Asianet Suvarna News Asianet Suvarna News

ಸೈಮಾ ವೇದಿಕೆಯಲ್ಲಿ ರಣ್ವೀರ್ ಸಖತ್ ಸ್ಟೆಪ್; ಪುಷ್ಪ ಹಾಡಿಗೆ ಕುಣಿದ ಬಾಲಿವುಡ್ ಸ್ಟಾರ್

ಬೆಂಗಳೂರಿನ ಸೈಮಾಗೆ ಬಾಲಿವುಡ್ ಸ್ಟಾರ್ ರಣ್ವೀರ್ ಸಿಂಗ್ ವಿಶೇಷ ಅತಿಥಿಯಾಗಿದ್ದರು. ರಣ್ವೀರ್ ಸೌತ್ ಸ್ಟಾರ್ ಜೊತೆ ಕುಣಿದು ಕುಪ್ಪಳಿಸಿದ್ದಾರೆ.

ಸೈಮಾ 2022 ಸಮಾರಂಭ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನೆರವೇರಿದೆ. ಮೊದಲ ಬಾರಿಗೆ ಸೈಮಾ ಬೆಂಗಳೂರಿನಲ್ಲಿ ನಡೆದಿದ್ದು ಕನ್ನಡಿಗರು ಹೆಮ್ಮೆಪಡುವಂತಾಗಿದೆ. ರಾಕಿಂಗ್ ಸ್ಟಾರ್ ಕಾರಣದಿಂದ ಸೈಮಾ ಬೆಂಗಳೂರಿಗೆ ಬರುವಂತೆ ಆಗಿದ್ದು ವಿಶೇಷ. ಈ ಬಾರಿಯ ಸೈಮಾ ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಿಸಲಾಗಿದೆ. ಸೈಮಾ 2022 ಸಮಾರಂಭದಲ್ಲಿ ಅಪ್ಪುಗೆ ವಿಶೇಷ ಗೌರವ ನೀಡಲಾಗಿದೆ. ಬೆಂಗಳೂರಿನ ಸೈಮಾಗೆ ಬಾಲಿವುಡ್ ಸ್ಟಾರ್ ರಣ್ವೀರ್ ಸಿಂಗ್ ವಿಶೇಷ ಅತಿಥಿಯಾಗಿದ್ದರು. ರಣ್ವೀರ್ ಸೌತ್ ಸ್ಟಾರ್ ಜೊತೆ ಕುಣಿದು ಕುಪ್ಪಳಿಸಿದ್ದಾರೆ. ಪುಷ್ಪ ಹಾಡಿಗೆ ರಣ್ವೀರ್ ಮಸ್ತ್ ಡಾನ್ಸ್ ಮಾಡಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆಯೂ ರಣ್ವೀರ್ ಸೂಪರ್ ಆಗಿ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು ಅಭಿಮಾನಿಗಳ ಹೃದಯ ಗೆದ್ದಿವೆ. 
 

Video Top Stories