ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬದಲ್ಲಿ ಭಾಗಿಯಾಗಿ ಬಂಪರ್ ಬಹುಮಾನ ಗೆಲ್ಲಿ

ರಿಯಲ್ ಸ್ಟಾರ್ ಹುಟ್ಟುಹಬ್ಬ ಸೆಲೆಬ್ರೇಷನ್ ಗೆ ರಿಯಲ್ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಸೆಪ್ಟೆಂಬರ್  18ರಂದು ಉಪ್ಪಿ ಜನ್ಮದಿನ. ಆ ದಿನ ಬಗೆ ಬಗೆಯ ಗಿಫ್ಟ್ಗಳನ್ನ ಫ್ಯಾನ್ಸ್ ಕೊಡ್ತಾರೆ. ಆದ್ರೆ  ಈ ಭಾರಿ ರಿಯಲ್ ಸ್ಟಾರ್ ಉಪೇಂದ್ರ ಅವರೇ ತನ್ನ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್ ಕೊಡೋದಾಗಿ ಘೋಷಣೆ ಮಾಡಿದ್ದಾರೆ.

First Published Sep 5, 2022, 2:00 PM IST | Last Updated Sep 5, 2022, 1:59 PM IST

ನಮ್ ಹೀರೋ ಸೂಪರ್ ಸ್ಟಾರ್,  ಅಣ್ಣನಿಗೆ ಜೈ.. ಹ್ಯಾಪಿ ಬರ್ತ್ಡೇ ಬಾಸ್.. ಈತರ ಸೌಂಡು ಸ್ಟಾರ್ಸ್ ಮನೆ ಮುಂದೆ ಕೇಳಿ ಮೂರು ವರ್ಷ ಆಗಿತ್ತು. ಯಾಕಂದ್ರೆ ಕೋವಿಡ್ ಕಾರಣದಿಂದ ಹೀರೋಗಳು ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸೋದನ್ನ ನಿಲ್ಲಿಸಿದ್ರು. ಇದ್ರಿಂದ ಕೇಕು, ಹೂ ಹಾರ, ಸ್ಪೆಷಲ್ ಗಿಫ್ಟ್ ಹಿಡುದು ಬರೋ ಅಭಿಮಾನಿಗಳು, ಮತ್ತೆ ನಮ್ ಹೀರೋ ಹುಟ್ಟುಹಬ್ಬ ಸೆಲೆಬ್ರೇನ್ಗೆ ಒಳ್ಳೆ ದಿನಗಳ ಬರಲಿ ಅಂತ ಕಾಯುತ್ತಿದ್ರು. ಈಗ ಸ್ಟಾರ್ಸ್ ಮನೆ ಮುಂದೆ ಅಭಿಮಾನಿಗಳ ಜಾತ್ರೆ ಶುರುವಾಗಿದೆ. ಕಿಚ್ಚ ಸುದೀಪ್ ಅವರಿಂದ ಪ್ರಾರಂಭವಾಗಿದೆ.  ಇದೀಗ ರಿಯಲ್ ಸ್ಟಾರ್ ಉಪೇಂದ್ರ ಕೂಡ ಸಜ್ಜಾಗಿದ್ದು, ಬಿಗ್ ಪ್ಲಾನ್ ಮಾಡಿಕೊಂಡಿದ್ದಾರೆ. ರಿಯಲ್ ಸ್ಟಾರ್ ಹುಟ್ಟುಹಬ್ಬ ಸೆಲೆಬ್ರೇಷನ್ ಗೆ ರಿಯಲ್ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಸೆಪ್ಟೆಂಬರ್  18ರಂದು ಉಪ್ಪಿ ಜನ್ಮದಿನ. ಆ ದಿನ ಬಗೆ ಬಗೆಯ ಗಿಫ್ಟ್ಗಳನ್ನ ಫ್ಯಾನ್ಸ್ ಕೊಡ್ತಾರೆ. ಆದ್ರೆ  ಈ ಭಾರಿ ರಿಯಲ್ ಸ್ಟಾರ್ ಉಪೇಂದ್ರ ಅವರೇ ತನ್ನ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್ ಕೊಡೋದಾಗಿ ಘೋಷಣೆ ಮಾಡಿದ್ದಾರೆ.ಉಪೇಂದ್ರ ತನ್ನ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಸಿಗೋ ಕೇಕ್, ಹೂ ಹಾರ, ಗಿಫ್ಟ್ಗಳನ್ನ ಪಡೆಯೋ ಸಂಪ್ರದಾಯಕ್ಕೆ ಬ್ರೇಕ್ ಹಾಕಿದ್ದಾರೆ. ಹುಟ್ಟುಹಬ್ಬದ ದಿನ ನನ್ನ ಮನೆಗೆ ಬನ್ನಿ, ಹಾರ-ಕೇಕ್ ಬದಲು ನನ್ನ ಈ ವಿಭಿನ್ನ ಕೋರಿಕೆ ಈಡೇರಿಸಿ ಎಂದು ಅಭಿಮಾನಿಗಳ ಬಳಿ ನಟ ಉಪೇಂದ್ರ ಕೇಳಿದ್ದಾರೆ. ಈ ಬಗ್ಗೆ ಪೋಸ್ಟ್ ಹಂಚಿರೋ ರಿಯಲ್ ಸ್ಟಾರ್, ವಿಚಾರವಂತರಾಗೋಣಾ? ಇದೇ ಸೆಪ್ಟೆಂಬರ್ 18 ಅಭಿಮಾನಿಗಳ ದಿನದಂದು ನಿಮ್ಮನ್ನ ನಮ್ಮ ಮನೆಯಲ್ಲಿ ಭೇಟಿಯಾಗುತ್ತೇನೆ. ಆ ದಿನ ಕೇಕ್, ಹೂಗುಚ್ಚ, ಗಿಫ್ಟ್ ಎಲ್ಲಾ ಬಿಟ್ಟು, ಒಂದು ಹಾಳೆಯಲ್ಲಿ 18 ಪದಗಳನ್ನು ಮೀರದಂತೆ ಏನಾದರೂ ಒಂದು ಉತ್ತಮ ವಿಚಾರವನ್ನು ಬರೆದು ತರುತ್ತೀರಾ? ಅತ್ಯುತ್ತಮವಾದ 18 ಬರವಣಿಗೆಗೆ ಸೂಕ್ತ ಬಹುಮಾನವಿರುತ್ತದೆ ಎಂದು ತಮ್ಮ ಉಪೇಂದ್ರ ಹೇಳಿದ್ದಾರೆ.