ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ: ಅಭಿಮಾನಿಗಳಿಂದ ಅಪ್ಪು ರಥ, ಮಕ್ಕಳಿಂದ ಹಾಡು

ಇಂದು ಅಪ್ಪುಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಪುನೀತ್ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.

Share this Video
  • FB
  • Linkdin
  • Whatsapp

ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಕಾರ್ಯಕ್ರಮ ವೀಕ್ಷಣೆಗೆ 10 ಎಲ್‌.ಇ.ಡಿ ಪರದೆಯ ವ್ಯವಸ್ಥೆ ಮಾಡಲಾಗಿದೆ. ಈ ಸಮಾರಂಭವನ್ನು ಕಣ್ಣು ತುಂಬಿಕೊಳ್ಳಲು ಶಾಲಾ ಮಕ್ಕಳು ಬಂದಿದ್ದು, ವಿಧಾನ ಸೌಧದ ಎದುರು ಶಾಲಾ ಮಕ್ಕಳು ಹಾಡು ಹೇಳಿದ್ದಾರೆ. ಅನುಪಮಾ ಶಾಲಾ ವಿದ್ಯಾರ್ಥಿಗಳಿಂದ 'ಬೊಂಬೆ ಹೇಳುತೈತೆ' ಹಾಡನ್ನು ಮಾಡಲಾಗಿದೆ. ಇನ್ನು ಪುನೀತ್‌ ನಿವಾಸ ಬಳಿ ಅಭಿಮಾನಿಗಳ ಸಾಗರ ಸೇರಿದ್ದು, ರಾಜ್ಯೋತ್ಸವ ಹಿನ್ನೆಲೆ ಅಭಿಮಾನಿಗಳಿಂದ ಪುನೀತ್‌ ಭಾವಚಿತ್ರ ಇಟ್ಟು ಬೃಹತ್‌ ಮೆರವಣಿಗೆ ಮಾಡಲಾಗಿದೆ. ಕನ್ನಡಾಂಬೆಯ ಮೆರವಣಿಗೆ ಜೊತೆ ಪುನೀತ್‌ ಮೆರವಣಿಗೆಯು ಸಾಗಿದೆ.

ಬಾಹುಬಲಿ 2 ಅನ್ನೂ ಮೀರಿದ ಕಾಂತಾರ, 5ನೇ ವಾರಾಂತ್ಯದಲ್ಲಿ ರೆಕಾರ್ಡ್‌ ಗಳಿಕೆ!

Related Video