
ಇಲ್ಲಿದೆ 'ನಿಮಗೊಂದು ಸಿಹಿ ಸುದ್ದಿ' ಯುವಕನೊಬ್ಬ ಗರ್ಭ ಧರಿಸೋ ಕಥೆಯ ಚಿತ್ರ!
ಇಲ್ಲಿದೆ 'ನಿಮಗೊಂದು ಸಿಹಿ ಸುದ್ದಿ' ನಿಮಗೊಂದು ಸಿಹಿ ಸುದ್ದಿ ಈ ವರ್ಷದ ಅಚ್ಚರಿ ಮತ್ತು ವಿಶೇಷ ಈ ಸಿನಿಮಾ. ಬಿಡುಗಡೆಗೆ ಸಿದ್ದವಿರೋ ಈ ಚಿತ್ರದ ಮೋಷನ್ ಪೋಸ್ಟರ್ ಸಂಕ್ರಾಂತಿ ಹಬ್ಬದ ಪ್ರಯುಕ್ತ ರಿಲೀಸ್ ಆಗಿದೆ.
ಇಲ್ಲಿದೆ 'ನಿಮಗೊಂದು ಸಿಹಿ ಸುದ್ದಿ' ನಿಮಗೊಂದು ಸಿಹಿ ಸುದ್ದಿ ಈ ವರ್ಷದ ಅಚ್ಚರಿ ಮತ್ತು ವಿಶೇಷ ಈ ಸಿನಿಮಾ. ಬಿಡುಗಡೆಗೆ ಸಿದ್ದವಿರೋ ಈ ಚಿತ್ರದ ಮೋಷನ್ ಪೋಸ್ಟರ್ ಸಂಕ್ರಾಂತಿ ಹಬ್ಬದ ಪ್ರಯುಕ್ತ ರಿಲೀಸ್ ಆಗಿದೆ. ಯುವಕನೊಬ್ಬ ಗರ್ಭಧರಿಸಿ ಜಗತ್ತಿನಲ್ಲಿ ಅದ್ಭುತ ಅಚ್ಚರಿ ಹುಟ್ಟಿಸೋ ವಿಚಾರದ ಸುತ್ತಾ ಹೆಣೆದಿರೋ ಕಥೆಯ ಸಿನಿಮಾ ಇದು. ಈ ಚಿತ್ರಕ್ಕೆ ರಘು ಭಟ್ ನಟನೆ ಜೊತೆ ನಿರ್ದೇಶನ ಮಾಡಿದ್ದಾರೆ. ಹರೀಶ್ ಎನ್ ಗೌಡ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರಘು ಭಟ್ ಗೆ ಜೊತೆಯಾಗಿ ಕಾವ್ಯ ಶೆಟ್ಟಿ, ಹರಿಣಿ ಶ್ರೀಕಾಂತ್, ಪದ್ಮಿನಿ ನರಸಿಂಹನ್, ಸುಜಯ್ ಶಾಸ್ತ್ರಿ, ಶಿಲ್ಪಾ ಶೈಲೇಶ್ ಮತ್ತು ಪ್ರಜ್ವಲ್ ಸೇರಿದಂತೆ ಪ್ರತಿಭಾವಂತ ತಾರಾಬಳಗವಿದೆ.
ವೆಂಕಟೇಶಾಯ ನಮಃ ಟೀಸರ್ ಬಿಡುಗಡೆ: ಸ್ಯಾಂಡಲ್ವುಡ್ನ ಕಲಾಕರ್ ಅಂತಲೇ ಫೇಮಸ್ ಆಗಿರೋ ನಟ, ನಿರ್ದೇಶಕ ಹರೀಶ್ ರಾಜ್ ಸಾರಥ್ಯದಲ್ಲಿ "ವೆಂಕಟೇಶಾಯ ನಮಃ" ಸಿನಿಮಾ ಸಿದ್ಧವಾಗಿದೆ. ಇದೀಗ ಈ ಸಿನಿಮಾದ ಟೀಸರ್ ರಿಲೀಸ್ ಅಗಿದೆ. ಸಿನಿಮಾದಲ್ಲಿ ಹಿರಿಯ ನಟಿ ಉಮಾಶ್ರೀ, ಅಶೋಕ್, ಉಮೇಶ್, ತಬಲಾ ನಾಣಿ ನಟಿಸಿದ್ದು, ಈ ಚಿತ್ರದಲ್ಲಿ ಎಂಟು ಜನ ಹೀರೋಯಿನ್ ಗಳಿದ್ದಾರೆ. ಚಿತಕ್ಕೆ ಪಿ. ಜನಾರ್ದನ ಬಂಡವಾಳ ಹೂಡಿದ್ದಾರೆ.