Asianet Suvarna News Asianet Suvarna News

Kantara: ಕಾಂತಾರ ಎಂದರೇನು? ವಿವರಣೆ ನೀಡಿದ ರಿಷಬ್ ಶೆಟ್ಟಿ

ನಟ ರಿಷಬ್ ಶೆಟ್ಟಿ ಕಾಂತಾರ ಸಿನಿಮಾದ ಸಕ್ಸಸ್ ಬಗ್ಗೆ ಮಾತನಾಡಿದರು. ಕಾಂತಾರ ಎಂದರೆ ಏನು ಎನ್ನುವುದನ್ನು ಸಹ ರಿಷಬ್ ರಿವೀಲ್ ಮಾಡಿದರು. 

Oct 7, 2022, 3:40 PM IST

ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾ ರಿಲೀಸ್ ಆಗಿ ಅದ್ಬುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಪ್ರೇಕ್ಷಕರು ಸಹ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದ ಸಕ್ಸಸ್ ಬಗ್ಗೆ ರಿಷಬ್ ಶೆಟ್ಟಿ ಇತ್ತೀಚಿಗೆ ನಡೆದ ಪ್ರೆಸ್ ಮೀಟ್ ನಲ್ಲಿ ಮಾತನಾಡಿದ್ದಾರೆ. ಈ ವೇಳೆ ಕಾಂತಾರ ಎಂದರೆ ಏನು ಎನ್ನುವುದನ್ನು ರಿವೀಲ್ ಮಾಡಿದರು. ಈಸಿನಿಮಾದಲ್ಲಿ ಮೊದಲು ನಾನೇ ನಟನೆ ಮಾಡಬೇಕಾ ಎನ್ನುವ ಪ್ರಶ್ನೆ ಇತ್ತು. ಯಾವುದೇ ಕೆಲಸ ಮಾಡಲು ಭಯ ಭಕ್ತಿ ಬೇಕು. ನನಗೆ ತುಂಬಾ ಜನ ಸಲಹೆ ನೀಡುತ್ತಾ ಬಂದಿದ್ದಾರೆ. ಈ ಚಿತ್ರದಲ್ಲಿ ಅನೇಕ ಅನುಭವಗಳಾಗಿದೆ. ಆದನ್ನು ಹೇಳಬಾರದು, ಅದು ನನ್ನ ಅನುಭವಕ್ಕೆ ಇರಲಿ ಎಂದು ಹೇಳಿದರು. ಕಾಂತಾರ ಎಂದರೇ ನಿಗೂಢ ಕಾಡು. ಜಾನಪದದ ಮೂಲಕವೇ ಪ್ರಕೃತಿ ಮತ್ತು ಮನುಷ್ಯನ ಸಂಘರ್ಷದ ಬಗ್ಗೆ ಹೇಳಬೇಕೆಂದು ದಂತಕಥೆ ಎಂದು ಸೇರಿಸಲಾಗಿದೆ ಎಂದು ಹೇಳಿದರು. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment