Asianet Suvarna News Asianet Suvarna News

ಆಗಸ್ಟ್ 6ರಂದು ತೆರೆಗಪ್ಪಳಿಸಲಿದ್ದಾನೆ ಕಲಿವೀರ

Aug 4, 2021, 2:10 PM IST

ಸ್ಯಾಂಲಡ್‌ವುಡ್‌ನಲ್ಲಿ ತೆರೆಯ ಮೇಲೆ ಅಪ್ಪಳಿಸೋಕೆ ಕಲಿವೀರ ಸಿದ್ಧವಾಗಿದೆ. ಈ ಶುಕ್ರವಾರ ಆ.06ರಂದು ರಿಲೀಸ್ ಆಗೋಕೆ ಸಿದ್ಧವಾಗಿದೆ ಸ್ಯಾಂಡಲ್‌ವುಡ್‌ನ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ಕೊರೋನಾಗೆ ಸೆಡ್ಡು ಹೊಡೆದು ಸಿನಿಮಾ ಥಿಯೇಟರ್‌ ಒಳಗೆ ನುಗ್ಗಲು ರೆಡಿಯಾಗಿದೆ.

ಧ್ರುವ ಸರ್ಜಾ ಚಿತ್ರದ ಮುಹೂರ್ತಕ್ಕೆ ರವಿಚಂದ್ರನ್‌ ಅತಿಥಿ

ಸ್ಯಾಂಡಲ್‌ವುಡ್‌ನಲ್ಲಿ ಹೊಸ ಹುರುಪಿನೊಂದಿಗೆ ಥಿಯೇಟರ್‌ಗೆ ಲಗ್ಗೆ ಇಡಲು ಸಿದ್ಧವಾಗಿದೆ. ಕಲಿವೀರನಾಗಿ ನಟ ಏಕಲವ್ಯ ಮೊದಲ ಸಿನಿಮಾದಲ್ಲಿ ತಮ್ಮ ನಟನೆ ಮೂಲಕ ಪ್ರೇಕ್ಷಕರ ಮನಸು ಗೆಲ್ಲಲು ರೆಡಿಯಾಗಿದ್ದಾರೆ. ಇದರಲ್ಲಿ ಇಬ್ಬರು ನಾಯಕಿಯರಿದ್ದಾರೆ. ಆಕ್ಷನ್ ಸಿನಿಮಾದಲ್ಲಿ ಮೈನವಿರೇಳಿಸುವ ಫೈಟಿಂಗ್ ದೃಶ್ಯಗಳಿರಲಿದ್ದು, ಹಾಗೆಯೇ ಕ್ಯೂಟ್ ಲವ್ ಸ್ಟೋರಿ ಕೂಡಾ ಇದೆ.