ಸ್ಪಂದನಾ ಇಲ್ಲದೆ ರಾಘು ಜೀವನ ಶೂನ್ಯ; ನಟ ಹರೀಶ್ ರಾಜ್
ಸ್ಪಂದನಾ ಇಲ್ಲದೇ ರಾಘು ಜೀವನ ಮುಂದೆ ಹೇಗೆ ಎನ್ನುವುದೇ ಒಂದು ಆತಂಕ ಆಗಿದೆ. ಒಳ್ಳೆಯವರಿಗೇ ಹೋಗೆ ಯಾಕೆ ಆಗುತ್ತೆ ಎನ್ನುವುದು ತಿಳಿಯುತ್ತಿಲ್ಲ.
ಬೆಂಗಳೂರು (ಆ.09): ಬೆಳದಿಂಗಳಾಗಿ ಬಾ ಚಿತ್ರದಲ್ಲಿ ನಾವು ಜೊತೆಯಾಗಿ ಕೆಲಸ ಮಾಡಿದ್ದೇವೆ. ಉಳಿದಂತೆ ಹಲವು ಚಿತ್ರರಂಗದ ಕಾರ್ಯಕ್ರಮಗಳಲ್ಲಿ ನಾವು ಭೇಟಿಯಾಗಿ ಕುಶಲೋಪರಿ ವಿಚಾರ ಮಾಡುತ್ತಿದ್ದೆವು. ಸ್ಪಂದನಾ ಮತ್ತು ವಿಜಯ್ ರಾಘವೇಂದ್ರ ಅವರು ತುಂಬಾ ಸರಳ ಆಗಿರುತ್ತಿದ್ದರು. ಸ್ಪಂದನಾ ಅವರನ್ನು ಮೂರ್ನಾಲ್ಕು ಬಾರಿ ಭೇಟಿ ಆಗಿದ್ದೆವು. ಆದರೆ, ಈಗ ಸ್ಪಂದನಾ ಇಲ್ಲದೇ ರಾಘು ಜೀವನ ಮುಂದೆ ಹೇಗೆ ಎನ್ನುವುದೇ ಒಂದು ಆತಂಕ ಆಗಿದೆ. ಒಳ್ಳೆಯವರಿಗೇ ಹೋಗೆ ಯಾಕೆ ಆಗುತ್ತೆ ಎನ್ನುವುದು ತಿಳಿಯುತ್ತಿಲ್ಲ. ಆದರೆ, ಈಗ ಅವರ ಚಿಕ್ಕ 14 ವರ್ಷದ ಮಗನನ್ನು ನೋಡಿ ರಾಘು ಧೈರ್ಯವನ್ನು ತೆಗೆದುಕೊಂಡು ಮುಂದಿನ ಜೀವನವನ್ನು ಮಾಡಬೇಕಿದೆ. ಲೈಫ್ ಈಸ್ ಅನ್‌ಸರ್ಟೇನ್ ಎನ್ನುವುದಕ್ಕೆ ಇದು ಜ್ವಲಂತ ಉದಾಹರಣೆ ಆಗಿದೆ. ಸ್ಪಂದನಾ ಸಾವಿನ ಸುದ್ದಿಯನ್ನು ಕೇಳಿದ ತಕ್ಷಣವೇ ಶಾಕಿಂಗ್ ಆಗಿದ್ದು, ನಂಬಲಿಕ್ಕೆ ಅಸಾಧ್ಯವಾಗಿತ್ತು. ಆದರೆ, ಈಗ ಅದನ್ನು ನಾವು ಒಪ್ಪಿಕೊಳ್ಳಬೇಕಾಗಿದೆ ಎಂದು ಗೆಳಯ ವಿಜಯ್ ರಾಘವೇಂದ್ರನಿಗೆ ಸಾಂತ್ವನ ಹೇಳಿದ ನಟ ಹರೀಶ್ ರಾಜ್ ತಿಳಿಸಿದರು.