ದೈವ ನರ್ತಕರ ಜತೆ 'ಕಾಂತಾರ' ವೀಕ್ಷಿಸಿದ ಸಚಿವ ಕೋಟಾ ಶ್ರೀನಿವಾಸ್‌ ಪೂಜಾರಿ

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾಗೆ ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಾಕ್ಸ್ ಆಫೀಸಿನಲ್ಲೂ ಭರ್ಜರಿ ಕಮಾಯಿ ಮಾಡಿದೆ. ಎಲ್ಲಾ ಭಾಷೆಯಿಂದನೂ ಮೆಚ್ಚುಗೆ ಮಹಾಪೂರ ಬರುತ್ತಿದೆ. 

Share this Video
  • FB
  • Linkdin
  • Whatsapp

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾಗೆ ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಾಕ್ಸ್ ಆಫೀಸಿನಲ್ಲೂ ಭರ್ಜರಿ ಕಮಾಯಿ ಮಾಡಿದೆ. ಎಲ್ಲಾ ಭಾಷೆಯಿಂದನೂ ಮೆಚ್ಚುಗೆ ಮಹಾಪೂರ ಬರುತ್ತಿದೆ. ಪ್ರೇಕ್ಷಕರು ಮಾತ್ರವಲ್ಲದೇ ಸಿನಿ ಗಣ್ಯರು ಸಹ ಕಾಂತಾರ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಬೇರೆ ಬೇರೆ ಭಾಷೆಯ ಸಿನಿ ಗಣ್ಯರು ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನಕ್ಕೆ ಫಿದಾ ಆಗಿದ್ದಾರೆ. ಇದೀಗ ದೈವ ನರ್ತಕರ ಜತೆ ಸಚಿವ ಕೋಟಾ ಶ್ರೀನಿವಾಸ್‌ ಪೂಜಾರಿ ಕಾಂತಾರ ಸಿನಿಮಾ ವೀಕ್ಷಿಸಿದ್ದಾರೆ. ಹೌದು! ಕೋಟೇಶ್ವರ್ ಭಾರತ್‌ ಸಿನಿಮಾಸ್‌ನಲ್ಲಿ ಸಚಿವರ ಜೊತೆ ಹಾಗೂ 50 ಮಂದಿ ದೈವ ನರ್ತಕರ ಜತೆ ಶ್ರೀನಿವಾಸ್‌ ಪೂಜಾರಿ ಸಿನಿಮಾ ವೀಕ್ಷಿಸಿದ್ದಾರೆ. ಇನ್ನು ಚಿತ್ರದಲ್ಲಿ ರಿಷಬ್ ಶೆಟ್ಟಿ ಚಿತ್ರದಲ್ಲಿ ದೈವ ನರ್ತಕನ ಪಾತ್ರವನ್ನು ನಿರ್ವಹಿಸಿದ್ದಾರೆ. ಹೀಗಾಗಿ ದೈವ ನರ್ತಕರಿಗೆ ಸಚಿವ ಕೋಟಾ ಪ್ರದರ್ಶನವನ್ನು ಏರ್ಪಡಿಸಿದರು. ಇನ್ನು ಸಿನಿಮಾ ನೋಡಿ ಸಚಿವರು ಖುಷಿಪಟ್ಟಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

Related Video