
ದೀಪಿಕಾ ಪಡುಕೋಣೆನಾ, ಹೇಮಮಾಲಿನಿನಾ?, ರಮ್ಯಾ ವಿರುದ್ಧ ಪವಿತ್ರಾ ಲೋಕೇಶ್ ಕಿಡಿ
ನಟಿ ಪವಿತ್ರಾ ಲೋಕೇಶ್ (Pavitra Lokesh) ಮತ್ತು ತೆಲುಗು ನಟ ನರೇಶ್ ಬಾಬು (Naresh Babu) ಮದುವೆ ವಿಚಾರ ಮತ್ತೊಂದು ತಿರುವು ಪಡೆದುಕೊಂಡಿದೆ. ನರೇಶ್ ಬಾಬು ಪತ್ನಿ ರಮ್ಯಾ ಇತ್ತೀಚಿಗಷ್ಟೆ, ಪವಿತ್ರಾ ಲೋಕೇಶ್ ಮತ್ತು ನರೇಶ್ ಬಾಬು ವಿರುದ್ಧ ಆರೋಪ ಮಾಡಿದ ಬೆನ್ನಲ್ಲೇ ಇದೀಗ ಪವಿತ್ರಾ ಲೋಕೇಶ್ ಮಾಧ್ಯಮದ ಜೊತೆ ಹಾಜರಾಗಿದ್ದಾರೆ. ಪವಿತ್ರಾ ಲೋಕೇಶ್, ನರೇಶ್ ಪತ್ನಿ ರಮ್ಯಾ ವಿರುದ್ಧ ಕಿಡಿ ಕಾರಿದ್ದಾರೆ.
ನಟಿ ಪವಿತ್ರಾ ಲೋಕೇಶ್ (Pavitra Lokesh) ಮತ್ತು ತೆಲುಗು ನಟ ನರೇಶ್ ಬಾಬು (Naresh Babu) ಮದುವೆ ವಿಚಾರ ಮತ್ತೊಂದು ತಿರುವು ಪಡೆದುಕೊಂಡಿದೆ. ನರೇಶ್ ಬಾಬು ಪತ್ನಿ ರಮ್ಯಾ ಇತ್ತೀಚಿಗಷ್ಟೆ, ಪವಿತ್ರಾ ಲೋಕೇಶ್ ಮತ್ತು ನರೇಶ್ ಬಾಬು ವಿರುದ್ಧ ಆರೋಪ ಮಾಡಿದ ಬೆನ್ನಲ್ಲೇ ಇದೀಗ ಪವಿತ್ರಾ ಲೋಕೇಶ್ ಮಾಧ್ಯಮದ ಜೊತೆ ಹಾಜರಾಗಿದ್ದಾರೆ. ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಪವಿತ್ರಾ ಲೋಕೇಶ್, ರಮ್ಯಾ ವಿರುದ್ಧ ಕಿಡಿಕಾರಿದ್ದಾರೆ. ರಮ್ಯಾ ತೆಲುಗಿನಲ್ಲಿ ಕೂತು ಮಾತನಾಡಬೇಕು, ಇಲ್ಲಿ ಯಾಕೆ ಬಂದು ಮಾತನಾಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ನರೇಶ್ ಪತ್ನಿ ರಮ್ಯಾ ಅವರನ್ನು ಭೇಟಿ ಮಾಡಿದ್ದೀರಾ ಎಂದು ಪ್ರಶ್ನೆ ಮಾಡಿದ್ದಕ್ಕೆ ಪವಿತ್ರಾ ಲೋಕೇಶ್ ನಾನ್ಯಾಕೆ ಭೇಟಿ ಮಾಡಬೇಕು. ಅವರೇನು ಕ್ವೀನ್ ಎಲಿಜೆಬೆತ್ ಹಾ, ದೀಪಿಕಾ ಪಡುಕೋಣೆನಾ ಅಥವಾ ಹೇಮಮಾಲಿನಿನಾ ಎಂದು ಕೇಳಿದ್ದಾರೆ. ಅವರು ಯಾರು ಅಂತನೆ ನನಗೆ ಗೊತ್ತಿಲ್ಲ ಎಂದು ಪವಿತ್ರಾ ಲೋಕೇಶ್ ಡಿಕಿ ಕಾರಿದ್ದಾರೆ.