Asianet Suvarna News Asianet Suvarna News

'ವಿಕ್ರಾಂತ್ ರೋಣ' ಗೆ ಪಿವಿಆರ್ ಸಾಥ್, ಜೋರಾಗಿದೆ ಪವರ್, ಖದರ್..!

ಭಾರತೀಯ ಸಿನಿ ಕ್ಷೇತ್ರದಲ್ಲೇ ‘ವಿಕ್ರಾಂತ್ ರೋಣ’(Vikrant Rona) ಸೌಂಡು ಜೋರಾಗಿದೆ.  ಈ ಸಿನಿಮಾದ ಗ್ಲಿಮ್ಸ್‌ಗಳು Glimpse) ಸಿನಿ ಪ್ರೇಕ್ಷಕರನ್ನ ಗುಮ್ಮನಂತೆ ಪದೇ ಪದೇ ಕಾಡುತ್ತಿದೆ. ವಿಕ್ರಾಂತ್ ರೋಣ ಸಿನಿಮಾದ ಜೊತೆ ಭಾರತೀಯ ಚಿತ್ರರಂಗದ ದೊಡ್ಡ ದೊಡ್ಡ ಕಂಪೆನಿಗಳು ಪಾಲುದಾರಿಕೆ ಹೊಂದುತ್ತಿವೆ. 

ಭಾರತೀಯ ಸಿನಿ ಕ್ಷೇತ್ರದಲ್ಲೇ ‘ವಿಕ್ರಾಂತ್ ರೋಣ’(Vikrant Rona) ಸೌಂಡು ಜೋರಾಗಿದೆ.  ಈ ಸಿನಿಮಾದ ಗ್ಲಿಮ್ಸ್‌ಗಳು Glimpse) ಸಿನಿ ಪ್ರೇಕ್ಷಕರನ್ನ ಗುಮ್ಮನಂತೆ ಪದೇ ಪದೇ ಕಾಡುತ್ತಿದೆ. ವಿಕ್ರಾಂತ್ ರೋಣ ಸಿನಿಮಾದ ಜೊತೆ ಭಾರತೀಯ ಚಿತ್ರರಂಗದ ದೊಡ್ಡ ದೊಡ್ಡ ಕಂಪೆನಿಗಳು ಪಾಲುದಾರಿಕೆ ಹೊಂದುತ್ತಿವೆ. ಬಿಟೌನ್ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ (Salman Khan) ಈ ಸಿನಿಮಾದ ಪ್ರಸೆಂಟ್ ಹಾಗು ಪ್ರಮೋಷನ್ ಜವಾಬ್ಧಾರಿ ವಹಿಸಿಕೊಂಡ ಬಳಿಕ ಇದೀಗ ಭಾರತೀಯ ಚಿತ್ರರಂಗದ ದೊಡ್ಡ ಸಿನಿಮಾ ವಿತರಣೆ ಸಂಸ್ಥೆ ಪಿ.ವಿ.ಆರ್ (PVR)ವಿಕ್ರಾಂತ್ ರೋಣನ ಜೊತೆ ಕೊಲಾಬ್ರೇಟ್ ಆಗಿದೆ. ಹಿಂದಿ ಭಾಷೆಯ ವಿಕ್ರಾಂತ್ ರೋಣನ್ನನ್ನ ಉತ್ತರ ಭಾರತದಾದ್ಯಂತ ವಿತರಣೆ ಮಾಡುತ್ತಿದೆ ಪಿವಿಆರ್.  

ಪಿವಿಆರ್ (PVR) ಕಂಪನಿ ನೂರಾರು ಸಿನಿಮಾಗಳನ್ನ ವಿಶ್ವದಾದ್ಯಂತ ವಿತರಣೆ ಮಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ಅಮೀರ್ ಖಾನ್ (Aamir Khan) ಆಲ್ ಮೋಸ್ಟ್ ಎಲ್ಲಾ ಸಿನಿಮಾಗಳನ್ನ ವಿತರಣೆ ಮಾಡಿರೋದು ಇದೇ ಡಿಸ್ಟ್ರಿಬ್ಯೂಷನ್ ಸಂಸ್ಥೆ. ಅಷ್ಟೆ ಅಲ್ಲ ಬಿಗ್ ಸ್ಕ್ರೀನ್ ಕ್ವಾಲಿಟಿ ವಿಚಾರದಲ್ಲಿ ಪಿವಿಆರ್‌ಗೆ ದೊಡ್ಡ ಗೌರವ ಇದೆ. ಇದೀಗ ವಿಕ್ರಾಂತ್ ರೋಣ ಸಿನಿಮಾ ನೋಡಿ ಇಷ್ಟ ಪಟ್ಟು ತಾವಾಗೆ ಮುಂದೆ ಬಂದು ಚಿತ್ರವನ್ನ ಉತ್ತರ ಭಾರತದಾದ್ಯಂತ ವಿತರಣೆ ಮಾಡೋ ಜವಾಬ್ಧಾರಿ ವಹಿಸಿಕೊಂಡಿದ್ದಾರೆ. 

ಬಾಲಿವುಡ್ ಸೆಕ್ಸಿ ಕ್ವೀನ್ ಸನ್ನಿ ಲಿಯೋನ್ ಮೊನ್ನೆ ಮೊನ್ನೆಯಷ್ಟೆ ಬೆಂಗಳೂರಿಗೆ ಬಂದು ಕರ್ನಾಟಕದಲ್ಲಿರೋ ತನ್ನ ಅಭಿಮಾನಿಗಳ ಎದೆ ಬಡಿತ ಹೆಚ್ಚಿಸಿ ಹೋಗಿದ್ದಾರೆ. ಇದೀಗ ಸನ್ನಿ ಬಳಿಕ ಬೆಂಗಳೂರಲ್ಲಿ ಜಾಕ್ವೆಲಿನ್ ಜಾತ್ರೆ ಶುರುವಾಗ್ತಿದೆ. ವಿಕ್ರಾಂತ್ ರೋಣ ಸಿನಿಮಾದ ಸ್ಪೆಷಲ್ ಸಾಂಗ್ ನಲ್ಲಿ ಸೊಂಟ ಬಳಕಿಸಿರೋ ಈ ಶ್ರೀಲಂಕಾದ ಮಿಂಚುಳ್ಳಿ ಅದೇ ಸಾಂಗ್ ರಿಲೀಸ್ ಮಾಡೋದಕ್ಕೆ ಬೆಂಗಳೂರಿಗೆ ಬರ್ತಿದ್ದಾರೆ. ವಿಕ್ರಾಂತ್ ರೋಣ ಸಿನಿಮಾದಲ್ಲಿ ಗಡಂಗ್ ರಕ್ಕಮ್ಮನಾಗಿ ಮಿಂಚೋ ಜಾಕ್ವೆಲಿನ್ ಫರ್ನಾಂಡೀಸ್ ಮೇ 23ರಂದು ವಿಕ್ರಾಂತ್ ರೋಣ ಸಿನಿಮಾದ ಸ್ಪೆಷಲ್ ಸಾಂಗ್ ರಿಲೀಸ್ ಮಾಡಲಿದ್ದಾರೆ.
 

Video Top Stories