Straight Hit Dhruva: ಅಜಿತ್ ಹನುಮಕ್ಕನವರ್ ಜೊತೆ ಮಾರ್ಟಿನ್ ಹೀರೋ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ!

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ‘ಮಾರ್ಟಿನ್’ ಸಿನಿಮಾದಲ್ಲಿ ನಟಿಸುತ್ತಿದ್ದು, ಚಿತ್ರಕ್ಕೆ ಎಪಿ ಅರ್ಜುನ್ ಆಕ್ಷನ್ ಕಟ್ ಹೇಳಿದ್ದಾರೆ. ಅಕ್ಟೋಬರ್ 11ರಂದು ಸಿನಿಮಾ ತೆರೆಮೇಲೆ ಬರುತ್ತಿದೆ. ವಿಶೇಷವಾಗಿ ಚಿತ್ರದ ಹಾಡುಗಳಿಗೆ ಮಣಿ ಶರ್ಮಾ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

Share this Video
  • FB
  • Linkdin
  • Whatsapp

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ‘ಮಾರ್ಟಿನ್’ ಸಿನಿಮಾದಲ್ಲಿ ನಟಿಸುತ್ತಿದ್ದು, ಚಿತ್ರಕ್ಕೆ ಎಪಿ ಅರ್ಜುನ್ ಆಕ್ಷನ್ ಕಟ್ ಹೇಳಿದ್ದಾರೆ. ಅಕ್ಟೋಬರ್ 11ರಂದು ಸಿನಿಮಾ ತೆರೆಮೇಲೆ ಬರುತ್ತಿದೆ. ವಿಶೇಷವಾಗಿ ಚಿತ್ರದ ಹಾಡುಗಳಿಗೆ ಮಣಿ ಶರ್ಮಾ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ರವಿ ಬಸ್ರೂರು ಅವರು ಹಿನ್ನೆಲೆ ಸಂಗೀತ ನೀಡಿದ್ದು, ಸಿನಿಮಾ ಸಖತ್ ಮಾಸ್ ಆಗಿರಲಿದೆ ಎಂದು ಎಲ್ಲರೂ ನಿರೀಕ್ಷಿಸುತ್ತಿದ್ದಾರೆ. ಈ ಚಿತ್ರದ ಕೆಲಸಗಳು ಕಾರಣಾಂತರಗಳಿಂದ ವಿಳಂಬ ಆದವು. ಈಗ ಎಲ್ಲಾ ವಿಘ್ನಗಳನ್ನು ಮೀರಿ ಸಿನಿಮಾ ರಿಲೀಸ್ ಆಗುತ್ತಿದೆ. ಈ ಸಿನಿಮಾದ ಟ್ರೇಲರ್ ಕನ್ನಡ ಜೊತೆಗೆ ತೆಲುಗು, ತಮಿಳು, ಚೈನಿಸ್, ಕೊರಿಯನ್ ಸೇರಿ 13 ಭಾಷೆಗಳಲ್ಲಿ ಈ ಹಿಂದೆ ರಿಲೀಸ್ ಆಗಿತ್ತು ಅನ್ನೋದು ವಿಶೇಷ. ಈ ಚಿತ್ರವನ್ನು ಉದಯ್ ಮೆಹ್ತಾ ಅವರು ನಿರ್ಮಾಣ ಮಾಡಿದ್ದಾರೆ. ಈ ನಡುವೆ ಧ್ರುವ ಸರ್ಜಾ ಅವರು ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಅಜಿತ್ ಹನುಮಕ್ಕನವರ್ ಜೊತೆ ಚಿತ್ರದ ಬಗ್ಗೆ ಹಾಗೂ ತಮ್ಮ ವೈಯಕ್ತಿಕ ಜೀವನದ ತಮ್ಮ ಅನಿಸಿಕೆಯನ್ನು ಸ್ಟ್ರೈಟ್ ಹಿಟ್ ಧ್ರುವ ಎಂಬ ಕಾರ್ಯಕ್ರಮದಡಿ ಹಂಚಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗೆ ಕಂಪ್ಲಿಟ್ ವಿಡಿಯೋವನ್ನು ವೀಕ್ಷಿಸಿ.

Related Video