರೆ ಅದಕ್ಕೆ ಸಾಕ್ಷಿ ಇತ್ತೀಚೆಗಷ್ಟೇ ಅವರೇ ಅಪ್ಲೋಡ್ ಮಾಡಿರೋ ಈ ವಿಡಿಯೋ. ಯಶ್ ಸಿನಿಮಾ ಇಲ್ಲದ ಜೀವನವೇ ಇಲ್ಲ ಅನ್ನೋ ಮಾತನ್ನ ಸಾಕಷ್ಟು ಬಾರಿ ಹೇಳಿದ್ದಾರೆ. ಅದರಂತೆಯೇ ತಮ್ಮ ಮಕ್ಕಳ ಜೊತೆ ಸೇರಿದಾಗಲೂ ಮಕ್ಕಳಿಗೆ ಸಿನಿಮೀಯ ರೀತಿಯಲ್ಲಿ ಕಥೆ ಹೇಳಿ ಅವರನ್ನ ರಂಜಿಸ್ತಾರೆ. 

ಅವ್ರಿಗಾಗಿ ಎಂಥದ್ದೇ ಪಾತ್ರ ಮಾಡೋದಕ್ಕೆ ಯಶ್ ರೆಡಿ. 'ಕೆಜಿಎಫ್ 2' (KGF 2) ಸಕ್ಸಸ್ ನಂತರ ಕೆಲ ಸಮಯ ಬ್ರೇಕ್ ತೆಗೆದುಕೊಂಡು ಮಕ್ಕಳ ಜೊತೆ ಕ್ವಾಲಿಟಿ ಟೈಂ ಸ್ಪೆಂಡ್ ಮಾಡ್ತಿದ್ದಾರೆ ಯಶ್. ಈ ಸಮಯದಲ್ಲಿ ಮಕ್ಕಳಿಗೆ ಕಥೆ ಹೇಳುತ್ತಾ ಅವ್ರ ಮುಂದೆ ಆಕ್ಟ್ ಮಾಡುತ್ತಾ ಅವ್ರನ್ನ ಎಂಟರ್ಟೈನ್ ಮಾಡ್ತಿದ್ದಾರೆ. ಯಶ್ ಟೈಗರ್ ಆದ್ರೆ ಮಗ ಡೈನೋಸಾರಸ್ ಆಗಿ ಅಪ್ಪನನ್ನೇ ಹೆದರಿಸೋ ಪ್ರಯತ್ನ ಮಾಡ್ತಿದ್ದಾನೆ. ಯಶ್ ಮತ್ತು ರಾಧಿಕಾ ಮಕ್ಕಳು ಸಖತ್ ಆಕ್ಟಿವ್ ಮತ್ತು ಅಟ್ರ್ಯಾಕ್ಟಿವ್. ಐರಾ ಮೊದಲ ಬಾರಿಗೆ ಕ್ಯಾಮೆರಾ ಪೇಸ್ ಮಾಡಿದಾಗಲೇ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ತಾನೆ ಉತ್ತರಿಸುವಂತೆ ಆಕ್ಟ್ ಮಾಡಿ ಎಲ್ಲರನ್ನ ಇಂಪ್ರೆಸ್ ಮಾಡಿದ್ಲು. 

Rocky bai Vibes: ರಾಕಿಂಗ್ ಸ್ಟಾರ್ ಕಾಸ್ಟ್ಯೂಮ್ ಕಾಪಿ ಮಾಡಿದ ರಣವೀರ್ ಸಿಂಗ್..!

ಯಶ್ ಮಕ್ಕಳುಸಖತ್ ಕ್ಯೂಟ್ ಅನ್ನಿಸೋ ಫೀಲ್ ಪ್ರತಿಯೊಬ್ಬರಿಗೂ ಬರುತ್ತೆ. ಅದಕ್ಕೆ ಕಾರಣ ಅವರ ವಿಡಿಯೋಗಳು. ರಾಧಿಕಾ ತಮ್ಮ ಮಕ್ಕಳ ತುಂಟಾಟದ ವಿಡಿಯೋಗಳನ್ನ ಆಗಾಗ ಹಂಚಿಕೊಳ್ತಿದ್ದಾರೆ. ಅದರಲ್ಲೂ ಐರಾ ವಿಡಿಯೋ ನೋಡಿ ಫಿದಾ ಆಗದವರಿಲ್ಲ. ಅಪ್ಪ ಹಾಗೂ ಅಮ್ಮ ಇಬ್ಬರು ಸಿನಿಮಾದವರೇ ಆಗಿರೋದ್ರಿಂದ ಐರಾ ಹಾಗೂ ಯಥರ್ವ್‌ಗೂ ಹಾಡು, ಡ್ಯಾನ್ಸ್ ಹಾಗೂ ಸ್ಟೋರಿ ಟೆಲ್ಲಿಂಗ್‌ನಲ್ಲಿ ಸಖತ್ ಇಂಟ್ರೆಸ್ಟ್ ಇದೆ. ಅದಷ್ಟೇ ಅಲ್ಲದೆ ಯಥರ್ವ್‌ಗೆ ಆಕ್ಟಿಂಗ್‌ನಲ್ಲಿಯೂ ಆಸಕ್ತಿ ಹುಟ್ಟುತ್ತಿದೆ ಅನ್ನೋದು ಈ ಫೋಟೋ ನೋಡಿದರೆ ಗೊತ್ತಾಗುತ್ತೆ. ಅಪ್ಪನಂತೆ ಪೋಸ್ ಕೊಡೋದ್ರಲ್ಲಿ ಜ್ಯೂ ರಾಕಿಂಗ್ ಸ್ಟಾರ್ ಎಕ್ಸ್ಪರ್ಟ್.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies