Vikrant Rona: ಸುದೀಪ್ ಅವರ ಟ್ರೇಲರ್ ಮೊದಲು ನೋಡೋ ಅವಕಾಶ ಸಿಕ್ಕಿರೋದು ಪುಣ್ಯ: ರಾಜ್ ಬಿ ಶೆಟ್ಟಿ

ನಾನು ಸುದೀಪ್ ಅವರ ಧಮ್ ಸಿನಿಮಾ ರಿಲೀಸ್ ಆದಾಗ ಮನೆಯಲ್ಲಿ ಹುಷಾರಿಲ್ಲ ಅಂತ ಸುಳ್ಳು ಹೇಳಿ ಸಿನಿಮಾಗೆ ಹೋಗಿದ್ದೆ, ನಿನ್ನೆ ಅವರ ವಾಯ್ಸ್ ಮೆಸೆಜ್‌ನಲ್ಲಿ ಬರಬೇಕು ಅಂತ ಬಂದಾಗ ಭಯ ಆಯ್ತು ಎಂದು ರಾಜ್ ಬಿ ಶೆಟ್ಟಿ ಹೇಳಿದರು.

Share this Video
  • FB
  • Linkdin
  • Whatsapp

ಓರಾಯನ್​ ಮಾಲ್​ನಲ್ಲಿ ಬುಧವಾರ 'ವಿಕ್ರಾಂತ್​ ರೋಣ' ಟ್ರೇಲರ್​​ ಲಾಂಚ್ ಕಾರ್ಯಕ್ರಮ ನಡೆಯಿತು. ಚಿತ್ರರಂಗದ ದಿಗ್ಗಜರು ಬಂದು ತ್ರಿಡಿಯಲ್ಲಿ ವಿಕ್ರಾಂತ್​ ರೋಣನ ಟ್ರೇಲರ್​ ಕಣ್ಣು ತುಂಬಿಕೊಂಡರು. ಸಿನಿಮಾದ ಟ್ರೇಲರ್​ ನೋಡಿದ ಬಳಿಕ ಎಲ್ಲರೂ ವೇದಿಕೆ ಮೇಲೆ ಬಂದು ತಮ್ಮ ಅಭಿಪ್ರಾಯ ತಿಳಿಸಿದರು. ಈ ವೇಳೆ ನಿರ್ದೇಶಕ ರಾಜ್ ಬಿ ಶೆಟ್ಟಿ ಸುದೀಪ್ ಬಗ್ಗೆ ಹಾಗೂ ಚಿತ್ರದ ಟ್ರೇಲರ್ ಬಗ್ಗೆ ಮಾತನಾಡಿದ್ದಾರೆ. ನಾನು ಧಮ್ ಸಿನಿಮಾ ರಿಲೀಸ್ ಆದಾಗ ಮನೆಯಲ್ಲಿ ಹುಷಾರಿಲ್ಲ ಅಂತ ಸುಳ್ಳು ಹೇಳಿ ಸಿನಿಮಾಗೆ ಹೋಗಿದ್ದೆ, ನಿನ್ನೆ ಅವರ ವಾಯ್ಸ್ ಮೆಸೆಜ್‌ನಲ್ಲಿ ಬರಬೇಕು ಅಂತ ಬಂದಾಗ ಭಯ ಆಯ್ತು, ಅವರ ಸಿನಿಮಾ ಸುಳ್ಳು ಹೇಳಿ ನೋಡ್ತಿದೆ. ಈಗ ಅವ್ರ ಟ್ರೇಲರ್ ಅನ್ನು ಮೊದಲು ನೋಡೋ ಅವಕಾಶ ಸಿಕ್ಕಿರೋದು ಪುಣ್ಯ ಎಂದು ರಾಜ್ ಬಿ ಶೆಟ್ಟಿ ಹೇಳಿದರು. ಇನ್ನು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ನನ್ನ ಗಾಡ್ ಫಾದರ್ ಸುದೀಪ್ ಸರ್. ನಾನು ಇವತ್ತು ಮೆಲೋಡಿ ಕಿಂಗ್ ಅಂತ ಕರೆಸಿಕೊಳ್ತಿದ್ರೆ ಅದಕ್ಕೆ ಸುದೀಪ್ ಅವರು ಕಾರಣ‌ ಎಂದು ತಿಳಿಸಿದರು.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video