ಟೋಬಿಗೆ ಕೌಂಟ್‌ಡೌನ್.. ರೀವಿಲ್ ಆಯ್ತು ಮೇಕಿಂಗ್: 10 ಕೋಟಿ ಬಜೆಟ್‌ನಲ್ಲಿ ಸಿದ್ಧವಾಯ್ತು ಸಿನಿಮಾ ..!
'ಟೋಬಿ' ನೋಡಲು ರೆಡಿನಾ ಬುಕ್ ಮಾಡಿ ಟಿಕೆಟ್..!
10 ಕೋಟಿ ಬಜೆಟ್‌ನಲ್ಲಿ ಸಿದ್ಧವಾದ ಸಿನಿಮಾ ಟೋಬಿ..!
ಬಾಸಿಲ್ ನಿರ್ದೇಶನದ ಮಾಸ್ ಸಿನಿಮಾ 'ಟೋಬಿ'
ಸ್ಯಾಂಡಲ್‌ವುಡ್‌ನಲ್ಲಿ ಟೋಬಿ ಜಪ ನಡೆಯುತ್ತಿದೆ. ಇದೇ ವರಮಹಾಲಕ್ಷ್ಮಿ ಹಬ್ಬದ ದಿನ ಟೋಬಿ ಮಾರಿ ಹಬ್ಬ ಮಾಡ್ತಾನೆ. ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ರೌಧ್ರಾವತಾರ ಗಮನ ಸೆಳೆಯುತ್ತಿದ್ದು, ಕರಾವಳಿ ಕಥೆಯ ಟೋಬಿ(Toby) ಮೇಲೆ ನಂಬಿಕೆ ಹೆಚ್ಚಾಗಿದೆ. ಹರಕೆ ಕುರಿ ತಪ್ಪಿಸಿಕೊಂಡ್ರೆ ಕುರಿ ಆಗಿರೋದಿಲ್ಲ ಊರಿಗೆ ವಾಪಾಸ್ ಬಂದ್ರೆ ಮಾರಿ ಆಗಿರುತ್ತದೆ. ಇದು ಟೋಬಿ ಚಿತ್ರದ ಅಸಲಿ ಡೈಲಾಗ್. ಈ ಡೈಲಾಗ್ ಕೇಳಿದ್ರೇನೆ ಟೋಬಿ ಎಂಥಾ ಸಿನಿಮಾ ಅನ್ನೋ ಸುಳಿವು ಸಿಗುತ್ತೆ. ಇಲ್ಲಿ ಟೋಬಿ ರಾಜ್ ಬಿ ಶೆಟ್ಟಿ. ಇದೀಗ ಟೋಬಿ ರಿಲೀಸ್‌ಗೆ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ. ಈಗ ಕರಾವಳಿ ಕಥೆಯ ಟೋಬಿ ಮೇಕಿಂಗ್ ರಿವಿಲ್ ಆಗಿದೆ. ಕಾರವಾರದಲ್ಲಿ ಬದುಕಿದ್ದ ವಿಲಕ್ಷಣ ವ್ಯಕ್ತಿಯ ಕಥೆಯೇ ‘ಟೋಬಿ’ ಟಿ.ಕೆ.ದಯಾನಂದ್ ಬರೆದ ಕಥೆಗೆ 10 ಕೋಟಿ ಬಂಡವಾಳ ಹೂಡಿ ನಿರ್ಮಾಣ ಮಾಡಲಾಗಿದೆ. ಒಬ್ಬ ಶೋಷಿತ ಟೋಬಿಯ ಮಾರಿಯಾದ್ರೆ ಏನೆಲ್ಲಾ ಆಗುತ್ತೆ ಅನ್ನೋದು ಸಿನಿಮಾ. ಇದಕ್ಕೆ ಕರಾವಳಿ ಕಮರ್ಷಿಯಲ್ ಟಚ್ ಕೊಟ್ಟು ನಿರ್ಮಾಣ ಮಾಡಿದ್ದಾರೆ. ಕಂಟೆಂಟ್ ಕಮ್ ಕಮರ್ಷಿಯಲ್ ಶೇಡ್ ಇಡೀ ಈ ಸಿನಿಮಾ ಬಗ್ಗೆ ರಾಜ್ ಬಿ ಶೆಟ್ಟಿಗೆ ಸಿಕ್ಕಾಪಟ್ಟೆ ನಂಬಿಕೆ ಇದೆ. ರಾಜ್ ಬಿ ಶೆಟ್ಟಿಯ(Raj B. Shetty) ಟೋಬಿಯಲ್ಲಿ ಸಂಯುಕ್ತಾ ಹೊರನಾಡು, ಚೈತ್ರಾ ಆಚಾರ್ ನಾಯಕಿರು. ಬಾಸಿಲ್ ಡೈರೆಕ್ಷನ್ ಈ ಚಿತ್ರಕ್ಕಿದೆ. ಮಿಥುನ್ ಮುಕುಂದನ್ ಸಂಗೀತ ಕೊಟ್ಟಿದ್ದಾರೆ ಜೆಸ್ಟ್ ಒಂದು ಟ್ರೈಲರ್ ಹಾಗೂ ಫಸ್ಟ್ ಲುಕ್ ನಿಂದ ಸ್ಯಾಂಡಲ್‌ವುಡ್ ಸಿನಿ ಪ್ರೇಕ್ಷಕರ ನಿದ್ದೆ ಕೆಡಿಸಿರೋ ಟೋಬಿ ಆಗಸ್ಟ್ 25ಕ್ಕೆ ತೆರೆ ಮೇಲೆ ಬರಲಿದೆ. ಹೀಗಾಗಿ ಟೋಬಿ ಟಿಕೆಟ್ ಬುಕ್ಕಿಂಗ್ ಕೌಂಟರ್ ಕೂಡ ಓಪನ್ ಆಗಿದ್ದು, ಶೆಟ್ರ ಟೋಬಿ ನೋಡೋರೂ ಟಿಕೆಟ್ ಬುಕ್ ಮಾಡಿಕೊಳ್ಳಬಹುದು.
ಇದನ್ನೂ ವೀಕ್ಷಿಸಿ: 'ಸಪ್ತ ಸಾಗರದಾಚೆ ಎಲ್ಲೋ' ಹೇಗೆ ಸಿದ್ಧವಾಯ್ತು ? ಮೇಕಿಂಗ್ ವಿಡಿಯೋ ಇಲ್ಲಿದೆ..