ನಾಲ್ವರು ಅಂಧರ ಪಾಲಿಗೆ ಬೆಳಕಾಗಿರುವ 'ಅಪ್ಪು' ಕಣ್ಣುಗಳು!

ಪುನೀತ್ ಅಗಲಿಕೆ ಬಳಿಕ ರಾಜ್ಯಾದ್ಯಂತ ನೇತ್ರದಾನ ಮಾಡುವವವರ ಸಂಖ್ಯೆ ಹೆಚ್ಚಾಗಿದೆ. ಪುನೀತ್ ಹುಟ್ಟುಹಬ್ಬದ ದಿನ ಒಂದೊಂದು ಜಿಲ್ಲೆಯಲ್ಲೂ ಸಾವಿರಾರು ಜನರು ನೇತ್ರದಾನ ಮಾಡ್ತಾರೆ. ರಾಜ್ಯಾದ್ಯಂತ ಲಕ್ಷಾಂತರ ಪುನೀತ್ ಅಭಿಮಾನಿಗಳು..

First Published Oct 30, 2024, 5:21 PM IST | Last Updated Oct 30, 2024, 5:21 PM IST

ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಅನ್ನೋದು ಪುನೀತ್ ನಟನೆಯ ಪರಮಾತ್ಮದ ಸಿನಿಮಾ ಸಾಲು. ಪುನೀತ್ ಪಾಲಿಗೆ ಇದು ಅತ್ಯಂತ ಹೇಳಿ ಮಾಡಿಸಿದ ಸಾಲು. ಅಪ್ಪು ನಮ್ಮನ್ನ ಅಗಲಿದ್ರೂ ಅವರು ನಮ್ಮೊಂದಿಗೆ ಜೀವಂತವಾಗಿದ್ದಾರೆ. ಅದ್ರಲ್ಲೂ ಅಪ್ಪು ನೇತೃದಾನ ಮಾಡಿದ್ದು ನಾಲ್ವರು ಅಂಧರ ಪಾಲಿಗೆ ಕಣ್ಣಾಗಿದ್ದಾರೆ. ಆ ಕಣ್ಣುಗಳ ಮೂಲಕವೇ ನಮ್ಮನ್ನ ನೋಡ್ತಾ ಇದ್ದಾರೆ.

ನಾಲ್ವರು ಅಂಧರ ಪಾಲಿಗೆ ಬೆಳಕಾಗಿರೋ ಅಪ್ಪು ಕಣ್ಣುಗಳು; ಆ ನಾಲ್ಕು ಕಂಗಳ ಮೂಲಕ ನಮ್ಮನ್ನೇ ನೋಡ್ತಿದ್ದಾರೆ  ಪುನೀತ: ತಂದೆ ವರನಟ, ಡಾ.ರಾಜ್‌ಕುಮಾರ್ ಅವರಂತೆಯೇ ಪುತ್ರ ಪುನೀತ್ ರಾಜ್‌ಕುಮಾರ್ ಕೂಡ ನೇತ್ರದಾನ ಮಾಡಿದ್ರು. ಪುನೀತ್ ರಾಜ್‌ಕುಮಾರ್  ಅಕಾಲಿಕ ಮರಣದ ನಂತರ ಅವರ ಕಣ್ಣುಗಳನ್ನ ದಾನ ಮಾಡಲಾಯಿತು. ಪುನೀತ್ ದಾನ ಮಾಡಿದ ಎರಡು ಕಣ್ಣುಗಳಿಂದ ನಾರಾಯಣ ನೇತ್ರಾಲಯ ನಾಲ್ವರು ದೃಷ್ಟಿ ವಿಕಲಚೇತನರಿಗೆ ಬೆಳಕು ಕೊಡಿಸಿದೆ. 

ಹೊಸ ತಂತ್ರಜ್ಞಾನ ಬಳಸಿಕೊಂಡು ಅಪ್ಪು ಎರಡು ನೇತ್ರಗಳಿಂದ ನಾಲ್ವರಿಗೆ ಬಳಕೆ ಮಾಡಿದ್ದು, ನಾಲ್ಕು ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿವೆ. ಪುನೀತ್​ರಿಂದ ದೃಷ್ಠಿ ಪಡೆದ ನಾಲ್ವರು ಕೂಡ ಕಡಿಮೆ ವಯಸ್ಸಿವರು. ಅದರಲ್ಲಿ ಒಬ್ಬ  ಮಹಿಳೆ, ಮತ್ತು ಮೂವರು ಯುವಕರು ದೃಷ್ಟಿ ಪಡೆದುಕೊಂಡಿದ್ದಾರೆ. ಆದರೆ ಅವರು ಯಾರು ಅಂತ  ಯಾರಿಗೂ ಗೊತ್ತಿಲ್ಲ. ಅಪ್ಪು ಕಣ್ಣಿನಿಂದ ಬೆಳಕು ಪಡೆದವರಿಗೂ ಈ ವಿಷಯ ಗೊತ್ತಿಲ್ಲ. ಅಪ್ಪು ನೇತ್ರ ಪಡೆದವರು ಯಾರು ಎಂಬುದು ಜೀವನ ಪರ್ಯಂತ ನಿಗೂಢವಾಗಿಯೇ ಉಳಿಯಲಿದೆ. ಆದ್ರೆ ಆ ಕಣ್ಣುಗಳ ಮೂಲಕ ಅಪ್ಪು ನಮ್ಮನ್ನ ನೋಡ್ತಾ ಇದ್ದಾರೆ ಅನ್ನೋದಂತೂ ಸತ್ಯ.

ಪುನೀತ್ ಸ್ಪೂರ್ತಿಯಿಂದ ಸಾವಿರಾರು ಜನರಿಂದ ನೇತ್ರದಾನ: ಹೌದು, ಪುನೀತ್ ಅಗಲಿಕೆ ಬಳಿಕ ರಾಜ್ಯಾದ್ಯಂತ ನೇತ್ರದಾನ ಮಾಡುವವವರ ಸಂಖ್ಯೆ ಹೆಚ್ಚಾಗಿದೆ. ಪುನೀತ್ ಹುಟ್ಟುಹಬ್ಬದ ದಿನ ಒಂದೊಂದು ಜಿಲ್ಲೆಯಲ್ಲೂ ಸಾವಿರಾರು ಜನರು ನೇತ್ರದಾನ ಮಾಡ್ತಾರೆ. ರಾಜ್ಯಾದ್ಯಂತ ಲಕ್ಷಾಂತರ ಪುನೀತ್ ಅಭಿಮಾನಿಗಳು ನೇತ್ರದಾನ ಮಾಡಿದ್ದಾರೆ.

ಅಲ್ಲಿಗೆ ಪುನೀತ್ ಬದುಕಿದ್ದಾಗ ಎಷ್ಟು ಒಳ್ಳೆಯ ಕೆಲಸ ಮಾಡಿದ್ದಾರೋ, ಅವರ ಅಗಲಿಕೆ ನಂತರವೂ ಅವರ ಹೆಸರಲ್ಲಿ ಅಷ್ಟೇ ಒಳ್ಳೆಯ ಕಾರ್ಯಗಳು ನಡೀತಾ ಇವೆ. ಪರಮಾತ್ಮ ನಮ್ಮನ್ನ ಅಗಲಿದ್ರೂ ಆತನ ಒಳ್ಳೆತನ ಜೀವಂತವಾಗಿದೆ. ಅನೇಕರ ಬದುಕಲ್ಲಿ ಕತ್ತಲೆಯನ್ನ ಕಳೆದು ಬೆಳಕನ್ನ ತಂದುಕೊಡ್ತಾ ಇದೆ.