ನಾವು ನಾಗರ ಪೂಜೆ ಮಾಡ್ತೀವಿ, ಸಾಮಾಜಿಕವಾಗಿ ಕಿತ್ತಾಡೋದು ಅಸಹ್ಯ; ಚೇತನ್ ಹೇಳಿಕೆಗೆ ಉಪೇಂದ್ರ ರಿಯಾಕ್ಷನ್

ಚೇತನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ರಿಯಲ್ ಸ್ಟಾರ್ ಉಪೇಂದ್ರ, ಈ ತರಹದ ವಿಚಾರಗಳನ್ನ ನಿರ್ಲಕ್ಷಿಸಬೇಕು. ಈ ತರಹದ ವಿಚಾರಗಳು ಮಾತನಾಡಿದಷ್ಟು ಬೆಳೆಯುತ್ತೆ. ನಾವೇ ಬೆಂಕಿಗೆ ತುಪ್ಪ ಸುರಿತಿದ್ದೀವಿ ಎಂದರು. 

Share this Video
  • FB
  • Linkdin
  • Whatsapp

ರಿಷಬ್ ಹೇಳಿದ ಹಾಗೆ ಭೂತಕೋಲ ಹಿಂದೂ ಸಂಸ್ಕೃತಿ ಅಲ್ಲ ಎಂದು ನಟ ಚೇತನ್ ಹೇಳಿರುವ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ಅನೇಕರು ಪರ ವಿರೋದ ಚರ್ಚೆ ಮಾಡುತ್ತಿದ್ದಾರೆ. ಇದೀಗ ಈ ಬಗ್ಗೆ ನಟ ರಿಯಲ್ ಸ್ಟಾರ್ ಉಪೇಂದ್ರ ಮಾತನಾಡಿದ್ದಾರೆ. ಮಾಧ್ಯಮಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ ಉಪೇಂದ್ರ, ಈ ತರಹದ ವಿಚಾರಗಳನ್ನ ನಿರ್ಲಕ್ಷಿಸಬೇಕು. ಈ ತರಹದ ವಿಚಾರಗಳು ಮಾತನಾಡಿದಷ್ಟು ಬೆಳೆಯುತ್ತೆ. ನಾವೇ ಬೆಂಕಿಗೆ ತುಪ್ಪ ಸುರಿತಿದ್ದೀವಿ. ವೈಯಕ್ತಿಕ ನಂಬಿಕೆಗಳು ಇವೆಲ್ಲ ಇಟ್ಟುಕೊಂಡು ಸಾಮಾಜಿಕವಾಗಿ ಕಿತ್ತಾಡೋದು ಅಸಹ್ಯ. ಇವತ್ತಿಗೂ ನಾವು ಅದರ ಬಗ್ಗೆ ಬಹಳ ನಂಬ್ತಿವಿ. ನಮ್ಮ ಮನೆಯಲ್ಲಿ ನಮ್ಮ ತಂದೆ ಇವತ್ತಿಗೂ ನಾಗರಪೂಜೆ ಮಾಡ್ತಾರೆ. ನಂಬಿಕೆ ವಿಚಾರದಲ್ಲಿ ಹೆಚ್ಚು ಮಾತನಾಡಬಾರದು ಎಂದು ಹಳಿದರು.

Related Video