ಹರಿಕಥೆ ಅಲ್ಲ ಗಿರಿಕಥೆ: ಎದುರಾದ ಸವಾಲುಗಳ ಬಗ್ಗೆ ಸಂದೇಶ್‌ ನಾಗರಾಜ್‌ ಮಾತು

ಸ್ಯಾಂಡಲ್‌ವುಡ್‌ನ ನಿರ್ದೇಶಕ, ನಟ ರಿಷಬ್ ಶೆಟ್ಟಿ ಸದ್ಯ ‘ಹರಿಕಥೆ ಅಲ್ಲ ಗಿರಿಕಥೆ’ ಸಿನಿಮಾದ ರಿಲೀಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಚಿತ್ರದ ಪ್ರಮೋಷನ್ ಕೆಲಸಗಳಲ್ಲಿ ಚಿತ್ರತಂಡ ತೊಡಗಿದ್ದು, ನಿರ್ಮಾಪಕ  ಸಂದೇಶ್ ನಾಗರಾಜ್ ಸಿನಿಮಾ ಬಗ್ಗೆ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾರೆ. 

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ನ ನಿರ್ದೇಶಕ, ನಟ ರಿಷಬ್ ಶೆಟ್ಟಿ ಸದ್ಯ ‘ಹರಿಕಥೆ ಅಲ್ಲ ಗಿರಿಕಥೆ’ ಸಿನಿಮಾದ ರಿಲೀಸ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಚಿತ್ರದ ಪ್ರಮೋಷನ್ ಕೆಲಸಗಳಲ್ಲಿ ಚಿತ್ರತಂಡ ತೊಡಗಿದ್ದು, ನಿರ್ಮಾಪಕ ಸಂದೇಶ್ ನಾಗರಾಜ್ ಸಿನಿಮಾ ಬಗ್ಗೆ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾರೆ. ಕೋವಿಡ್‌ಗೂ ಮೊದಲು 4 ತಿಂಗಳ ಹಿಂದೆ ಚಿತ್ರದ ಶೂಟಿಂಗ್ ಶುರು ಮಾಡಿದ್ವಿ. ಕೋವಿಡ್ ಬಂದ ನಂತರ 3 ತಿಂಗಳು ಚಿತ್ರೀಕರಣ ನಿಲ್ಲಿಸಿದೆವು. ಅದಾದ ಮೇಲೆ ನಾವು 3 ತಿಂಗಳು ಶೂಟಿಂಗ್‌ಗೆ ಬ್ರೇಕ್ ಹಾಕಿದ್ವಿ. ಅನಂತರ ಚಿತ್ರದ ಚಿತ್ರೀಕರಣವನ್ನು ಮಾಡಬೇಕೋ? ಬೇಡವೋ? ಎಂಬ ಗೊಂದಲದಲ್ಲೇ ಹೆದರಿಕೊಂಡು ಶೂಟಿಂಗ್ ಮಾಡಿದೆವು. ಬಳಿಕ ರಾಜಾರೋಷವಾಗಿ ಚಿತ್ರದ ಚಿತ್ರೀಕರಣವನ್ನು ಮಾಡಿ ಮುಗಿಸಿದೆವು ಎಂದು ಸಂದೇಶ್ ನಾಗರಾಜ್ ತಿಳಿಸಿದ್ದಾರೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video