
ಅಪ್ಪು ಬರ್ತಾರೆ ದಾರಿ ಬಿಡಿ, ಹಬ್ಬ ಮಾಡೋಕೆ ಗೆಟ್ ರೆಡಿ! ಪವರ್ ಸ್ಟಾರ್ 50ನೇ ಹುಟ್ಟುಹಬ್ಬದಕ್ಕೆ ಭರ್ಜರಿ ತಯಾರಿ!
ಅಪ್ಪು ಸಿನಿಮಾ ಹೊಸ ಟ್ರೈಲರ್ ರಿಲೀಸ್.ಅಭಿಮಾನಿಗಳಲ್ಲಿ ಅಪ್ಪು ಕಿಚ್ಚು ಹೆಚ್ಚಿಸಿದ ಪುನೀತ್.ಮಾರ್ಚ್ 14ಕ್ಕೆ ಅಪ್ಪು ಸಿನಿಮಾ ರೀ ರಿಲೀಸ್.
ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಅನ್ನೋದು ಪುನೀತ್ ನಟನೆಯ ಪರಮಾತ್ಮದ ಸಿನಿಮಾ ಸಾಲು. ಪುನೀತ್ ಅಭಿಮಾನಿಗಳ ಪಾಲಿಗೆ ಇದು ಅಕ್ಷರಶಹ ಸತ್ಯ ಕೂಡ. ಅಪ್ಪು ನಮ್ಮನ್ನ ಅಗಲಿದ್ರೂ ಅವರು ನಮ್ಮೊಂದಿಗೆ ಜೀವಂತವಾಗಿದ್ದಾರೆ. ಈಗ ಪವರ್ ಸ್ಟಾರ್ ಅದ್ಧೂರಿ ಎಂಟ್ರಿಗೆ ಕೌನ್ ಡೌನ್ ಸ್ಟಾರ್ಟ್ ಆಗಿದೆ. ಅಪ್ಪು 50ನೇ ವರ್ಷದ ಹುಟ್ಟುಹಬ್ಬಕ್ಕೆ ಅಪ್ಪು ಮತ್ತೆ ತೆರೆ ಮೇಲೆ ಬರುತ್ತಿದ್ದಾರೆ. ಇದೇ ಮಾರ್ಚ್ 17ಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ. ಅಪ್ಪು ನಮ್ಮೊಂದಿಗೆ ಇದ್ರೆ ಈ ಸಾರಿ 50ನೇ ಹುಟ್ಟುಹಬ್ಬ ಸೆಲೆಬ್ರೆಟ್ ಅದ್ಧೂರಿಯಾಗಿ ಮಾಡಿಕೊಳ್ತಾ ಇದ್ರು. ಆದ್ರೆ ಪವರ ಸ್ಟಾರ್ ನಮ್ಮೊಂದಿಗಿಲ್ಲ ಅಂತ ಬೇಸರ ಮಾಡಿಕೊಳ್ಳೋ ಹಾಗೇ ಇಲ್ಲ. ಈ ಸಾರಿಯ ಬರ್ತ್ಡೇಗೆ ಅಪ್ಪು ಮತ್ತೆ ನಮ್ಮೆದುರು ಬರಲಿದ್ದಾರೆ.ಕಳೆದ ವರ್ಷ ಜಾಕಿ ಚಿತ್ರವನ್ನ ಹೊಸ ರೂಪದಲ್ಲಿ ರೀ ರಿಲೀಸ್ ಮಾಡಲಾಗಿತ್ತು. ಇದೀಗ ಪುನೀತ್ ರಾಜ್ಕುಮಾರ್ ನಟನೆಯ ಮೊದಲ ಚಿತ್ರ ಅಪ್ಪುನ ಹೊಚ್ಚ ಹೊಸ ತಂತ್ರಜ್ಞಾನದೊಂದಿಗೆ ರೀ-ರಿಲೀಸ್ ಮಾಡಲಾಗ್ತಾ ಇದೆ.
Add Asianetnews Kannada as a Preferred Source
