2023ರಲ್ಲಿ 'ಸ್ಯಾಂಡಲ್ ವುಡ್'ಗೆ ಹಬ್ಬ: ಯಾವ ಸಿನಿಮಾಗಳ ಮೇಲಿದೆ ನಿರೀಕ್ಷೆ?

2022 ಪೂರ್ಣಗೊಂಡಿದೆ. ಸ್ಯಾಂಡಲ್ ವುಡ್ ಗೆಲುವಿನ ಹರ್ಷೋದ್ಘಾರದಲ್ಲಿ ನ್ಯೂ ಈಯರ್ ಪಾರ್ಟಿಗೆ ಅಣಿಯಾಗುತ್ತಿದೆ.

Share this Video
  • FB
  • Linkdin
  • Whatsapp

ಕನ್ನಡ ಚಿತ್ರರಂಗದ ಪಾಲಿಗೆ 2023 ವರ್ಷ ಪೂರ್ತಿ ಹಬ್ಬವೇ ಆಗಿದೆ. ಸ್ಯಾಂಡಲ್ ವುಡ್ ಖ್ಯಾತಿ ವಿಶ್ವಾದ್ಯಂತ ಹಬ್ಬಿದೆ. ಪರಭಾಷಿಗರು ಕನ್ನಡ ಸಿನಿಮಾಗಳಿಗಾಗಿ ಕಾಯುವಂತೆ ಆಗಿದೆ. ಈ ಕಾರಣಕ್ಕೆ 2023ರಲ್ಲಿ ಬೆಳ್ಳಿತೆರೆ ಮೇಲೆ ನಿರೀಕ್ಷೆ ಬೆಟ್ಟದಷ್ಟಿದೆ. ಹಾಗಾದ್ರೆ ಈ ನಿರೀಕ್ಷೆಯನ್ನ ನಿಜ ಮಾಡೋ ಸಿನಿಮಾಗಳು ಯಾವುವು ಅಂತ ನೋಡೋದಾದ್ರೆ. ಆ ಲೀಸ್ಟ್'ನಲ್ಲಿ ಮೊದಲು ಕಣ್ಣಿಗೆ ಬೀಳೋದು ಕಬ್ಜ. ನಂತರ ಇದರ ಜೊತೆಗೆ ಧ್ರುವ ಸರ್ಜಾ ನಟಿಸಿರೋ ಮಾರ್ಟಿನ್ ಕೂಡ ಬೆಳ್ಳಿತೆರೆ ಬಾನಂಗಳದಲ್ಲಿ ಮಿಂಚು ಹರಿಸಲಿದೆ ಅಂತ ಹೇಳಲಾಗ್ತಿದೆ. ಜೊತೆಗೆ ರಾಜ್ ಬಿ ಶೆಟ್ಟಿಯ ಸ್ವಾತಿ ಮುತ್ತಿನ ಮಳೆ ಹನಿಯೇ, ದುನಿಯಾ ವಿಜಯ್ ನಟನೆಯ ಭೀಮ, ರಿಯಲ್ ಸ್ಟಾರ್ ಉಪ್ಪಿ ನಿರ್ದೇಶದನ ಯುಐ, ಅಭಿಶೇಕ್ ಅಂಬರೀಶ್ರ ಬ್ಯಾಡ್ ಮ್ಯಾನರ್ಸ್, ಡಾಲಿ ಧನಂಜಯ್ರ ಹೊಯ್ಸಳ, ರಕ್ಷಿತ್ ಶೆಟ್ಟಿ ನಟನೆಯ ಸಪ್ತ ಸಾಗರದಾಚೆ ಎಲ್ಲೋ, ಸಿನಿಮಾಗಳ ಮೇಲೆ ಕನ್ನಡಿಗರ ನಿರೀಕ್ಷೆ ಇದೆ.

ಗಾಂಧಿನಗರದಲ್ಲಿ ಗಾಸಿಪ್ ಹಬ್ಬ: 2022ರಲ್ಲಿ ಸ್ಯಾಂಡಲ್ ವುಡ್‌ನಲ್ಲಿ ಆಗಿ ...

Related Video