Asianet Suvarna News Asianet Suvarna News

ಸೋತಿರೋ ಪ್ರಭಾಸ್‌ಗೆ ಬಂತು 'ಕಲ್ಕಿ' ಶಕ್ತಿ: ಸಿನಿ ಜಗತ್ತಲ್ಲಿ ಪ್ರಾಜೆಕ್ಟ್ 'K' ಸೌಂಡ್ ಶುರು..!

600 ಕೋಟಿ ಬಂಡವಾಳ ಬಿಗ್ ಸ್ಟಾರ್ ಕಾಸ್ಟ್!
ಕಲ್ಕಿಯಲ್ಲಿ ಮೋಡಿ ಮಾಡ್ತಾರಾ ನಾಗ್ ಅಶ್ವಿನ್?
ಸೈನ್ಸ್-ಫಿಕ್ಷನ್ ಅಡ್ವೆಂಚರ್ ಸಿನಿಮಾ ಕಲ್ಕಿ..!
 

ಡಾರ್ಲಿಂಗ್ ಪ್ರಭಾಸ್ ಸದ್ಯ ಭಾರತೀಯ ಚಿತ್ರರಂಗ ಫ್ಲಾಪ್ ಸ್ಟಾರ್. ಯಾಕಂದ್ರೆ ಪ್ರಭಾಸ್ ನಟಿಸಿರೋ ಯಾವ್ದೇ  ಪ್ಯಾನ್ ಇಂಡಿಯಾ ಸಿನಿಮಾ ಸಕ್ಸಸ್ ಟ್ರ್ಯಾಕ್ನಲ್ಲಿ ಹಳಿ ತಪ್ಪಿವೆ. ಆದ್ರೇನಂತೆ ಈ ಬಾಹುಬಲಿ ಬೆಳ್ಳಿತೆರೆ ಮೇಲೆ ಗೆಲುವಿನ ಮ್ಯಾಜಿಕ್ ಮಾಡೇ ಮಾಡ್ತಾರೆ ಅನ್ನೋ ದೊಡ್ಡ ನಂಬಿಕೆ ಅವರ ಅಭಿಮಾನಿಗಳದ್ದು. ಪ್ರಭಾಸ್ (Darling Prabhas) ಅಭಿಮಾನಿಗಳ ಆ ನಂಬಿಕೆಯನ್ನ ನಿಜ ಮಾಡೋಕೆ ಬಂದಿದ್ದಾನೆ ಇಲ್ಲೊಬ್ಬ ಕಲ್ಕಿ(Kalki). ಅರೆ ಅದ್ಯಾರಪ್ಪ ಕಲ್ಕಿ ಅಂತೀರಾ..? ಅದು ಬೇರಾರು ಅಲ್ಲ. ಡಾರ್ಲಿಂಗ್ ಪ್ರಭಾಸ್ ನಟಿಸುತ್ತಿರೋ ಪ್ರಾಜೆಕ್ಟ್ ಕೆ ಸಿನಿಮಾದ ಟೈಟಲ್ ಕಲ್ಕಿ 2898 ಎಡಿ. ಪ್ರಭಾಸ್ ಕಲ್ಕಿಯ ಪಾತ್ರ ಮಾಡುತ್ತಿದ್ದಾರೆ. ಈ ಕಲ್ಕಿಯ ಗ್ಲಿಮ್ಸ್ ರಿಲೀಸ್(Kalki Glimpses Released) ಆಗಿದೆ. ಈ ಗ್ಲಿಮ್ಸ್ ನೋಡಿ ಪ್ರಭಾಸ್ರ ‘ಪ್ರಾಜೆಕ್ಟ್ ಕೆ’ ಸಿನಿಮಾ ಮೇಲೆ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇತ್ತು. ಈ ಸಿನಿಮಾ ಯಾವ ರೀತಿ ಇರುತ್ತೆ ಅನ್ನೋ ಕುತೂಹಲವೂ ಇತ್ತು. ಈಗ ಬಿಡುಗಡೆ ಆಗಿರೋ ಕಲ್ಕಿ ಗ್ಲಿಮ್ಸ್ ಅವರ ನಿರೀಕ್ಷೆಗೆ ಉತ್ತರ ಕೊಟ್ಟಿದ್ದೆ. ಕಲ್ಕಿ ಹಾಲಿವುಡ್ ಸ್ಟೈಲ್ ಆಫ್ ಸಿನಿಮಾ. ಭಾರತದ ಮೊದಲ ಸೈನ್ಸ್-ಫಿಕ್ಷನ್ ಅಡ್ವೆಂಚರ್ ಸಿನಿಮಾ ಕೂಡ ಇದೇ ಅನ್ನೋದು ಗ್ಲಿಮ್ಸ್ ಹೇಳುತ್ತಿದ್ದೆ. ಮಾರ್ವೆಲ್ನ ಎಫೆಕ್ಟ್ ಗ್ಲಿಮ್ಸ್ನಲ್ಲಿ ಕಾಣುತ್ತೆ. ಕಲ್ಕಿ ಬರೋಬ್ಬರಿ 600 ಕೋಟಿ ಬಜೆಟ್ನ ಸಿನಿಮಾ. ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್, ಬಿಟೌನ್ ಬಿಗ್ಬಿ ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ರಾಣಾ ದಗ್ಗುಭಾಟಿಯಂತಹ ಘಟಾಟನುಘಟಿ ಕಲಾವಿದರು ಕಲ್ಕಿ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ಮಹಾನಟಿ ಖ್ಯಾತಿಯ ನಾಗ ಅಶ್ವಿನ್ ನಿರ್ದೇಶಿಸುತ್ತಿದ್ದು, ವೈಜಯಂತಿ ಮೂವೀಸ್ ನಿರ್ಮಿಸುತ್ತಿದ್ದಾರೆ. 2024ರ ದೀಪಾವಳಿಗೆ ಕಲ್ಕಿ ತೆರೆ ಮೇಲೆ ಬರಲಿದೆ. 

ಇದನ್ನೂ ವೀಕ್ಷಿಸಿ:  Today Horoscope: ಅಧಿಕ ಮಾಸದಲ್ಲಿ ಹೆಚ್ಚು ದಾನ ಮಾಡಿ..ಶ್ರೇಯಸ್ಸು ಪಡೆಯಿರಿ

Video Top Stories