ಅಮ್ಮ ಕಂಡ ಕನಸು ಸಾಕಷ್ಟಿದೆ, ಬಾಕಿಯಿರುವ ಕೆಲಸ ಮಾಡುತ್ತೇನೆ: ವಿನೋದ್ ರಾಜ್
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಲೀಲಾವತಿ ಅವರ ಪಾರ್ಥಿವ ಶರೀರ ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು. ಈ ವೇಳೆ ಮೇರು ನಟಿಗೆ ಜನಪ್ರತಿನಿಧಿಗಳು ಅಂತಿಮ ನಮನ ಸಲ್ಲಿಸಲಿದ್ದಾರೆ.ಈ ವೇಳೆ ಕನ್ನಡ ಚಿತ್ರರಂಗದ ಹಲವು ಗಣ್ಯರು, ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಅಶೋಕ್, ಸರ್ಕಾರದ ಹಲವು ಸಚಿವರುಗಳು ಸಹ ಅಂತಿಮ ದರ್ಶನ ಪಡೆದರು.
ಮಹಾನ್ ನಟಿ ಧ್ರುವ ತಾರೆ ಲೀಲಾವತಿಯವರ ಪಾರ್ಥಿವ ಶರೀರವನ್ನು ನೆಲಮಂಗಲದ ಸೋಲದೇವನಹಳ್ಳಿಗೆ(Soladevanahalli) ಕೊಂಡೊಯ್ದು,ಸಕಲ ಸರ್ಕಾರಿ ವಿಧಿವಿಧಾನಗಳಂತೆ ಲೀಲಾವತಿಯವರ(Leelavathi) ತೋಟದಲ್ಲಿ ಅಂತಿಮ ವಿಧಿ ವಿಧಾನಗಳನ್ನು ಪೂರೈಸಿ ಅಂತಿಮ ಸಂಸ್ಕಾರ ಮಾಡಲಾಯಿತು. ಸೋಲದೇವನಹಳ್ಳಿಯಲ್ಲಿರುವ ಫಾರ್ಮ್‌ಹೌಸ್‌ನಲ್ಲಿ(FarmHouse) ಬಂಟರ ಸಂಪ್ರದಾಯದಂತೆ ಮಧ್ಯಾಹ್ನ ಅಂತಿಮ ಸಂಸ್ಕಾರ ನಡೆಯಿತು.ಈ ಸಂದರ್ಭದಲ್ಲಿ ಆಪ್ತರು, ಗಣ್ಯ,ಕುಟುಂಬದವರು ಅಭಿಮಾನಿಗಳು ಭಾಗಿ ಆಗಿದ್ದರು. ತಾಯಿಗೆ ಮಗನಾಗಿ ಅಲ್ಲ. ಮಗನೇ ತಾಯಿಯಂತೆ ಲೀಲಾವತಿಯವರನ್ನು ಆರೈಕೆ ಮಾಡಿದ್ದರು. ತಾಯಿಯನ್ನು ಕಳೆದುಕೊಂಡು ವಿನೋದ್ ರಾಜ್(Vinod Raj) ಅವರು ತೀವ್ರ ದುಃಖಕ್ಕೆ ಒಳಗಾಗಿದ್ದಾರೆ. ಅಮ್ಮ ಇಲ್ಲ ಎಂಬ ನೋವು ಅವರನ್ನು ಬಹುವಾಗಿ ಕಾಡುತ್ತಿದೆ. ಅಮ್ಮ ಕಂಡ ಕನಸನ್ನು ಈಡೇರಿಸುವ ಉದ್ದೇಶವನ್ನು ವಿನೋದ್ ಹೊಂದಿದ್ದಾರೆ. ಅಮ್ಮನ ಕನಸು ನನಸು ಮಾಡುತ್ತೇನೆ ಎಂದಿದ್ದಾರೆ ವಿನೋದ್ ರಾಜ್. ಹಿರಿಯ ನಟಿ ಲೀಲಾವತಿಯವರ ಅಗಲಿಕೆಗೆ ಇಡೀ ಕನ್ನಡ ಚಿತ್ರರಂಗ ಕನ್ನಡ ಜನತೆ ಶೋಕಸಾಗರದಲ್ಲಿ ಮುಳುಗಿದೆ. ದುಃಖದಲ್ಲೇ ಅಂತಿಮ ನಮನ ಸಲ್ಲಿಸಿದ್ಧಾರೆ.
ಇದನ್ನೂ ವೀಕ್ಷಿಸಿ: ಬೆಳ್ತಂಗಡಿಯ ಲೀಲಾವತಿ ಸ್ಟಾರ್ ನಟಿಯಾಗಿದ್ದು ಹೇಗೆ ? 86 ವರ್ಷದ ಸಾರ್ಥಕ ಬದುಕು..ತುಂಬಿದ ಕೊಡ !