Asianet Suvarna News Asianet Suvarna News

ಪ್ರೇಮ್-ಧ್ರುವ ಕಾಂಬಿನೇಷನ್‌ಲ್ಲಿ ಸೆಟ್ಟೇರ್ತಿದೆ ಹೊಸ ಸಿನಿಮಾ

Aug 4, 2021, 2:35 PM IST

ಧ್ರುವ ಸರ್ಜಾ ಬಗ್ಗೆ ಬಿಗ್ ನ್ಯೂಸ್ ಒಂದು ಓಡಾಡುತ್ತಿದೆ. ಸ್ಟಾರ್ ನಿರ್ದೇಶಕನ ಜೊತೆ ಧ್ರುವ ಮುಂದಿನ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗಿದೆ. ಗಾಂಧೀನಗರದ ತುಂಬ ಈಗ ಅದೇ ವಿಚಾರ ಮಾತುಕತೆ. ಜೋಗಿ ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್‌ನಲ್ಲಿ ಸಿನಿಮಾ ಮೂಡಿಬರುತ್ತಿದ್ದು, ಇದು ಈಗಾಗಲೇ ಸಿನಿಪ್ರಿಯರ ಕುತೂಹಲ ಹೆಚ್ಚಿಸಿದೆ.

ಆಗಸ್ಟ್ 6ರಂದು ತೆರೆಗಪ್ಪಳಿಸಲಿದ್ದಾನೆ ಕಲಿವೀರ

ಜೋಗಿ ಪ್ರೇಮ್ ಸಿನಿಮಾಗಳೇ ಕುತೂಹಲಗಳ ಆಗರ. ಸಿಕ್ಕಾಪಟ್ಟೆ ವೆರೈಟಿ ಸಿನಿಮಾ ಮಾಡೋ ಜೋಗಿ ಪ್ರೇಮ್ ಕೈ ಹಚ್ಚಿದ್ರೆ ಲಾಭಕ್ಕೇನು ಕಮ್ಮಿ ಇಲ್ಲ ಎನ್ನುವುದು ಎಲ್ಲರ ಅಭಿಪ್ರಾಯ. ಈಗ ಪ್ರೇಮ್ ಮೊದಲ ಬಾರಿ ಧ್ರುವ ಸರ್ಜಾಗೆ ಆಕ್ಷನ್ ಕಟ್ ಹೇಳಲಿದ್ದು ಇದು ಕನ್ನಡ ಸಿನಿ ಪ್ರಿಯರಲ್ಲಿ ಹೊಸ ಹುರುಪು ತುಂಬಿದೆ. ಪ್ರೇಮ್ ಮತ್ತೆ ಸ್ಟಾರ್ ಸಿನಿಮಾದಲ್ಲಿ ಫುಲ್ ಬ್ಯುಸಿಯಾಗೋದಂತೂ ಪಕ್ಕಾ ಆಗಿದೆ.