ಪ್ಯಾನ್ ಇಂಡಿಯಾದಲ್ಲಿ ಚಾರ್ಲಿ ಹವಾ ಜೋರು; ಐಎಂಡಿಬಿ ನಲ್ಲಿ ಅತೀ ಹೆಚ್ಚು ರೇಟಿಂಗ್ ಪಡೆದ ಸಿನಿಮಾ

 777ಚಾರ್ಲಿ (777 Charlie) ಸಿನಿಮಾ ಬಿಡುಗಡೆಗೂ ಮುನ್ನವೇ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದು  ಐಎಂಡಿಬಿ ರೇಟಿಂಗ್ (IMDB Rating)  ನಲ್ಲಿಯೂ ಕೂಡ ಮೊದಲ ಸ್ಥಾನ ಪಡೆದಿದೆ. ಐಎಂಡಿಬಿ 63 ಪರ್ಸೆಂಟ್ ರೇಟಿಂಗ್ ನೀಡುವ ಮೂಲಕ ಚಾರ್ಲಿ ಸಿನಿಮಾ ಬೆಸ್ಟ್ ಎಂದಿದೆ.

Share this Video
  • FB
  • Linkdin
  • Whatsapp

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ಅಭಿನಯದ 777ಚಾರ್ಲಿ (777 Charlie) ಸಿನಿಮಾ ರಿಲೀಸ್ ಗೆ ರೆಡಿ ಇದೆ. ಇದೇ ತಿಂಗಳ ಎರಡನೇ ವಾರ ಸಿನಿಮಾ ರಿಲೀಸ್ ಆಗ್ತಿದ್ದು ಈಗಾಗಲೇ ಸಿನಿಮಾ ತಂಡ ಭಾರತದ ಮೂಲೆ ಮೂಲೆಯಲ್ಲಿ ಸುತ್ತಿ ಚಿತ್ರದ ಪ್ರಚಾರ ಮಾಡ್ತಿದೆ. ಟ್ರೇಲರ್ ನೊಡಿದವ್ರೆಲ್ಲರೂ ಸಿನಿಮಾ ನೋಡಲೇ ಬೇಕು ಅಂತ ಈಗಾಗಲೇ ಡಿಸೈಡ್ ಮಾಡಿದ್ದು ನಾಲ್ಕು ವರ್ಷದ ಪರಿಶ್ರಮವನ್ನ ಪ್ರೇಕ್ಷಕರ ಮುಂದಿಡಲು ಚಿತ್ರತಂಡ ಉತ್ಸಾಹದಿಂದ ಕಾಯ್ತಿದೆ.

50 ನೇ ದಿನಕ್ಕೆ ಕಾಲಿಟ್ಟ ಕೆಜಿಎಫ್ 2; ಬಾಕ್ಸ್ ಆಫೀಸ್ ಮಾನ್ಸ್ಟರ್ ಆದ ರಾಕಿಭಾಯ್..!

ಇನ್ನು 777ಚಾರ್ಲಿ ಸಿನಿಮಾ ಬಿಡುಗಡೆಗೂ ಮುನ್ನವೇ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದು ಐಎಂಡಿಬಿ ರೇಟಿಂಗ್ ನಲ್ಲಿಯೂ ಕೂಡ ಮೊದಲ ಸ್ಥಾನ ಪಡೆದಿದೆ. ಐಎಂಡಿಬಿ 63 ಪರ್ಸೆಂಟ್ ರೇಟಿಂಗ್ ನೀಡುವ ಮೂಲಕ ಚಾರ್ಲಿ ಸಿನಿಮಾ ಬೆಸ್ಟ್ ಎಂದಿದೆ.

777ಚಾರ್ಲಿ ಸಿನಿಮಾ ಅಧಿಕೃತವಾಗಿ ಬಿಡುಗಡೆ ಆಗುವ ಒಂದು ವಾರಕ್ಕೆ ಮುಂಚೆಯೇ 21 ಸಿಟಿಯಲ್ಲಿ ಪ್ರಿಮಿಯರ್ ಶೋ ಆಗಲಿದೆ...ಟಿಕೆಟ್ ಖರೀದಿ ಮಾಡಿ ಸಿನಿಮಾ ನೋಡೋ ಅವಕಾಶ ಪ್ರೇಕ್ಷಕರಿಗೆ ನೀಡಿದೆ ಚಾರ್ಲಿ ತಂಡ ...

Related Video