ನಾಲ್ವರಿಗೆ ಪುನೀತ್ ದೃಷ್ಟಿ.. ಅಭಿಮಾನಿಗಳಲ್ಲಿ ಶಿವಣ್ಣ ಮನವಿ

* ಅಗಲಿದ ಪುನೀತ್ ರಾಜ್‌ ಕುಮಾರ್ ನೆನಪು
* ತಮ್ಮನ ನೆನೆದು ಶಿವಣ್ಣ-ರಾಘಣ್ಣ ಭಾವುಕ
*ಪುನೀತ್ ನೋಡಲು ಬರುತ್ತಿರುವ ಅಭಿಮಾನಿಗಳ ಸಾಲಿಗೆ ಕೊನೆ ಇಲ್ಲ
* ಪುನೀತ್‌ ಕಣ್ಣಿಂದ 4 ಮಂದಿಗೆ ದೃಷ್ಟಿ.. ಸಾವಲ್ಲೂ ಸಾರ್ಥಕತೆ

First Published Nov 1, 2021, 11:31 PM IST | Last Updated Nov 1, 2021, 11:34 PM IST

ಬೆಂಗಳೂರು(ನ. 01)  ಪುನೀತ್ ರಾಜ್ ಕುಮಾರ್(Puneeth Rajkumar) ನಿಧನದಿಂದ (Heart Attack) ದೊಡ್ಡದೊಂದು ಶೂನ್ಯ ಆವರಿಸಿದೆ.  ಅಪ್ಪ ಅಮ್ಮನ ಕಳೆದುಕೊಂಡಾಗಲೂ ಇಷ್ಟು ನೋವು ಆಗಿರಲಿಲ್ಲ. ಮನಸಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಮಾತನಾಡಿ ಮಾತನಾಡಿ  ನಾವೆಲ್ಲ  ನೋವು ಕಳೆಯಬೇಕು ಎಂದು ರಾಘವೇಂದ್ರ ರಾಜ್ ಕುಮಾರ್ ಹೇಳಿದರು. ಅಭಿಮಾನಿಗಳು ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡರು. 

ಎಂಟು ವರ್ಷದವನಿದ್ದಾಗ ಪುನೀತ್ ಕೊಟ್ಟ ಸಂದರ್ಶನ

ಪುನೀತ್ ಅಂತ್ಯ ಸಂಸ್ಕಾರ ನೆರವೇರಿಸಿದ್ದರೂ ಅಭಿಮಾನಿಗಳು ಮಾತ್ರ ಕಂಠೀರವ ಸ್ಟೇಡಿಯಂ  ಕಡೆ ಹರಿದು ಬರುತ್ತಿದ್ದಾರೆ. ಪೊಲೀಸರು(Karnataka Police) ಅಭಿಮಾನಿಗಳನ್ನು ವಾಪಸ್ ಕಳಿಸುವ ಕೆಲಸ ಮಾಡುತ್ತಿದ್ದಾರೆ.  ಸಾವಿನಲ್ಲಿಯೂ ಸಾರ್ಥಕತೆ ಮೆರೆದ ಪುನೀತ್ ರಾಜ್ ಕುಮಾರ್ ಅವರ ಕಣ್ಣುಗಳು ನಾಲ್ಕು ಜನರಿಗೆ ಹೊಸ ಲೋಕ ತೋರಿಸಿದೆ.   ಪುನೀತ್ ಅಭಿಮಾಣಿಗಳು ಸಹ ನೇತ್ರದಾನದಕ್ಕೆ ಮುಂದೆ ಬರುತ್ತಿದ್ದಾರೆ