Asianet Suvarna News Asianet Suvarna News

ದರ್ಶನ್​ ನಂಬಿ ಹಣ ಕೊಟ್ಟವರು ಹೈರಾಣ: ಬಡ್ಡಿ ದುಡ್ಡು ಕಟ್ಟುವ ಸಂಕಷ್ಟದಲ್ಲಿ ದಚ್ಚು ನಿರ್ಮಾಪಕರು.!

ಜೈಲು ಹಕ್ಕಿ ದರ್ಶನ್ ಬಳ್ಳಾರಿ ದಾಸನಾಗಿ ನಾಲ್ಕು ದಿನ ಆಯ್ತು. ದರ್ಶನ್ ಜೈಲು ಸೇರಿ 80 ದಿನ ಆಗಿದೆ. ದಾಸನ ಭವಿಷ್ಯ ಬರೆದಿರೋ ಚಾರ್ಜ್​ ಶೀಟ್​ ಸಲ್ಲಿಕೆ ಇನ್ನೇನು ಮೂರ್ನಾಲು ದಿನದಲ್ಲಾಗುತ್ತೆ. ಇದೀಗ ದಚ್ಚು ನಂಬಿ ಕೋಟಿ ಕೋಟಿ ಸುರಿದವರೆಲ್ಲಾ ಕಂಗಾಲಾಗಿದ್ದಾರೆ. 
 

First Published Sep 3, 2024, 12:03 PM IST | Last Updated Sep 3, 2024, 12:03 PM IST

ಜೈಲು ಹಕ್ಕಿ ದರ್ಶನ್ ಬಳ್ಳಾರಿ ದಾಸನಾಗಿ ನಾಲ್ಕು ದಿನ ಆಯ್ತು. ದರ್ಶನ್ ಜೈಲು ಸೇರಿ 80 ದಿನ ಆಗಿದೆ. ದಾಸನ ಭವಿಷ್ಯ ಬರೆದಿರೋ ಚಾರ್ಜ್​ ಶೀಟ್​ ಸಲ್ಲಿಕೆ ಇನ್ನೇನು ಮೂರ್ನಾಲು ದಿನದಲ್ಲಾಗುತ್ತೆ. ಇದೀಗ ದಚ್ಚು ನಂಬಿ ಕೋಟಿ ಕೋಟಿ ಸುರಿದವರೆಲ್ಲಾ ಕಂಗಾಲಾಗಿದ್ದಾರೆ. ಬಡ್ಡಿ ಕಟ್ಟಲಾಗದೇ ಒದ್ದಾಡುತ್ತಿದ್ದಾರೆ. ಈ ಬಗ್ಗೆ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ. ಒಂದು ಕೊಲೆ ನಟ ದರ್ಶನ್​ ಮತ್ತವರನ್ನ ನಂಬಿ ಕೂತಿದ್ದವರನ್ನ ಹೇಗೆಲ್ಲಾ ಸಂಕಷ್ಟಕ್ಕೆ ಸಿಲುಕಿಸಿದೆ ಅನ್ನೋದಕ್ಕೆ ಇದಕ್ಕಿಂತ ಬೆಸ್ಟ್​ ಎಕ್ಸಾಂಪಲ್ ಮತ್ತೊಂದಿಲ್ಲ. ಜೈಲು ಸೇರೋ ಮುಂಚೆ ದಚ್ಚು ಓಡೋ ಕುದುರೆ. ರೇಸ್​​ನಲ್ಲಿ ಕುದುರೆ ಮೇಲೆ ಬಾಜಿ ಕಟ್ಟುತ್ತಾರಲ್ಲ ಅದೇ ತರ ದರ್ಶನ್​ ನಂಬಿ ಹಲವು ನಿರ್ಮಾಪಕರು ಕೋಟಿ ಕೋಟಿ ಸುರಿದಿದ್ರು. ಅವರೆಲ್ಲ ಈಗ ಹೈರಾಣಾಗಿದ್ದಾರೆ. 

ಯಾಕಂದ್ರೆ ಬಡ್ಡಿ ಕಟ್ಟಿ ಕಟ್ಟಿ ಆ ನಿರ್ಮಾಪಕರೆಲ್ಲಾ ತಂಡಾ ಹೊಡೆದಿದ್ದಾರೆ. ಸಾಮಾನ್ಯವಾಗಿ ಸಿನಿಮಾಗಳು ಆಗೋದೇ ಬಡ್ಡಿಗೆ ತಂಡ ಹಣದಿಂದ. ಇನ್ನು ದರ್ಶನ್​ ಕಾಲ್​ ಶೀಟ್ ನಿರ್ಮಾಪಕನಿಗೆ ಸಿಕ್ತು ಅಂದ್ರೆ ಮುಗೀತು. ದಚ್ಚು ಓಡೋ ಕುದುರೆ ಅಂತ ಗೊತ್ತಿರೋ ಎಲ್ಲರು ಆ ಸಿನಿಮಾ ನಿರ್ಮಾಪಕನಿಗೆ ಬಣ್ಣಿಗೆ ಹಣ ಕೊಡೋದಕ್ಕೆ ಯೋಚ್ನೆ ಮಾಡಲ್ಲ. ಯಾಕಂದ್ರೆ ದರ್ಶನ್ ಸಿನಿಮಾ ಲಾಸ್ ಆಗಲ್ಲ ಹಣ ವಾಪಸ್ ಬರುತ್ತೆ ಅನ್ನೋ ನಂಬಿಕೆ. ಆದ್ರೆ ಈಗ ದಚ್ಚು ಜೈಲು ಸೇರಿದ್ಮೇಲೆ ಬಡ್ಡಿಗೆ ದುಡ್ಡು ತಂದು ದಾಸನ ಕೈಗಿಟ್ಟವರೆಲ್ಲಾ ಕಂಗಾಲಾಗಿದ್ದಾರೆ. ಚಾರ್ಜ್ ಶೀಟ್ ಸಲ್ಲಿಕೆಗೆ ಸಿದ್ಧತೆ ಆಗಿದೆ. ದರ್ಶನ್ ಭವಿಷ್ಯ ಮುಂದೇನಾಗುತ್ತೋ..? 

ದಚ್ಚು ಹೊರ ಬರುತ್ತಾರೋ ಇಲ್ಲವೋ..? ಅನ್ನೋ ಟೆನ್ಷನ್ ಒಂದ್ ಕಡೆ ಆದ್ರೆ,  ಬಡ್ಡಿ ದುಡ್ಡುನ್ನ ಕಟ್ಟಲಾಗದೇ ಒದ್ದಾಡುತ್ತಿದ್ದಾರೆ. ದರ್ಶನ್ ವರ್ಷಕ್ಕೆ ನುರಾರು ಕೋಟಿ ಬ್ಯುಸಿನೇಸ್ ಮಾಡುತ್ತುದ್ದ ಸ್ಟಾರ್. ಹಾಗಾಗಿನೆ ನಿರ್ಮಾಪಕರಿಗೆ ಸಿನಿಮಾದಲ್ಲಿ ದರ್ಶನ್ ಹೀರೊ ಅಂದರೆ, ನಿರಾಳ. ಯಾಕಂದರೆ, ಸಿನಿಮಾ ಚೆನ್ನಾಗಿ ಮಾಡಿದರೆ, ಥಿಯೇಟರ್ನಲ್ಲಿ ಭರ್ಜರಿ ಕಲೆಕ್ಷನ್ ಆಗುತ್ತೆ ಅನ್ನೋದು ಅವರಿಗೂ ಗೊತ್ತಿದೆ. ರಾಬರ್ಟ್, ಕಾಟೇರ ಈ ಎರಡು ಸಿನಿಮಾಗಳು ಸ್ಯಾಂಡಲ್ವುಡ್ ಬಾಕ್ಸಾಫೀಸ್ನಲ್ಲಿ ಹೊಸ ದಾಖಲೆಯನ್ನೇ ಬರೆದಿವೆ. ಇಲ್ಲಿಂದ ದರ್ಶನ್ ಸಿನಿಮಾಗಳಿಗೆ ಹೂಡಿಕೆ ಮಾಡುವ ಬಜೆಟ್ನಲ್ಲೂ ಏರಿಕೆಯಾಗಿದೆ. ಹಾಗೇ ದರ್ಶನ್ ಸಂಭಾವನೆ ಕೂಡ ಹೆಚ್ಚಾಗಿದೆ. ವರದಿ ಪ್ರಕಾರ, ದರ್ಶನ್ ಡೆವಿಲ್ ಸಿನಿಮಾಗೆ ಸುಮಾರು 22 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ.

Video Top Stories