Asianet Suvarna News Asianet Suvarna News

ಫಾದರ್ಸ್ ಡೇ ಸ್ಪೆಷಲ್ ಫೋಟೋ ಹಂಚಿಕೊಂಡ ಸಿಂಡ್ರೆಲಾ: ಮೈ ಡ್ಯಾಡಿ ಈಸ್ ಮೈ ಹೀರೋ ಎಂದ ರಾಧಿಕಾ

ಫಾದರ್ಸ್ ಡೇ ಸ್ಪೆಷಲ್ ಫೋಟೋ ಹಂಚಿದ ಸಿಂಡ್ರೆಲಾ!
ಅಪ್ಪನ ಮೇಲಿನ ಪ್ರೀತಿ ತೆರೆದಿಟ್ಟ ಯಶ್ ಪತ್ನಿ ರಾಧಿಕಾ!
ಯಶ್ ಮಕ್ಕಳಿಗೆ ಅಪ್ಪನ ಮೇಲೆ ಎಷ್ಟು ಪ್ರೀತಿ ಇದೆ ನೋಡಿ!

First Published Jun 19, 2023, 3:43 PM IST | Last Updated Jun 19, 2023, 3:43 PM IST

ವಿಶ್ವ ಅಪ್ಪಂದಿರ ದಿನ ಎಷ್ಟು ವಿಶೇಷ ಅಂತ ಗೊತ್ತಾಗ್ಬೇಕು ಅಂದ್ರೆ ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಹಂಚಿಕೊಂಡಿರೋ ಈ ಫೋಟೋ ನೋಡಿದ್ರೆ ಗೊತ್ತಾಗುತ್ತೆ. ವಿಶ್ವ ಅಪ್ಪಂದಿರ ದಿನಾಚರಣೆಯಂದು ಅಪ್ಪನ ಜೊತೆಗಿನ ಬಾಂಧವ್ಯವನ್ನ ವಿವರಿಸಿ ಚೆಂದದ ಪೋಸ್ಟ್‌ವೊಂದನ್ನ ರಾಧಿಕಾ ಶೇರ್ ಮಾಡಿದ್ದಾರೆ. ರಾಧಿಕಾ ಪಂಡಿತ್ ಸಕ್ಸಸ್‌ ಫೇಲ್ಯೂರ್ ಪ್ರತಿ ಹೆಜ್ಜೆಯಲ್ಲಿ ಜೊತೆಗಿದ್ದ ತಂದೆ ಕೃಷ್ಣ ಪ್ರಸಾದ್ ಪಂಡಿತ್ ಜೊತೆಗಿರೋ ಫೋಟೋ ಹಾಗೂ ಯಶ್ ತನ್ನ ಮಕ್ಕಳ ಜೊತೆ ಇರೋ ಫೋಟೋವನ್ನು ರಾಧಿಕಾ ಪಂಡಿತ್‌ ಹಂಚಿಕೊಂಡಿದ್ದಾರೆ. ತಂದೆಯ ಮುದ್ದಿನ ಮಗಳು ನಾನು ಎಂದಿದ್ದಾರೆ. ನಾನು ಯಾವಾಗಲೂ ಅಪ್ಪನ ಹುಡುಗಿ ಅವನ ಬಳಿಗೆ ಓಡುತ್ತೇನೆ. ನನ್ನಪ್ಪ ನನ್ನ ಮಾರ್ಗದರ್ಶಕ, ನನ್ನ ಹೀರೋ ಎಂದಿರೋ ರಾಧಿಕಾ, ನನ್ನ ತಂದೆ ಜೊತೆಗಿನ ಬಾಂಧವ್ಯ ಇರುವ ಹಾಗೆಯೇ, ಐರಾ ಮತ್ತು ಯಥರ್ವ್ ಕೂಡ ಅವರ ತಂದೆ ಯಶ್ ಜೊತೆ ಇದ್ದಾರೆ. ಇದನ್ನೂ ನೋಡಲು ಖುಷಿಯಾಗುತ್ತದೆ ಎಂದಿದ್ದಾರೆ.

ಇದನ್ನೂ ವೀಕ್ಷಿಸಿ: ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಶುರು ಕ್ರಿಕೆಟ್ ಹಬ್ಬ: ದುಬೈನಲ್ಲಿ ಸೆಲೆಬ್ರೆಟಿ ಆಟಗಾರರ ಬಿಡ್ಡಿಂಗ್.!

Video Top Stories