Asianet Suvarna News Asianet Suvarna News

'ವಿಕ್ರಾಂತ್ ರೋಣ' ಟೀಸರ್ ಡೈಲಾಗ್‌ನಲ್ಲಿ RCB ತಂಡದ ಗ್ಲೆನ್ ಮ್ಯಾಕ್ಸ್ವೆಲ್ ..!

ಕೆಜಿಎಫ್-2 (KGF 2) ಸಿನಿಮಾ ದೊಡ್ಡ ಯಶಸ್ಸು ಕಾಣುತ್ತಿದೆ. ಈ ಸಿನಿಮಾ ಕ್ರಿಕೆಟ್ ಜಗತ್ತಿನಲ್ಲೂ ಸದ್ದು ಮಾಡುತ್ತಿದ್ದೆ.  ಇದೀಗ ಸ್ಯಾಂಡಲ್‌ವುಡ್ ಸೂಪರ್ ಸ್ಟಾರ್ ಕಿಚ್ಚ ಸುದೀಪ್‌ (kiccha Sudeep) ವಿಕ್ರಾಂತ್ ರೋಣ ಸಿನಿಮಾಗೂ ಕ್ರಿಕೆಟ್ ಜಗತ್ತಿನ ಸಪೋರ್ಟ್ ಸಿಕ್ತಿದೆ. 

 ಕೆಜಿಎಫ್-2 (KGF 2) ಸಿನಿಮಾ ದೊಡ್ಡ ಯಶಸ್ಸು ಕಾಣುತ್ತಿದೆ. ಈ ಸಿನಿಮಾ ಕ್ರಿಕೆಟ್ ಜಗತ್ತಿನಲ್ಲೂ ಸದ್ದು ಮಾಡುತ್ತಿದ್ದೆ.  ಇದೀಗ ಸ್ಯಾಂಡಲ್‌ವುಡ್ ಸೂಪರ್ ಸ್ಟಾರ್ ಕಿಚ್ಚ ಸುದೀಪ್‌ (kiccha Sudeep) ವಿಕ್ರಾಂತ್ ರೋಣ ಸಿನಿಮಾಗೂ ಕ್ರಿಕೆಟ್ ಜಗತ್ತಿನ ಸಪೋರ್ಟ್ ಸಿಕ್ತಿದೆ. ಕನ್ನಡದ ಮತ್ತೊಬ್ಬ ಪ್ಯಾನ್ ಇಂಡಿಯಾ ಸ್ಟಾರ್ ಕಿಚ್ಚನ ವಿಕ್ರಾಂತ್ ರೋಣ (Vikrant Rona) ಸಿನಿಮಾ ಜುಲೈ 28ಕ್ಕೆ ವಿಶ್ವದಾದ್ಯಂತ ತೆರೆ ಕಾಣುತ್ತಿದೆ. ಹೀಗಾಗಿ ಐಪಿಎಲ್ ಟೂರ್ನಿಯ ಮೋಸ್ಟ್ ಎಂಟರ್ಟೈನಿಂಗ್ ಟೀಂ ಅಂತ ಕರೆಸಿಕೊಳ್ಳೋ ಆರ್ಸಿಬಿ ತಂಡದಲ್ಲೂ ವಿಕ್ರಾಂತ್ ರೋಣನ ಕ್ರೇಜ್ ಸೃಷ್ಟಿಯಾಗಿದೆ. ಯಾಕಂದ್ರೆ ಇತ್ತೀಚೆಗೆ ಐದು ಭಾಷೆಯಲ್ಲಿ ಹೊರಬಂದ ವಿಕ್ರಾಂತ್ ರೋಣ ಟೀಸರ್ ಡೈಲಾಗ್‌ನಲ್ಲಿ ಆರ್‌ಬಿಸಿ (RCB) ತಂಡದ ಫೈಯರ್ ಗ್ಲೆನ್ ಮ್ಯಾಕ್ಸ್ವೆಲ್ ಮಿಂಚಿದ್ದಾರೆ.

ಕಿಚ್ಚನ ಕೈ ಸೇರಿದ ಜಗ್ಗೇಶ್ 'ತೋತಾಪುರಿ; ಟ್ರೇಲರ್ ರಿಲೀಸ್!

ವಿಕ್ರಾಂತ್ ರೋಣ (Vikrant Rona) ರಿಲೀಸ್ ಡೇಟ್ ಅನೌನ್ಸ್ ಟೀಸರ್‌ನಲ್ಲಿ ಕಿಚ್ಚ ಸುದೀಪ್‌ರನ್ನು ಇಂಟ್ರಡ್ಯೂಸ್ ಮಾಡುವಾಗ ಮಕ್ಕಳೆಲ್ಲಾ ಸೇರಿಕೊಂಡು ಸುದೀಪ್ ಪಾತ್ರದ ವೈಭವೀಕರಣ ಮಾಡುತ್ತಾರೆ. ಆ ಮಕ್ಕಳ ಬಾಯಲ್ಲಿ ಬರೋ ಡೈಲಾಗ್‌ಗಳು ವಿಕ್ರಾಂತ್ ರೋಣ ಸಿನಿಮಾದ ಮೇಲೆ ನೆಕ್ಸ್ಟ್ ಲೆವೆಲ್ ಎಕ್ಸ್ಪಟೇಷನ್ ಹುಟ್ಟಿಸಿದೆ.

ಈಗ ಅದೇ ಡೈಲಾಗ್ಅನ್ನ ಕೆಂಪಂಗಿ ಹುಡುಗ ಗ್ಲೆನ್ ಮ್ಯಾಕ್ಸ್ವೆಕ್ಗೆ ಮ್ಯಾಚ್ ಮಾಡಿ ವೀಡಿಯೋ ಮಾಡಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ, ಆ ವೀಡಿಯೋವನ್ನ ತನ್ನ ಸೋಷಿಯಲ್ ಮೀಡಿಯಾ ಅಫೀಷಿಯಲ್ ಪೇಜ್ನಲ್ಲಿ ಹಂಚಿಕೊಂಡಿದೆ. ಈ ವೀಡಿಯೋದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ವಿಕ್ರಾಂತ್ ರೋಣ ಗುಮ್ಮನ ಹಾಗೆ ಕಾಣಿಸುತ್ತಿದ್ದು, ಈ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.