ಅಶ್ಲೀಲ ಮೆಸೇಜ್​ ಮಾಡಿದ ದರ್ಶನ್ ಫ್ಯಾನ್ಸ್ ಅಂದರ್: ಕಂಪ್ಲೆಂಟ್ ಕೊಡಲು ಸಜ್ಜಾದ ಪ್ರಜ್ವಲ್ ದೇವರಾಜ್

ದರ್ಶನ್ ಬೆಂಬಲಕ್ಕೆ ನಿಂತುಕೊಂಡು ನಟಿ ರಮ್ಯಾಗೆ ಕೆಟ್ಟ ಕೆಟ್ಟ ಮೆಸೇಜ್ ಮಾಡಿದ್ದ ತಲೆಕೆಟ್ಟ ಫ್ಯಾನ್ಸ್​ಗೆ ಈಗ ತಕ್ಕ ಪಾಠ ಕಲಿಸ್ತಾ ಇದ್ದಾರೆ ಸೈಬರ್ ಪೊಲೀಸರು.

Share this Video
  • FB
  • Linkdin
  • Whatsapp

ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಮಾಡಿದ್ದ ದಾಸನ ಪುಂಡಾಭಿಮಾನಿಗಳು ಈಗ ಅಕ್ಷರಶಃ ಪರದಾಡ್ತಾ ಇದ್ದಾರೆ. ಸೈಬರ್ ಪೊಲೀಸರು ಒಂದೊಂದೇ ಅಕೌಂಟ್​​ಗಳ ಜಾಡು ಹಿಡಿದು ಕೆಡಿ ಫ್ಯಾನ್ಸ್​​ನ ಅರೆಸ್ಟ್ ಮಾಡ್ತಾ ಇದ್ದಾರೆ. ಸದ್ಯ 4 ಜನ ಕಂಬಿ ಹಿಂದೆ ಇದ್ರೆ ಇನ್ನು ಕೆಲವರು ಅಕೌಂಟ್ ಡಿಆಕ್ಟೀವೇಟ್ ಮಾಡಿಕೊಂಡು ಊರು ಬಿಟ್ಟಿದ್ದಾರೆ. ದರ್ಶನ್ ಬೆಂಬಲಕ್ಕೆ ನಿಂತುಕೊಂಡು ನಟಿ ರಮ್ಯಾಗೆ ಕೆಟ್ಟ ಕೆಟ್ಟ ಮೆಸೇಜ್ ಮಾಡಿದ್ದ ತಲೆಕೆಟ್ಟ ಫ್ಯಾನ್ಸ್​ಗೆ ಈಗ ತಕ್ಕ ಪಾಠ ಕಲಿಸ್ತಾ ಇದ್ದಾರೆ ಸೈಬರ್ ಪೊಲೀಸರು. ತಮಗೆ ಇನ್​ಸ್ಟಾಗ್ರಾಮ್​​ನಲ್ಲಿ ಅಶ್ಲೀಲ ಸಂದೇಶ ಕಳಿಸಿದ್ದ 43 ಅಕೌಂಟ್​​ಗಳ ವಿವರಗಳನ್ನ ಕಮೀಷನರ್ ಕಚೇರಿಗೆ ಕೊಟ್ಟು ದೂರು ದಾಖಲಿಸಿದ್ರು ರಮ್ಯಾ. ಅದರ ವಿಚಾರಣೆಗಿಳಿದ ಸೈಬರ್ ಪೊಲೀಸರು ಸದ್ಯ 4 ಪುಂಡರನ್ನ ಅರೆಸ್ಟ್ ಮಾಡಿದ್ದಾರೆ.

ಅಶ್ಲೀಲ ಮೆಸೇಜ್ ಮಾಡಿದ್ದವರ ಪೈಕಿ ಒಟ್ಟು 12 ಜನರ ಮಾಹಿತಿ ಯನ್ನ ಇನ್ಸ್ಟಾಗ್ರಾಂ ಸಂಸ್ಥೆ ಸೈಬರ್ ಪೊಲೀಸರಿಗೆ ನೀಡಿದೆ. ಈ ಪೈಕಿ ರಾಜೇಶ್, ಓಬಣ್ಣ, ಭುವನ್ ಗೌಡ ಮತ್ತು ಗಂಗಾಧರ್ ಅನ್ನೋ 4 ಜನರನ್ನ ಬಂಧಿಸಿ , ಬಿಸಿ ಬಿಸಿ ಕಜ್ಜಾಯ ಕೊಟ್ಟು ವಿಚಾರಣೆ ನಡೆಸಲಾಗ್ತಾ ಇದೆ. ಇವರ ಪೈಕಿ ಕಡೂರು ನಿವಾಸಿ ರಾಜೇಶ್, ರಮ್ಯಾಗೆ ಅತ್ಯಂತ ಅಶ್ಲೀಲ ಮೆಸೇಜ್​ಗಳನ್ನ ಕಳಿಸಿದ್ದ. ಥೇಟ್ ರೇಣುಕಾಸ್ವಾಮಿ ರೀತಿಯೇ ತನ್ನ ಖಾಸಗಿ ಅಂಗಾಗಗಳ ಫೋಟೊ, ವಿಡಿಯೋಗಳನ್ನ ರಮ್ಯಾಗೆ ಕಳಿಸಿ, ಬೇಕಾ..? ಅಂದಿದ್ದನ್ನಂತೆ. ಹೌದು ಮೆಸೇಜ್ ಮಾಡೋವಾಗ ತಮ್ಮ ಪೌರುಷ ತೋರಿಸಿದ್ದ ಕೆಡಿ ಫ್ಯಾನ್ಸ್, ಕಂಪ್ಲೆಂಟ್ ದಾಖಲಾಗ್ತಾ ಇದ್ದ ಹಾಗೆ, ಅಕೌಂಟ್ ಡಿಲೀಟ್ ಮಾಡಿ ಭೂಗತರಾಗಿದ್ದಾರೆ. ಅದ್ರಲ್ಲೂ ಪೊಲೀಸರು ಕೆಲವರನ್ನ ಅರೆಸ್ಟ್ ಮಾಡಿದ ವಿಷ್ಯ ಗೊತ್ತಾಗ್ತಾ ಇದ್ದ ಹಾಗೇನೇ ಫೋನ್ ಕೂಡ ಸ್ವಿಚ್ ಆಫ್ ಮಾಡಿ ಊರು ಬಿಟ್ಟಿದ್ದಾರೆ.

ಆದ್ರೆ ಅದೆಲ್ಲಿಗೆ ಹೋದ್ರೂ ಕಾನೂನಿನ ಕೈನಿಂದ ತಪ್ಪಿಸಿಕೊಳ್ಳೋದಕ್ಕೆ ಆಗೋದಿಲ್ಲ. ಹೆಣ್ಣುಮಕ್ಕಳಿಗೆ ಸೋಷಿಯಲ್ ಮಿಡಿಯಾದಲ್ಲಿ ಅಶ್ಲೀಲ ಸಂದೇಶ ಕಳಿಸಿದವರಿಗೆ 7 ವರ್ಷಗಳವರೆಗೆ ಕಠಿಣ ಶಿಕ್ಷೆ ಕೊಡಬಲ್ಲ ಕಾನೂನುಗಳಿವೆ. ಸೋ ದಾಸನ ವಹಿಸಿಕೊಂಡು ರಮ್ಯಾಗೆ ಅಶ್ಲೀಲ ಸಂದೇಶ ಕಳಿಸಿದ ಕಿಡಿಗೇಡಿಗಳಿಗೆ ಈಗ ಅಕ್ಷರಶಃ ನಡುಕ ಶುರುವಾಗಿದೆ. ಹೌದು ಯಾವುದೇ ನಟರ ಬಗ್ಗೆ ಅಭಿಮಾನ ಇದ್ರೆ ಓಕೆ. ಅದು ಆ ನಟರ ಸಿನಿಮಾಗಳಿಗೆ ಸೀಮಿತವಾಗಿದ್ರೆ ಒಳ್ಳೆದು, ಅದನ್ನ ಬಿಟ್ಟು ಅವರು ಮಾಡಿದ ಕುಕೃತ್ಯಗಳನ್ನ ಸಮರ್ಥನೆ ಮಾಡುವ ಭರದಲ್ಲಿ ಹೀಗೆಲ್ಲಾ ಪುಂಡಾಟ ಆಡಿದ್ರೆ ಏನಾಗುತ್ತೆ ಅನ್ನೋದಕ್ಕೆ ಈ ಪ್ರಕರಣವೇ ಸಾಕ್ಷಿ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್​ ಈ ವಿಚಾರದಲ್ಲಿ ರಮ್ಯಾ ಬೆಂಬಲಕ್ಕೆ ನಿಂತಿದ್ದಾರೆ. ಜೊತೆಗೆ ತಾವು ಕೂಡ ಪೊಲೀಸ್ ದೂರು ಕೊಡಲಿಕ್ಕೆ ಮುಂದಾಗಿದ್ದಾರೆ.

ಇತ್ತೀಚಿಗೆ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿಯವರ ಸೋದರಿಗೆ ಒಬ್ಬ ವ್ಯಕ್ತಿ ಅಶ್ಲೀಲ ಸಂದೇಶ ಕಳಿಸ್ತಾ ಇದ್ದು, ಅವನಿಗೆ ಬುದ್ದಿ ಕಲಿಸೋಕೆ ಕಾನೂನು ಮೊರೆ ಹೋಗ್ತಿನಿ ಅಂದಿದ್ದಾರೆ ಪ್ರಜ್ವಲ್. ಸದ್ಯ 4 ಜನ ದಾಸನ ಫ್ಯಾನ್ಸ್ ಅಂದರ್ ಆಗಿದ್ದಾರೆ. ಇನ್ನಷ್ಟು ಜನ ಊರು ಬಿಟ್ಟಿದ್ದಾರೆ. ಒಟ್ಟು 43 ಜನರ ಮೇಲೆ ಎಫ್ ಐ ಆರ್ ದಾಖಲಾಗಿದ್ದು, ಎಲ್ಲರಿಗೂ ಕಾನೂನು ಕಂಟಕ ಫಿಕ್ಸ್. ಸದ್ಯ ಇವರೆಲ್ಲರ ನೆರವಿಗೆ ಇವರ ಆರಾಧ್ಯ ದೈವ ದರ್ಶನ್ ಅಂತೂ ಬಂದಿಲ್ಲ. ಬರೋದಕ್ಕೂ ಆಗಲ್ಲ, ಯಾಕಂದ್ರೆ ಅದ್ಯಾವಾಗ ತನ್ನ ಬೇಲ್ ರದ್ದಾಗುತ್ತೋ ಅನ್ನೋ ಭೀತಿಯಲ್ಲಿರೋ ದಾಸನಿಗೆ ಇವರ ಪಾಡು ಏನಾದರೇನಂತೆ.. ದಾಸನ ನಂಬಿದ ಫ್ಯಾನ್ಸ್​ಗೆ ಈಗ ದೇವರೇ ಗತಿ ಅನ್ನೋ ಪರಿಸ್ಥಿತಿ.

Related Video