'ಕಾಣೆಯಾದವರ ಬಗ್ಗೆ ಪ್ರಕಟಣೆ'ಗೆ ಮುನಿಸು ಮರೆತು ಒಂದಾದ್ರು ಅಲೋಕ್-ಚಂದನ್ ಶೆಟ್ಟಿ.!

 ರ್ಯಾಪ್ ಹಾಡುಗಳ (Rap Song) ಸಕಲ ಸಂಗೀತ ಪ್ರಿಯರಿಗೆ ಇಷ್ಟವಾಗಿರೋ ಚಂದನ್  (Chandan shetty) ಹಾಗೂ ಆಲ್ ಒಕೆ (All Ok)  ವಿಶಿಷ್ಠ ಟೈಟಲ್ನಿಂದ ಗಮನ ಸೇಳೆದಿರೋ ಕಾಣೆಯಾದವರ ಬಗ್ಗೆ ಪ್ರಕಟಣೆ ಸಿನಿಮಾದ ಹಾಡೊಂದನ್ನ ಹಾಡೋಕೆ ಒಂದಾಗಿದ್ದಾರೆ.

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್ ಸಂಗೀತ ಲೋಕದಲ್ಲಿ ರ್ಯಾಪ್ ಹಾಡುಗಳ (Rap Song) ಬಗ್ಗೆ ಹುಚ್ಚು ಹಚ್ಚಿಸಿದವರಲ್ಲಿ ಚಂದನ್ ಶೆಟ್ಟಿ ಹಾಗು ಆಲ್ ಓಕೆ ಖ್ಯಾತಿಯ ಅಲೋಕ್ ಕುಮಾರ್ ಪ್ರಮುಖರು. ಒಂದ್ ಕಾಲದಲ್ಲಿ ಇಬ್ಬರು ಒಟ್ಟಿಗೆ ಕನ್ನಡ ರ್ಯಾಪ್ ಸಾಂಗ್‌ಗಳನ್ನು ಸೃಷ್ಟಿಸಲು ಮುಂದಾಗಿದ್ರು. ಆದ್ರೆ ಇವರಿಬ್ಬರ ಮೇಲೆ ಅದ್ಯಾರ ಕಣ್ಣು ಬಿದ್ದಿತ್ತೋ ಏನೋ ಚಂದನ್ ಆಲ್ ಒಕೆ ಮಧ್ಯೆ ಎಲ್ಲವೂ ಸರಿ ಇಲ್ಲದಂತಾಗಿತ್ತು. ಇಬ್ಬರ ಮಧ್ಯೆ ನಾನಾ ನೀನಾ ಅನ್ನುವಷ್ಟು ಜಗಳವೂ ಆಗಿತ್ತು. ತಮ್ಮ ಹಾಡುಗಳ ಮೂಲಕದೇ ಒಬ್ಬರಿಗೊಬ್ಬರು ಕಾಲೆಳೆದುಕೊಂಡಿದ್ದೂ ಇದೆ. ಆದ್ರೆ ಈಗ ಈ ರ್ಯಾಪ್ ಕಿಂಗ್ಗಳು ಮತ್ತೆ ಒಂದಾಗಿದ್ದಾರೆ. ಒಂದಾಗಿದ್ದಷ್ಟೆ ಅಲ್ಲ ಇಬ್ಬರು ಸೇರಿ ಕಾಣೆಯಾದವರ ಬಗ್ಗೆ ಪ್ರಕಟಣೆ ಮಾಡುತ್ತಿದ್ದಾರೆ. 

ಹೋದಲ್ಲಿ ಬಂದಲ್ಲಿ ಶ್ರೀನಿಧಿ ಶೆಟ್ಟಿಗೆ ರಮಿಕಾ ಸೇನ್ ಕಾಟ, ಡಾಮಿನೇಟ್ ಆಗ್ತಿದ್ದಾರಾ ಕೆಜಿಎಫ್ ಕ್ವೀನ್..?

ರ್ಯಾಪ್ ಹಾಡುಗಳ (Rap Song) ಸಕಲ ಸಂಗೀತ ಪ್ರಿಯರಿಗೆ ಇಷ್ಟವಾಗಿರೋ ಚಂದನ್ (Chandan shetty) ಹಾಗೂ ಆಲ್ ಒಕೆ (All Ok) ವಿಶಿಷ್ಠ ಟೈಟಲ್ನಿಂದ ಗಮನ ಸೇಳೆದಿರೋ ಕಾಣೆಯಾದವರ ಬಗ್ಗೆ ಪ್ರಕಟಣೆ ಸಿನಿಮಾದ ಹಾಡೊಂದನ್ನ ಹಾಡೋಕೆ ಒಂದಾಗಿದ್ದಾರೆ.

ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಲ್ಲಿ ಕ್ರಾಂತಿ ಕುಮಾರ್ ಸಾಹಿತ್ಯ ಸಿರಿಯಲ್ಲಿ ಬಂದಿರೋ ಪಾರ್ಟಿ ಸಾಂಗ್ ಅನ್ನ ಆಲ್ ಓಕೆ ಮತ್ತು ಚಂದನ್ ಶೆಟ್ಟಿ ಇಬ್ಬರು ಒಟ್ಟಿಗೆ ಸೇರಿ ಱಪ್ ಟಚ್ ಕೊಟ್ಟು ಹಾಡಿದ್ದಾರೆ. ಈ ಮೂಲಕ ಇಷ್ಟು ದಿನ ಇಬ್ಬರ ಮಧ್ಯೆ ಇದ್ದ ಮುನಿಸು ದೂರಾಗಿದೆ.

ಸಿನಿಮಾದಲ್ಲಿ ಮಾತ್ರ ಅಲ್ಲ ಜಾಹಿರಾತಿನಲ್ಲೂ ರಶ್ಮಿಕಾ ಮಂದಣ್ಣ ನಂ 1...!

ಕಾಣೆಯಾದವರ ಬಗ್ಗೆ ಪ್ರಕಟಣೆ ಸಿನಿಮಾವನ್ನ ಱಂಬೋ 2 , ಕೃಷ್ಣ ರುಕ್ಕು ಸಿನಿಮಾ ಖ್ಯಾತಿಯ ಅನಿಲ್ ಕುಮಾರ್ ನಿರ್ದೇಶನದ ಜೊತೆಗೆ ಫಸ್ಟ್ ಟೈಮ್ ನಾಯಕನಾಗಿ ನಟಿಸಿದ್ದಾರೆ. ರಂಗಾಯಣ ರಘು ,ಆರ್ಮುಗಂ ರವಿಶಂಕರ್, ತಬಲ ನಾಣಿ ಹಾಗೂ ಚಿಕ್ಕಣ್ಣ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ವೆನಿಲಾ ಐಸ್ ಕ್ರೀಮ್ ಮೇಲೆ ಕಾಣೋ ಚರಿಯಂತೆ ಈ ಸಿನಿಮಾದಲ್ಲಿ ಚುಟು ಚುಟು ಬೆಡಗಿ, ಪಠಾಕಿ ಪೋರಿ ಆಶಿಕಾ ರಂಗನಾಥ್ ಅಭಿನಯಿಸಿದ್ದಾರೆ. ಈಗ ಅಲೋಕ್ ಹಾಗು ಚಂದನ್ ಹಾಡಿನಲ್ಲಿ ಒಂದಾಗಿದ್ದು ಇವ್ರಿಬ್ರ ಕೆಮಿಸ್ಟ್ರಿಯ ಕಂಠಸಿರಿ ಭರ್ಜರಿಯಾಗಿದೆ. 

Related Video