Asianet Suvarna News Asianet Suvarna News

'ಪೆಂಟಗಾನ್' ಸಿನಿಮಾದ ಟೀಸರ್ ರಿಲೀಸ್: ಇದು ರೋಲ್ ಕಾಲ್ ಕನ್ನಡ ಪರ ಹೋರಾಟಗಾರರ ಕಹಾನಿ

'ಪೆಂಟಗನ್‌' ಸಿನಿಮಾದ ಟೀಸರ್‌ ರಿಲೀಸ್ ಆಗಿದ್ದು, ಕರ್ನಾಟಕದಲ್ಲಿ ದೊಡ್ಡ ಸಂಚಲನ ಸೃಷ್ಟಿಸುತ್ತಿದೆ.
 

ಕನ್ನಡ ಹೆಸರು ಹೇಳಿಕೊಂಡು ಹೇಗೆಲ್ಲಾ ರೋಲ್ ಕಾಲ್ ಮಾಡ್ತಾರೆ ಅನ್ನೋ ಕತೆ ಪೆಂಟಗನ್‌ ಕತೆ ಸಿನಿಮಾದಲ್ಲಿ ಇದೆ. ಈ ಸಿನಿಮಾದಲ್ಲಿ ಕನ್ನಡ ಹೋರಾಟಗಾರನ ಪಾತ್ರದಲ್ಲಿ ಕಿಶೋರ್ ನಟಿಸಿದ್ರೆ ನಾಯಕನಾಗಿ ಪೃಥ್ವಿ ಅಂಬರ್ ಕಾಣಿಸಿಕೊಂಡಿದ್ದಾರೆ. ಈ ಟೀಸರ್ ರಿಲೀಸ್ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆದಿದ್ದು, ಟೀಸರ್ ನೋಡಿ ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ, ಹಾಗೂ ಅಶ್ವಿನಿ ಗೌಡ ಸಿನಿಮಾ ತಂಡದ ವಿರುದ್ಧ ತಿರುಗಿ ಬಿದ್ದಿದ್ರು. ಪೆಂಟಗಾನ್ ಸಿನಿಮಾವನ್ನು ನಿರ್ದೇಶಕ ಗುರು ದೇಶಪಾಂಡೆ ನಿರ್ಮಾಣ ಮಾಡಿದ್ದಾರೆ. ರೂಪೇಶ್ ರಾಜಣ್ಣ ಸಿಟ್ಟಿಗೆ ಕಾರ್ಯಕ್ರಮದಲ್ಲೇ ಉತ್ತರ ಕೊಟ್ಟಿರೋ ನಿರ್ಮಾಪಕ ಗುರುದೇಶ್ ಪಾಂಡೆ ಟೀಸರ್‌'ನಲ್ಲಿ ಬಂದಿರುವ ಸನ್ನಿವೇಶಕ್ಕೆ ಸಿನಿಮಾದಲ್ಲಿ ಉತ್ತರ ಇದೆ ಅಂತ ರೂಪೇಶ್ ರಾಜಣ್ಣರನ್ನ ಸಮಾಧಾನ ಪಡಿಸಿದ್ರು. ಇನ್ನು ಪೆಂಟಗಾನ್ ಸಿನಿಮಾವನ್ನ ರಘು ಶಿವಮೊಗ್ಗ, ಚಂದ್ರ ಮೋಹನ್, ಆಕಾಶ್ ಶ್ರೀವತ್ಸ, ಕಿರಣ್ ಕುಮಾರ್ ಹಾಗೂ ಗುರುದೇಶ್ ಪಾಂಡೆ ಸೇರಿ ಐದು ಜನ ನಿರ್ದೇಶಕರು ಡೈರೆಕ್ಷನ್ ಮಾಡಿದ್ದಾರೆ. 

Video Top Stories