ಮತ್ತೊಮ್ಮೆ ಜೋಡಿಯಾದ ಸತೀಶ್-ರಚಿತಾ ರಾಮ್! ಅದ್ಧೂರಿಯಾಗಿ ಸೆಟ್ಟೇರಿತು ‘ಅಯೋಗ್ಯ-2 ’ ಸಿನಿಮಾ!
ರಚಿತಾ ರಾಮ್ ಮತ್ತು ಸತೀಶ್ ನೀನಾಸಂ ಅಭಿನಯದ ಅಯೋಗ್ಯ-2 ಚಿತ್ರದ ಮುಹೂರ್ತ ಅದ್ದೂರಿಯಾಗಿ ನೆರವೇರಿದೆ. ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನೆನಪಿರಲಿ ಪ್ರೇಮ್, ಶ್ರೇಯಸ್ ಮಂಜು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸ್ಯಾಂಡಲ್‌ವುಡ್‌ನ ಸೂಪರ್ ಸಕ್ಸಸ್ ಜೋಡಿಗಳಲ್ಲಿ ಒಂದಾಗಿರುವ ರಚಿತಾ ರಾಮ್ ಹಾಗೂ ಸತೀಶ್ ನೀನಾಸಂ ಮತ್ತೆ ಒಂದಾಗಿ ಬರ್ತಿದ್ದು, ಅಯೋಗ್ಯ-2 ಮೂಲಕ ಮೋಡಿ ಮಾಡೋದಕ್ಕೆ ಸಜ್ಜಾಗಿದ್ದಾರೆ. ಸದ್ಯ ಅಯೋಗ್ಯ-2 ಸಿನಿಮಾ ಮುಹೂರ್ತ ಅದ್ದೂರಿಯಾಗಿ ನಡೆದಿದ್ದು, ಅಯೋಗ್ಯನ ಆಟ ಶುರುವಾಗಿದೆ.ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಅಯೋಗ್ಯ-2 ಚಿತ್ರಕ್ಕೆ ಕ್ಲ್ಯಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಹಾರೈಸಿದರು. ಮುಹೂರ್ತ ಸಮಾರಂಭದಲ್ಲಿ ಇಡೀ ಸಿನಿಮಾತಂಡದ ಜೊತೆಗೆ ನೆನಪಿರಲಿ ಪ್ರೇಮ್, ನಟ ಶ್ರೇಯಸ್ ಮಂಜು, ಪ್ರಮೋದ್ ಸೇರಿದಂತೆ ಅನೇಕ ಕಲಾವಿದರು ಹಾಜರಿದ್ದು ಸಿನಿಮಾತಂಡಕ್ಕೆ ಶುಭಹಾರೈಸಿದರು.
ಸ್ಮಿಮ್ ಸೂಟ್ ಹಾಕು ಎಂದು ಡೈರೆಕ್ಟರ್ ಹೇಳ್ದಾಗ, ಲಂಗಾ ಎತ್ತಿ ತೊಡೆ ತೋರಿಸಿದ್ರು ನಟಿ ಲಕ್ಷ್ಮೀ!