ಭಾರತದಲ್ಲಿ ನೇತಾಜಿ ಹುಟ್ಟಿದ್ದು ನಮ್ಮ ಪುಣ್ಯ: ಬಸವರಾಜ ಹೊರಟ್ಟಿ

ಹೆಣ್ಣು ಮಕ್ಕಳಿಗೆ ಇಂದು ಸ್ಥಾನಮಾನ ಸಿಗಲು ನೇತಾಜಿ ಕಾರಣ, ಅಂತಹ ಮಹಾನ್‌ ವ್ಯಕ್ತಿ ಭಾರತದಲ್ಲಿ ಹುಟ್ಟಿದ್ದು ನಮ್ಮ ಪುಣ್ಯ ಎಂದು ಬಸವರಾಜ ಹೊರಟ್ಟಿ ಹೇಳಿದರು.
 

Share this Video
  • FB
  • Linkdin
  • Whatsapp

ಅವತ್ತಿನ ಕಾಲದಲ್ಲಿ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರಂತಹ ಮಹಾನ್‌ ನಾಯಕ ಹುಟ್ಟದಿದ್ದರೆ ಇವತ್ತು ನಮ್ಮ ದೇಶ ಯಾವ ಪರಿಸ್ಥಿತಿಯಲ್ಲಿ ಇರುತಿತ್ತು ಹೇಳಲು ಬರುತ್ತಿರಲಿಲ್ಲ ಎಂದು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು. ನೇತಾಜಿ ಸುಭಾಷ್ ಚಂದ್ರ ಬೋಸ್ 126 ಜನ್ಮದಿನಾಚರಣೆ ಹಿನ್ನೆಲೆ, ನೀರಾ ಆರ್ಯ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 
ಮಹಾನ್‌ ನಾಯಕರು ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ದೇಶ ಮೊದಲು ನಂತರ ನಾವು ಎನ್ನುವಂತ ಭಾವನೆಯನ್ನು ಇಟ್ಟುಕೊಂಡು ಇಡೀ ಭಾರತ ದೇಶದಲ್ಲಿ ಸಂಚಲವನ್ನು ಮೂಡಿಸುವಂತಹ ಕೆಲಸವನ್ನು ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಮಾಡಿದ್ದಾರೆ ಎಂದು ಬಸವರಾಜ ಹೊರಟ್ಟಿ ಹೇಳಿದರು. 

Related Video