Mugilpete ಚಿತ್ರದ ಬಗ್ಗೆ ಮನುರಂಜನ್-ಕಯಾದು ಲೋಹರ್ ಎಕ್ಸ್‌ಕ್ಲೂಸಿವ್ ಮಾತುಗಳು!

ಮುಗಿಲ್​ಪೇಟೆ ಚಿತ್ರ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಈ ಬಗ್ಗೆ ಮನುರಂಜನ್, ನಾಯಕಿ ಕಯಾದು ಲೋಹರ್ ಹಾಗೂ ಚಿತ್ರದ ನಿರ್ದೇಶಕ ಭರತ್ ಎಸ್. ನಾವುಂದ ಸುವರ್ಣ ನ್ಯೂಸ್‌ಗೆ ಎಕ್ಸ್‌ಕ್ಲೂಸಿವ್ ಸಂದರ್ಶನ ಕೊಟ್ಟಿದ್ದಾರೆ. 

Share this Video
  • FB
  • Linkdin
  • Whatsapp

ಕ್ರೇಜಿಸ್ಟಾರ್ ವಿ.ರವಿಚಂದ್ರನ್ (V.Ravichandran) ಅವರ ಪುತ್ರ ಮನುರಂಜನ್ ರವಿಚಂದ್ರನ್ (Manuranjan Ravichandran) ಅಭಿನಯದ 'ಮುಗಿಲ್​ಪೇಟೆ' (Mugilpete) ಚಿತ್ರವು ತೆರೆಗೆ ಬರಲು ಸಜ್ಜಾಗಿದ್ದು, ನಾಳೆ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದೀಗ 'ಮುಗಿಲ್​ಪೇಟೆ' ಚಿತ್ರದ ಬಗ್ಗೆ ಮನುರಂಜನ್, ನಾಯಕಿ ಕಯಾದು ಲೋಹರ್ (Kayadu Lohar) ಹಾಗೂ ಚಿತ್ರದ ನಿರ್ದೇಶಕ ಭರತ್ ಎಸ್. ನಾವುಂದ (Bharath S Navunda) ಸುವರ್ಣ ನ್ಯೂಸ್‌ಗೆ ಎಕ್ಸ್‌ಕ್ಲೂಸಿವ್ ಸಂದರ್ಶನ ಕೊಟ್ಟಿದ್ದಾರೆ. 

'ಮುಗಿಲ್​ಪೇಟೆ' ಟ್ರೇಲರ್ ರಿಲೀಸ್: ನವೆಂಬರ್ 19ಕ್ಕೆ ಚಿತ್ರ ಬಿಡುಗಡೆ

ಚಿತ್ರದ ಟ್ರೇಲರ್, ಹಾಡುಗಳು, ನವೀರಾದ ಪ್ರೇಮಕಥೆ, ಕಚಗುಳಿಯಿಡುವ ಹಾಸ್ಯ ದೃಶ್ಯಗಳು ಸೇರಿದಂತೆ ತಮ್ಮ ಪಾತ್ರಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಕಯಾದು ಲೋಹರ್ ಅಪೂರ್ವ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮನುರಂಜನ್ ರಾಜನಾಗಿ ಅಭಿನಯಿಸಿದ್ದಾರೆ. ಮೋತಿ ಮೂವಿ ಮೇಕರ್ಸ್ ಲಾಂಛನದಲ್ಲಿ ರಕ್ಷಾ ವಿಜಯ್ ಕುಮಾರ್ ನಿರ್ಮಿಸಿರುವ ಈ ಚಿತ್ರದಲ್ಲಿ ಅವಿನಾಶ್, ತಾರಾ ಅನುರಾಧಾ, ಸಾಧುಕೋಕಿಲ, ರಂಗಾಯಣ ರಘು, ರಿಷಿ ಸೇರಿದಂತೆ ಹೆಸರಾಂತ ಕಲಾವಿದರು ನಟಿಸಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video