
ಪಬ್ಬಲ್ಲಿ ಸತೀಶ್ ಗ್ಯಾಂಗ್ ಪಾರ್ಟಿ ಮಸ್ತಿ! 'ಮ್ಯಾಟ್ನಿ'ಗಾಗಿ ಗೆಳೆಯರ ಭರ್ಜರಿ ಪಾರ್ಟಿ! ರಚಿತಾ-ಸತೀಶ್ ಮಾಡ್ತಾರಾ ಮೋಡಿ?
ನೀನಾಸಂ ಸತೀಶ್ ನಟನೆಯ ಮ್ಯಾಟ್ನಿ ಚಿತ್ರದ ಶೂಟಿಂಗ್ ಭರದಿಂದ ಸಾಗಿದ್ದು, ಪಾರ್ಟಿ ಸಾಂಗ್ ಶೂಟ್ ಆಗಿದೆ. ಹೇಗಿತ್ತು ಸೆಟ್? ಏನು ಹೇಳುತ್ತೆ ಚಿತ್ರ ತಂಡ?
ಕಲರ್ಫುಲ್ ಲೈಟು, ಮೈಲ್ಡ್ ಕಿಕ್ ಏರಿಸೋ ವೆದರ್, ಅರೆ ಕತ್ತಲೆಯಲ್ಲಿ ಹುಣ್ಣಿಮೆ ಚಂದಿರನಂತೆ ಕಣ್ಣಿಗೆ ಬೀಳೋ ಹಾಟ್ ಹಾಟ್ ಹುಡುಗಿಯರು. ಇವರ ಮಧ್ಯೆ ಕೈಯಲ್ಲಿ ಪೆಗ್ ಹಿಡ್ಕೊಂಡು ಕೂತಲ್ಲೇ ಡಾನ್ಸ್ ಮಾಡ್ತಿರೋ ಅಭಿನಯ ಚತುರ ನೀನಾಸಂ ಸತೀಶ್, ನಾಗಭೂಷಣ್, ಶಿವರಾಜ್ ಕೆಆರ್ ಪೇಟೆ, ಪೂರ್ಣ ಚಂದ್ರ ಮೈಸೂರು. ಇದೆಲ್ಲಾ ಆಗಿದ್ದು ಮ್ಯಾಟ್ನಿ ಸಿನಿಮಾದ ಪಾರ್ಟಿ ಸಾಂಗ್ ಶೂಟಿಂಗ್ ಸೆಟ್‌ನಲ್ಲಿ. ಮ್ಯಾಟ್ನಿ ಫನ್, ಮಜಾ, ಓನ್ಲಿ ಎಂಟರ್ಟೈನ್ಮೆಂಟ್ ಸಿನಮಾ. ಇಲ್ಲಿ ನೀಸಾಸಂ ಸತೀಶ್‌ಗೆ ಡಿಂಪಲ್ ಕ್ವೀನ್ ರಚಿತಾ ರಾಮ್, ಅದಿತಿ ಪ್ರಭುದೇವ ಹೀರೋಯಿನ್ಸ್. ಇದ್ರ ಜತೆ ನಾಗಭೂಷಣ್-ಶಿವರಾಜ್ ಕೆಆರ್ ಪೇಟೆ ಮಸ್ತ್ ಕಾಮಿಡಿ ಕಿಕ್ ಇರಲಿದೆ. ಕೋರ ಮಂಗಲದ ಪಬ್‌ನಲ್ಲಿ ಮ್ಯಾಟ್ನಿಯ ಪಾರ್ಟಿ ಸಾಂಗ್ ಚಿತ್ರೀಕರಣವಾಗಿದೆ.
ಪಾರ್ವತಿ ಎಸ್ ಗೌಡ ನಿರ್ಮಾಣದ ಈ ಸಿನಿಮಾಗೆ ಮನೋಹರ್ ಕಂಪಲಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಮ್ಯಾಟ್ನಿ ಸಿನಿಮಾದ ಸಂಜೆ ಮೇಲೆ ಸುಮ್ನೆ ಹಂಗೆ ಫೋನು ಮಾಡ್ಲಾ ನಿಂಗೆ ಹಾಡು ಈಗಾಗ್ಲೆ ಹಿಟ್ ಆಗಿದ್ದು, ಅಯೋಗ್ಯ ಸಿನಿಮಾದಲ್ಲಿ ಜೊತೆಯಾಗಿದ್ದ ಸತೀಶ್ ನೀನಾಸಂ ರಚಿತಾರಾಮ್ ಜೋಡಿಯನ್ನು ಮತ್ತೆ ಬಿಗ್ ಸ್ಕ್ರೀನ್ ಮೇಲೆ ನೋಡೋ ಹಾಗೆ ಮಾಡಿದೆ. ಸದ್ಯದಲ್ಲೇ ಮ್ಯಾಟ್ನಿ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಲಿದೆ.