Asianet Suvarna News Asianet Suvarna News

ನೇತಾಜಿಯನ್ನು ಯುವ ಜನಾಂಗ ನೇಪತ್ಯಕ್ಕೆ ತಳ್ಳಿದ್ದಾರೆ ಅನ್ನಿಸುತ್ತೆ: ಐಪಿಎಸ್ ಅಧಿಕಾರಿ ರೂಪ ಮೌದ್ಗಿಲ್

ನೇತಾಜಿ ಸುಭಾಷ್ ಚಂದ್ರ ಬೋಸ್ ಎಲ್ಲರಿಗೂ ಮಾರ್ಗದರ್ಶಿ ಎಂದು ಐಪಿಎಸ್ ಅಧಿಕಾರಿ ರೂಪ ಮೌದ್ಗಿಲ್  ಹೇಳಿದರು.
 

ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡ್ತೇನೆ ಅಂತ ಹೇಳಿದವರು ಸುಭಾಷ್ ಚಂದ್ರ ಬೋಸ್ ಎಂದು ಐಪಿಎಸ್ ಅಧಿಕಾರಿ ರೂಪ ಮೌದ್ಗಿಲ್ ಹೇಳಿದರು. ನೇತಾಜಿ ಅವರನ್ನ ನಮ್ಮ ಯುವ ಜನಾಂಗ ನೇಪತ್ಯಕ್ಕೆ ತಳ್ಳಿದ್ದಾರೆ ಅನ್ನಿಸುತ್ತೆ. ಮಾತಿನಿಂದ ಏನೂ ಆಗಲ್ಲ, ಆ್ಯಕ್ಷನ್ ನಿಂದ ಆಗುತ್ತೆ ಅಂದವರು ಅವರು ಎಂದು ತಿಳಿಸಿದರು. ವಿಚಾರಗಳು ವಿಚಾರವಾಗಿ ಉಳಿಬಾರದು ಅದು ಆ್ಯಕ್ಷನ್ ಆಗಿ ಹೊರ ಬರಬೇಕು. ಅದನ್ನ ನೇತಾಜಿ ಮಾಡಿ ತೋರಿಸಿದ್ದಾರೆ. ರಾಷ್ಟ್ರದ ಯಶಸ್ಸಿಗೆ ನಾವು ಎಲ್ಲರೂ ಕಾರ್ಯೋನ್ಮುಖರಾಗಬೇಕು. ನಮ್ಮ ಸಮಾಜಕ್ಕೆ ನಮ್ಮ ಕೊಡುಗೆ ಏನು ಅಂತ ಒಂದು ಚೂರು ಯೋಚಿಸಿ ಎಂದರು. ರೂಪ ಅಯ್ಯರ್ ನೇತಾಜಿ ಅವರು ಕಟ್ಟಿದ ಮಹಿಳಾ ಸೈನ್ಯದ ಸಿನಿಮಾ ಮಾಡಿದ್ದಾರೆ. ನೇತಾಜಿ ಜನ್ಮದಿನದಲ್ಲಿ ಆ ಸಿ‌ನಿಮಾದ ಟೀಸರ್ ರಿಲೀಸ್ ಆಗಿದೆ. ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು.

Video Top Stories