ಶಿವಣ್ಣ ಬಂದ್ರೆ ನಾ ಬರಲ್ಲ.. ಹೀಗ್ಯಾಕಂದ್ರು ರವಿಮಾಮ?: ಸೂತ್ರಧಾರಿ ಇವೆಂಟ್​ನಲ್ಲಿ ಆಗಿದ್ದೇನು?

ಇತ್ತೀಚಿಗೆ ಸೂತ್ರಧಾರಿ ಸಿನಿಮಾ ವೇದಿಕೆಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಸೆಂಚೂರಿ ಸ್ಟಾರ್ ಶಿವರಾಜ್​ಕುಮಾರ್ ಮುಖಾಮುಖಿ ಆಗಿದ್ರು. ಶಿವಣ್ಣ ಈ ಕಾರ್ಯಕ್ರಮಕ್ಕೆ ಬರ್ತಾರೆ ಅಂತ ರವಿಚಂದ್ರನ್​ಗೆ ಗೊತ್ತೇ ಇರಲಿಲ್ಲ.

Share this Video
  • FB
  • Linkdin
  • Whatsapp

ಇತ್ತೀಚಿಗೆ ಸೂತ್ರಧಾರಿ ಸಿನಿಮಾ ವೇದಿಕೆಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಸೆಂಚೂರಿ ಸ್ಟಾರ್ ಶಿವರಾಜ್​ಕುಮಾರ್ ಮುಖಾಮುಖಿ ಆಗಿದ್ರು. ಶಿವಣ್ಣ ಈ ಕಾರ್ಯಕ್ರಮಕ್ಕೆ ಬರ್ತಾರೆ ಅಂತ ರವಿಚಂದ್ರನ್​ಗೆ ಗೊತ್ತೇ ಇರಲಿಲ್ಲ. ಶಿವಣ್ಣನನ್ನ ವೇದಿಕೆ ಮೇಲೆ ನೋಡಿದ ರವಿಮಾಮ, ಶಿವಣ್ಣ ಬರೋದು ನಾನು ಗೊತ್ತಿದ್ದಿದ್ರೆ ನಾನು ಬರ್ತಾನೇ ಇರಲಿಲ್ಲ ಅಂದುಬಿಟ್ರು. ಅರೇ ಕ್ರೇಜಿಸ್ಟಾರ್ ಯಾಕೆ ಈ ಮಾತು ಹೇಳಿದ್ರು..? ಅದರ ಹಿಂದೆ ಒಂದು ಇನ್​ಟ್ರೆಸ್ಟಿಂಗ್ ವಿಷ್ಯ ಇದೆ.. ಏನದು ವಿಷ್ಯ ಈ ಸ್ಟೋರಿ ನೋಡಿ. ಕ್ರೇಜಿಸ್ಟಾರ್ ರವಿಚಂದ್ರನ್ & ಸೆಂಚ್ಯೂರಿ ಸ್ಟಾರ್ ಶಿವರಾಜ್​ಕುಮಾರ್ .. ಸ್ಯಾಂಡಲ್​ವುಡ್​ನ ಇಬ್ಬರು ದಿಗ್ಗಜರು. 1980ರ ದಶಕದಿಂದಲೂ ಕನ್ನಡ ಸಿನಿರಂಗವನ್ನ ಆಳ್ತಾ ಬಂದಿರೋ ತಾರೆಯರು. ಈ ಇಬ್ಬರೂ ಇತ್ತೀಚಿಗೆ ಚಂದನ್ ಶೆಟ್ಟಿ ನಟನೆಯ ಸೂತ್ರಧಾರಿ ಸಿನಿಮಾದ ಪ್ರೀ ರಿಲೀಸ್ ಇವೆಂಟ್​​ನಲ್ಲಿ ಮುಖಾಮುಖಿ ಆಗಿದ್ರು. 

ಬಹುದಿನಗಳ ಬಳಿಕ ಈ ಇಬ್ಬರೂ ದಿಗ್ಗಜರು ವೇದಿಕೆ ಮೇಲೆ ಮುಖಾಮುಖಿ ಆಗಿದ್ರು. ಆದ್ರೆ ಈ ಸಮಯದಲ್ಲಿ ಕ್ರೇಜಿಸ್ಟಾರ್ ಒಂದು ಅಚ್ಚರಿಯ ಮಾತನ್ನ ಹೇಳಿದ್ರು. ಶಿವಣ್ಣ ಬರ್ತಾರೆ ಅಂದ್ರೆ ಗೊತ್ತಿದ್ರೆ ನಾನು ಬರ್ತಾನೆ ಇರಲಿಲ್ಲ ಅಂತ. ಅರೇ ರವಿಮಾಮ ಯಾಕೆ ಈ ಮಾತು ಹೇಳಿದ್ರು ಅಂತ ಅಚ್ಚರಿ ಪಡ್ತಾ ಇದೀರಾ. ಹಾಗಾದ್ರೆ ಅವರ ಮಾತು ಪೂರ್ತಿ ಕೇಳಿ. ಶಿವಣ್ಣ ಬಂದ್ರೆ ನಾನು ಬಂದಂತೆ.. ನಾನು ಬಂದ್ರೆ ಶಿವಣ್ಣ ಬಂದಂತೆ.. ಸೋ ನಾವಿಬ್ರೂ ಒಂದೇ ವೇದಿಕೆ ಹಂಚಿಕೊಳ್ಳಲ್ಲ ಅಂದಿದ್ದಾರೆ ರವಿಮಾಮ. ಹೌದು ರವಿಚಂದ್ರನ್ ಮತ್ತು ಶಿವರಾಜ್​ಕುಮಾರ್ ಫ್ಯಾಮಿಲಿ ನಡುವಿನ ಸಂಬಂಧ ಅಷ್ಟು ಹಳೆಯದ್ದು ಮತ್ತು ಅಷ್ಟೇ ಗಟ್ಟಿಯಾದದ್ದು. ಅಸಲಿಗೆ ಶಿವಣ್ಣ-ರವಿಚಂದ್ರನ್ ಚಿಕ್ಕವಯಸ್ಸಿದಂಲೇ ಸ್ನೇಹಿತರು. 

ಡಾ.ರಾಜ್​ ಕುಮಾರ್ - ಲಕ್ಷ್ಮೀ ನಟನೆಯ ನಾ ನಿನ್ನ ಮರೆಯಲಾರೆ ಚಿತ್ರವನ್ನ ನಿರ್ಮಿಸಿದ್ದು ರವಿಚಂದ್ರನ್ ತಂದೆ ವೀರಾಸ್ವಾಮಿ. ಈ ಸಿನಿಮಾದ ರೊಮ್ಯಾಂಟಿಕ್ ಸಾಂಗ್ ನನ್ನಾಸೆಯಾ ಹೂವೆ ಶೂಟ್ ಮಾಡೋವಾಗ ಅದನ್ನ ನೋಡಲಿಕ್ಕೆ ಶಿವಣ್ಣ ಮತ್ತು ರವಿಚಂದ್ರನ್ ಹೋಗಿದ್ರಂತೆ. ನೀವಿನ್ನೂ ಚಿಕ್ಕವರು ಇಂಥಾ ಸಾಂಗ್ ನೋಡಬಾರದು ಅಂತ ಅವರನ್ನ ಹೊರಗೆ ಕಳಿಸಿದ್ರಂತೆ. ಆಗ ರವಿಮಾಮ ಶಿವಣ್ಣನಿಗೆ ಇವರೇನು ರೊಮ್ಯಾಂಟಿಕ್ ಸಾಂಗ್ ಮಾಡ್ತಾರೆ. ನಾನು ದೊಡ್ಡವನಾದ ಮೇಲೆ ಇದಕ್ಕಿಂತ ಮಸ್ತ್ ರೊಮ್ಯಾಂಟಿಕ್ ಸಾಂಗ್ ತೆಗೀತೀನಿ ಅಂದಿದ್ರಂತೆ. ಮುಂದೆ ಅದನ್ನ ಮಾಡಿಯೂ ತೋರಿಸಿದ್ರು ರವಿಚಂದ್ರನ್. 

ರವಿಚಂದ್ರನ್ ಮತ್ತು ಶಿವರಾಜ್​ಕುಮಾರ್ 1980ರ ದಶಕದಲ್ಲಿ ನಾಯಕರಾಗಿ ಚಿತ್ರರಂಗಕ್ಕೆ ಬಂದ್ರು. ಇಬ್ಬರೂ ಸೂಪರ್​ ಸ್ಟಾರ್​​ಗಳಾದ್ರು. ಆದ್ರೆ ಯಾವತ್ತಿಗೂ ಒಬ್ಬರಿಗೆ ಒಬ್ರು ಸ್ಪರ್ಧಿಗಳಾಗಲಿಲ್ಲ. ಒಬ್ಬರಿಗೊಬ್ರು ಸಾಥ್ ಕೊಡ್ತಾನೇ ಇಬ್ಬರೂ ಕನ್ನಡ ಚಿತ್ರರಂಗದ ಟಾಪ್ ಸ್ಟಾರ್ ಗಳಾಗಿ ಬೆಳೆದರು. 2002ರಲ್ಲಿ ರವಿಚಂದ್ರನ್ ಮತ್ತು ಶಿವರಾಜ್​ಕುಮಾರ್ ಕೋದಂಡರಾಮ ಚಿತ್ರದಲ್ಲಿ ಒಟ್ಟಾಗಿ ನಟನೆ ಮಾಡಿದ್ರು. ತೆರೆ ಮೇಲೆ ಕುಚಿಕುಗಳಾಗಿ ಕಾಣಿಸಿಕೊಂಡು ಫ್ಯಾನ್ಸ್​ಗೆ ಖುಷಿ ಕೊಟ್ಟಿದ್ರು. ಡಾ.ರಾಜ್​ ಬ್ಯಾನರ್​ನ ಯಾವುದೇ ಸಿನಿಮಾದ ಮುಹೂರ್ತ ಇದ್ರೂ ಅಲ್ಲಿ ಕ್ಲ್ಯಾಪ್ ಮಾಡೋದು ರವಿಚಂದ್ರನ್. ಪುನೀತ್ ರಾಜ್​ಕುಮಾರ್ ನಟನೆಯ ಅಪ್ಪು ಸಿನಿಮಾದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ್ದು ಕೂಡ ರವಿಚಂದ್ರನ್. 

ಅಷ್ಟರ ಮಟ್ಟಗೆ ಈ ಎರಡೂ ಫ್ಯಾಮಿಲಿ ನಡುವೆ ನಂಟಿದೆ. ಸದ್ಯ ಸೂತ್ರಧಾರಿ ಸಿನಿಮಾದ ಇವೆಂಟ್​ನಲ್ಲಿ ಭಾಗಿಯಾಗಿ ತಮಾಷೆ ಮಾಡ್ತಾ ಮಾಡ್ತಾನೇ ಚಂದನ್ ಶೆಟ್ಟಿಯ ಸೂತ್ರಧಾರಿಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ ಶಿವಣ್ಣ ಅಂಡ್ ರವಿಮಾಮ. ಹೌದು ಇವತ್ತು ಕನ್ನಡ ಚಿತ್ರೋದ್ಯಮ ಹಿಂದೆಂದಿಗಿಂತಲೂ ಕಷ್ಟದ ಸ್ಥಿತಿಯಲ್ಲಿದೆ. ಜನ ಚಿತ್ರಮಂದಿರಕ್ಕೆ ಬರ್ತಾ ಇಲ್ಲ, ಸಿಂಗಲ್ ಸ್ಕ್ರೀನ್ಸ್ ಬಾಗಿಲು ಹಾಕ್ತಾ ಇವೆ. ಚಿತ್ರರಂಗದ ವಿವಾದಗಳನ್ನ ಬಗೆಹರಿಸೋದಕ್ಕೆ ಒಬ್ಬ ಸಮರ್ಥ ನಾಯಕ ಇಲ್ಲ. ಇಂಥಾ ಸ್ಥಿತಿಯಲ್ಲಿ ಹಿರಿಯರಾದ ರವಿಚಂದ್ರನ್ - ಶಿವಣ್ಣ ಚಿತ್ರರಂಗದ ಸಾರಥ್ಯವಹಿಸಿಲಿ ಅನ್ನೋ ಕೂಗು ಉದ್ಯಮದಲ್ಲಿದೆ. ಸದ್ಯ ಸೂತ್ರಧಾರಿ ಇವೆಂಟ್​​ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿರೋ ಈ ದಿಗ್ಗಜರು ಅದ್ಯಾವಾಗ ಚಿತ್ರರಂಗದ ಸೂತ್ರಧಾರಿಗಳಾಗೋದಕ್ಕೆ ಮನಸು ಮಾಡ್ತಾರೆ ಕಾದುನೋಡಬೇಕು.

Related Video