Asianet Suvarna News Asianet Suvarna News

ಕಿಚ್ಚನ ಕೈ ಸೇರಿದ ಜಗ್ಗೇಶ್ 'ತೋತಾಪುರಿ' ಟ್ರೈಲರ್ ರಿಲೀಸ್!

ತೋತಾಪುರಿ (Totapuri) ನವರಸ ನಾಯಕ ಜಗ್ಗೇಶ್ (Jaggesh) ಅಭಿನಯದ ಬಹು ನಿರೀಕ್ಷಿತ ಚಿತ್ರ. ನೀರ್ ದೋಸೆ ಜೋಡಿ ಜಗ್ಗೇಶ್ ಹಾಗು ನಿರ್ದೇಶಕ ವಿಜಯ್ ಪ್ರಸಾದ್ ಕಾಂಬಿನೇಷನ್‌ನಲ್ಲಿ  ಸಿದ್ಧವಾಗಿರೋ ರಸಪೂರಿತ ಸಿನಿಮಾ ತೋತಾಪುರಿ. ಈ ಚಿತ್ರದ ಟೈಟಲ್, ಟೀಸರ್ ಹಾಗೂ ಹಾಡು ಸೋಷಿಯಲ್ ಮೀಡಿಯಾ ಸಾಮ್ರಾಜ್ಯದಲ್ಲಿ ದರ್ಬಾರ್ ಮಾಡ್ತಿದೆ. 

ತೋತಾಪುರಿ (Totapuri) ನವರಸ ನಾಯಕ ಜಗ್ಗೇಶ್ (Jaggesh) ಅಭಿನಯದ ಬಹು ನಿರೀಕ್ಷಿತ ಚಿತ್ರ. ನೀರ್ ದೋಸೆ ಜೋಡಿ ಜಗ್ಗೇಶ್ ಹಾಗು ನಿರ್ದೇಶಕ ವಿಜಯ್ ಪ್ರಸಾದ್ ಕಾಂಬಿನೇಷನ್‌ನಲ್ಲಿ  ಸಿದ್ಧವಾಗಿರೋ ರಸಪೂರಿತ ಸಿನಿಮಾ ತೋತಾಪುರಿ. ಈ ಚಿತ್ರದ ಟೈಟಲ್, ಟೀಸರ್ ಹಾಗೂ ಹಾಡು ಸೋಷಿಯಲ್ ಮೀಡಿಯಾ ಸಾಮ್ರಾಜ್ಯದಲ್ಲಿ ದರ್ಬಾರ್ ಮಾಡ್ತಿದೆ. ವಿಶೇಷ ಅಂದ್ರೆ ಈಗ ಜಗ್ಗಣ್ಣನ ತೋತಾಪುರಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೈ ಸೇರಿದ್ದು, ಉಪ್ಪು, ಖಾರ ಹುಳಿಯ ತೋತಾಪುರಿಗೆ ಕಿಚ್ಚ ಸಿಹಿ ಬೆರೆಸಿ ಸಿನಿ ಪ್ರೇಕ್ಷಕರು ಸವಿಯಲು ಕೊಟ್ಟಿದ್ದಾರೆ. ತೋತಾಪುರಿ ಸಿನಿಮಾದ ಟೀಸರ್‌ನ್ನು (Teaser) ಕಿಚ್ಚ ಬಿಡುಗಡೆ ಮಾಡಿದ್ದಾರೆ.. 

ತೋತಾಪುರಿ ಸಿನಿಮಾದಲ್ಲಿ ನಟಿ ಅಧಿತಿ ಪ್ರಭುದೇವ ಮುಸ್ಲಿಂ ಹುಡುಗಿ ರೋಲ್ ಮಾಡಿದ್ದಾರೆ. ಇನ್ನುಳಿದಂತೆ ದತ್ತಣ್ಣ, ವೀಣಾ ಸುಂದರ್ ಕೂಡ ನಟಿಸಿದ್ದಾರೆ. ನಟ ಡಾಲಿ ಧನಂಜಯ್ ರೋಲ್ ಸಿನಿಮಾದಲ್ಲಿ ಕುತೂಹಲ ಮೂಡಿಸಿದೆ. ಸೀರಿಯಸ್ ಪಾತ್ರಗಳಿಂದ ಫೇಮಸ್ ಆಗಿರೋ ಡಾಲಿ ಈ ಸಿನಿಮಾದಲ್ಲಿ ಪೋಲಿ ಡೈಲಾಗ್ ಹೊಡೆದಿದ್ದಾರೆ.

ನವರಸ ನಾಯಕನ ತೋತಾಪುರಿಯನ್ನು ಎರಡು ಹೋಳಾಗಿ ಮಾಡಿ ಸಿನಿ ರಸಿಕರಿಗೆ ಹಂಚಲು ಪೋಲಿ ಮಾತುಗಳ ಸರ್ದಾರ ನಿರ್ದೇಶಕ ವಿಜಯ್ ಪ್ರಸಾದ್ ಪಕ್ಕ ಪ್ಲಾನ್ ಮಾಡಿದ್ದಾರೆ. ಅಂದ್ರೆ ತೋತಾಪುರಿ ಸಿನಿಮಾ ಎರಡು ಭಾಗಗಳಲ್ಲಿ ತೆರೆ ಕಾಣುತ್ತಿದೆ. ನಿರ್ಮಾಪಕ ಕೆ.ಎ ಸುರೇಶ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಅನೂಪ್ ಸಿಳಿನ್ ಮ್ಯೂಸಿಕ್ ಕೊಟ್ಟಿದ್ದಾರೆ. 
 

Video Top Stories